Sunny Deol: 300 ಕೋಟಿ ಗಳಿಸಿದ 'ಗದರ್ 2' ನಟ ಸನ್ನಿ ಡಿಯೊಲ್ 56 ಕೋಟಿ ಆಸ್ತಿ ಹರಾಜು ಹಾಕಲಿದೆ ಬ್ಯಾಂಕ್!
ಇದೇ ಆಗಸ್ಟ್ ತಿಂಗಳ 11 ರಂದು ಬಿಡುಗಡೆಗೊಂಡ ಗದರ್ 2 ಚಿತ್ರದ ಮೂಲಕ ನಟ ಸನ್ನಿ ಡಿಯೋಲ್ ದೊಡ್ಡ ಮಟ್ಟದಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ. ಬಿಡುಗಡೆಯಾದ 9 ದಿನಗಳಿಗೆ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 300+ ಕೋಟಿ ನೆಟ್ ಕಲೆಕ್ಷನ್ ಮಾಡಿರುವ ಗದರ್ 2 ಈ ವರ್ಷ ಬಾಲಿವುಡ್ ಕಂಡ ಬೃಹತ್ ಹಿಟ್ ಸಿನಿಮಾಗಳ ಪಟ್ಟಿ ಸೇರಿದೆ.
ಹೀಗೆ ಗದರ್ 2 ಮೂಲಕ ಫೀನಿಕ್ಸ್‌ನಂತೆ ಎದ್ದು ನಿಂತಿರುವ ನಟ ಮತ್ತು ಹಾಲಿ ಬಿಜೆಪಿ ಸಂಸದ ಸನ್ನಿ ಡಿಯೋಲ್ ಅವರ ಒಡೆತನದ 56 ಕೋಟಿ ಮೌಲ್ಯದ ಆಸ್ತಿಯನ್ನು ಮಹಾರಾಷ್ಟ್ರ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ ಆಗಸ್ಟ್ 25 ರಂದು ಇ-ಹರಾಜು ಮಾಡಲು ಸಜ್ಜಾಗಿದೆ. ಸನ್ನಿ ಡಿಯೊಲ್ ಬ್ಯಾಂಕ್ ಬರೋಡಾದಲ್ಲಿ ಮಾಡಿದ್ದ 55.99 ಕೋಟಿ ರೂಪಾಯಿ ಸಾಲ ಹಾಗೂ ಮತ್ತು ಬಡ್ಡಿ ಮತ್ತು ದಂಡವನ್ನು ಪಾವತಿಸಲು 2022ರ ಡಿಸೆಂಬರ್ ತಿಂಗಳಿನಿಂದ ಸನ್ನಿ ಡಿಯೊಲ್ ವಿಫಲರಾಗಿರುವ ಕಾರಣ ಬ್ಯಾಂಕ್ ಈ ನಿರ್ಧಾರವನ್ನು ಕೈಗೊಂಡಿದೆ.

ಇನ್ನು ಮುಂಬೈನ ಮೆಗಾಪೊಲಿಸ್‌ನ ಟೋನಿ ಜುಹು ಪ್ರದೇಶದ ಗಾಂಧಿಗ್ರಾಮ್ ರಸ್ತೆಯಲ್ಲಿರುವ ಸನ್ನಿ ಬಂಗಲೆಯ ಆಸ್ತಿಯನ್ನು ಜಪ್ತಿ ಮಾಡಿರುವ ಬ್ಯಾಂಕ್, ಹರಾಜಿಗೆ 51.43 ಕೋಟಿ ರೂಪಾಯಿ ಮೀಸಲು ಬೆಲೆ ಮತ್ತು 5.14 ಕೋಟಿ ರೂಪಾಯಿ ಠೇವಣಿಯನ್ನು ಇರಿಸಿದೆ.
