ಮದುವೆ ವಾರ್ಷಿಕೋತ್ಸವಕ್ಕೆ ಸನ್ನಿ ಲಿಯೋನ್ ಮಗಳು ಕೊಟ್ಟ ಸರ್ಪ್ರೈಸ್ ಏನು?

ಬಾಲಿವುಡ್ ನಟಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಪತಿ ಡೇನಿಯಲ್ ವೆಬರ್ ಜೊತೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಸನ್ನಿ ಒಂದಿಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸನ್ನಿ ಲಿಯೋನ್ ದಂಪತಿ ತಮ್ಮ 9ನೇ ಮದುವೆ ವಾರ್ಷಿಕೋತ್ಸವವನ್ನು ಖಾಸಗಿಯಾಗಿ ಮನೆಯಲ್ಲೇ ಆಚರಿಸಿಕೊಂಡಿದ್ದಾರೆ. ಸನ್ನಿಯ ಸಂತಸದ ಈ ದಿನಕ್ಕೆ ಮಗಳು ನಿಶಾ ತಯಾರಿಸಿದ ಸ್ಪೆಷಲ್ ಕೇಕ್ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತ್ತು. ಹೌದು, ಅಪ್ಪ ಅಮ್ಮನಿಗಾಗಿ ಮಗಳು ನಿಶಾ ವಿಶೇಷವಾದ ಕೇಕ್ ತಯಾರಿಸಿದ್ದರು. ಅದೇ ಕೇಕ್ ಕತ್ತರಿಸುವ ಮೂಲಕ ಸನ್ನಿ ಲಿಯೋನ್ ದಂಪತಿ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ.

2011ರಲ್ಲಿ ಸನ್ನಿ ಲಿಯೋನ್ ಡೇನಿಯಲ್ ಜೊತೆ ಹಸೆಮಣೆ ಏರಿದ್ದರು. ಈ ಸಂಭ್ರಮವನ್ನು ಸನ್ನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಜೊತೆಗೆ ಪತಿಯನ್ನು ಹಾಡಿ ಹೊಗಳಿದ್ದಾರೆ. "ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಡೇನಿಯಲ್. ನೀನು ನನ್ನ ಜೀವ. ಉತ್ತಮ ಗೆಳೆಯ ಹಾಗು ನಮ್ಮ ಮಕ್ಕಳಿಗೆ ಉತ್ತಮ ತಂದೆ ಕೂಡ ಆಗಿದ್ದೀಯಾ. ತಮ್ಮ ಮಗಳು ನಮಗಾಗಿ ಮಾಡಿದ ಕೇಕ್ ಬಹುಮುಖ್ಯವಾಗಿತ್ತು" ಎಂದು ಬರೆದುಕೊಂಡಿದ್ದಾರೆ.

2017 ರಲ್ಲಿ ಸನ್ನಿ ಲಿಯೋನ್ ದಂಪತಿ ನಿಶಾ ಎಂಬ ಹೆಣ್ಣು ಮಗುವನ್ನು ದತ್ತು ಪಡೆದಿದ್ದರು. ಬಾಡಿಗೆ ತಾಯಿ ಮೂಲಕ ಪಡೆದ ಇನ್ನು ಇಬ್ಬರು ಅವಳಿ ಗಂಡು ಮಕ್ಕಳಿದ್ದಾರೆ. ಸನ್ನಿ ಲಿಯೋನ್ ದಂಪತಿಗೆ ಒಟ್ಟು ಮೂವರು ಮಕ್ಕಳಿದ್ದಾರೆ.

Sunny Leone and Daniel Webers celebrate their Ninth wedding anniversary

ಸನ್ನಿ ಲಿಯೋನ್ ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ, ನಾಯಕಿಯಾಗಿ ಅಭಿನಯಿಸುವುದಕ್ಕಿಂತ ಹೆಚ್ಚಾಗಿ ಅತಿಥಿ ಪಾತ್ರದ ಮೂಲಕವೇ ಹೆಚ್ಚು ಗುರುತಿಸಿ ಕೊಂಡಿದ್ದಾರೆ. ಬಾಲಿವುಡ್ ಮಾತ್ರವಲ್ಲದೆ ಕನ್ನಡ, ಮಲಯಾಳಂ, ತೆಲುಗು, ತಮಿಳು, ಬೆಂಗಾಲಿ ಸೇರಿದಂತೆ ಭಾರತದ ಬಹುತೇಕ ಭಾಷೆಯಲ್ಲಿ ಅಭಿನಯಿಸಿದ್ದಾರೆ.

English summary
Bollywood actress Sunny Leone and Daniel Weber's celebrate their Ninth wedding anniversary. Daughter Nisha has a special gift for wedding anniversary
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X