ಸನ್ನಿ ಬಂಗಲೆ ಮಾತ್ರವಲ್ಲದೇ ಅದರ ಜತೆಗೆ 599.44 ಚದರ ಮೀಟರ್ ವಿಸ್ತೀರ್ಣವಿರುವ ಸನ್ನಿ ಡಿಯೋಲ್ ಮತ್ತೊಂದು ಆಸ್ತಿ ಸನ್ನಿ ಸೌಂಡ್ಸ್ ಸಾಲಕ್ಕೆ ಕಾರ್ಪೊರೇಟ್ ಗ್ಯಾರಂಟರ್ ಆಗಿದೆ, ಆದರೆ ಸನ್ನಿ ಡಿಯೋಲ್ ಅವರ ತಂದೆ ನಟ-ರಾಜಕಾರಣಿ ಧರ್ಮೇಂದ್ರ ಅವರು ಸಾಲದ ವೈಯಕ್ತಿಕ ಜಾಮೀನುದಾರರಾಗಿದ್ದಾರೆ ಎಂದು ಹರಾಜು ಸೂಚನೆ ತಿಳಿಸಿದೆ.
ಪಿಟಿಐ ಸಂಪರ್ಕಿಸಿದಾಗ ಈ ಕುರಿತು ಬ್ಯಾಂಕ್ ವಕ್ತಾರರನ್ನು ಸಂಪರ್ಕಿಸಿದಾಗ ಈ ಅಂಶಗಳನ್ನು ಹೊರತುಪಡಿಸಿ ಹೆಚ್ಚಿನ ಯಾವುದೇ ಇತರ ವಿವರಗಳನ್ನು ನೀಡಿಲ್ಲ. ಹೌದು, ಸನ್ನಿ ಡಿಯೋಲ್ ಯಾವಾಗ ಮತ್ತು ಎಷ್ಟು ಸಾಲವನ್ನು ಪಡೆದರು, ಆಸ್ತಿಯ ಮೌಲ್ಯವು ಬಾಕಿ ಇರುವ ಮೊತ್ತಕ್ಕಿಂತ ಕಡಿಮೆ ಇರುವುದರಿಂದ ಸಾಲಕ್ಕೆ ಅದು ಹೊಂದಿರುವ ಇತರ ಗ್ಯಾರಂಟಿ ಏನು, ಸಾಲಗಾರನು ಬ್ಯಾಂಕಿಗೆ ಯಾವ ರೀತಿ ಬದ್ಧನಾಗಿರುತ್ತಾನೆ ಎಂಬ ಮಾಹಿತಿಗಳನ್ನು ಬ್ಯಾಂಕ್ ವಕ್ತಾರರು ಬಿಟ್ಟುಕೊಟ್ಟಿಲ್ಲ.
2002ರ ಸರ್ಫೇಸಿ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಸನ್ನಿ ಡಿಯೋಲ್ ತಮ್ಮ ಆಸ್ತಿಯ ಹರಾಜನ್ನು ನಡೆಸುವುದನ್ನು ತಡೆಯಲು ಈಗಲೂ ಬ್ಯಾಂಕ್‌ಗೆ ಬಾಕಿಯನ್ನು ತೆರವುಗೊಳಿಸುವ ಆಯ್ಕೆಯನ್ನು ಹೊಂದಿದ್ದಾರೆ ಎಂದು ಟೆಂಡರ್ ನೋಟೀಸ್ ಹೇಳಿದೆ.
ಇನ್ನು ಸನ್ನಿ ಡಿಯೋಲ್ ಅವರನ್ನು ಅಧಿಕೃತವಾಗಿ ಅಜಯ್ ಸಿಂಗ್ ಧರ್ಮೇಂದ್ರ ಡಿಯೋಲ್ ಎಂದು ಕರೆಯಲಾಗುತ್ತದೆ ಮತ್ತು 2019ರಿಂದ ಪಂಜಾಬ್‌ನಲ್ಲಿ ಆಡಳಿತಾರೂಢ ಬಿಜೆಪಿಯನ್ನು ಪ್ರತಿನಿಧಿಸುತ್ತಿದ್ದಾರೆ. ಸನ್ನಿ ಡಿಯೋಲ್ ಆಗಿನ ಕಾಂಗ್ರೆಸ್ ಸದಸ್ಯ ಸುನಿಲ್ ಜಾಕರ್ ಅವರನ್ನು ಸೋಲಿಸಿ ಭಾರಿ ಅಂತರದಿಂದ ಗೆದ್ದಿದ್ದರು.


Click it and Unblock the Notifications











