ಲಾಕ್‌ಡೌನ್ ಸಮಯದಲ್ಲಿ ಭಾರತ ಬಿಟ್ಟು ಅಮೆರಿಕಕ್ಕೆ ಹಾರಿದ ಸನ್ನಿ ಲಿಯೋನ್

ಅಮೆರಿಕದಲ್ಲಿ ನೀಲಿ ಚಿತ್ರನಟಿಯಾಗಿ ಭಾರಿ ಹೆಸರು ಸಂಪಾದಿಸಿ ಭಾರತಕ್ಕೆ ಬಂದು ಬಾಲಿವುಡ್‌ನಲ್ಲಿ ನೆಲೆ ಕಂಡುಕೊಂಡಿದ್ದ, ಸನ್ನಿ ಲಿಯೋನ್ ಈಗ ಮತ್ತೆ ಅಮೆರಿಕಕ್ಕೆ ಹಾರಿದ್ದಾರೆ. ಅದೂ ಲಾಕ್‌ಡೌನ್ ಸಮಯದಲ್ಲಿ.

Recommended Video

ಇವರೆಲ್ಲಾ ಕನ್ನಡ ಸಿನಿಮಾಗಳ ಮೂಲಕವೇ ಸೂಪರ್ ಸ್ಟಾರ್ ಆದವರು | Super Star Hailed From Sandalwood

ಸನ್ನಿ ಲಿಯೋನ್ ತನ್ನ ಪತಿ ಮತ್ತು ಮಕ್ಕಳೊಂದಿಗೆ ಬಹು ಸಮಯದಿಂದ ಮುಂಬೈನಲ್ಲಿಯೇ ವಾಸವಿದ್ದರು. ಲಾಕ್‌ಡೌನ್ ಸಮಯವನ್ನೂ ಅವರು ಇಲ್ಲಿಯೇ ಕಳೆಯುತ್ತಿದ್ದವರು.

ಕುಟುಂಬದೊಂದಿಗೆ ಲಾಕ್‌ಡೌನ್ ಸಮಯವನ್ನು ಚೆನ್ನಾಗಿಯೇ ಎಂಜಾಯ್ ಮಾಡುತ್ತಿದ್ದ ಸನ್ನಿ ಲಿಯೋನ್, ಅದರ ವಿಡಿಯೋ, ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದ ಸನ್ನಿ ಇದ್ದಕ್ಕಿದ್ದಂತೆ, ಭಾರತ ತೊರೆದು ಕುಟುಂಬ ಸಮೇತರಾಗಿ ಅಮೆರಿಕಕ್ಕೆ ತೆರಳಿದ್ದಾರೆ.

ಕ್ಯಾಲಿಫೋರ್ನಿಯಾಕ್ಕೆ ಹಾರಿದ ಸನ್ನಿ

ಕ್ಯಾಲಿಫೋರ್ನಿಯಾಕ್ಕೆ ಹಾರಿದ ಸನ್ನಿ

ನಿನ್ನೆ ಬೆಳಿಗ್ಗೆ ತಮ್ಮ ಮೂರು ಮಕ್ಕಳೊಂದಿಗೆ ಫೋಟೊ ಅನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿದ ಸನ್ನಿ ಲಿಯೋನ್, ಅಮ್ಮಂದಿರ ದಿನದ ಶುಭಾಶಯ ಕೋರುವ ಜೊತೆಗೆ ತಾವು ಅಮೆರಿಕದ ಕ್ಯಾಲಿಪೋರ್ನಿಯಾಕ್ಕೆ ಬಂದಿರುವುದಾಗಿ ಹೇಳಿದ್ದಾರೆ.

ಮಕ್ಕಳಿಗೆ ಸುರಕ್ಷಿತ ಎನಿಸಿತು ಅಮೆರಿಕ

ಮಕ್ಕಳಿಗೆ ಸುರಕ್ಷಿತ ಎನಿಸಿತು ಅಮೆರಿಕ

ಎರಡು ದಿನದ ಹಿಂದೆ ಸನ್ನಿ ಲಿಯೋನ್ ಕ್ಯಾಲಿಪೋರ್ನಿಯಾಕ್ಕೆ ಬಂದಿದ್ದು, ಕಣ್ಣಿಗೆ ಕಾಣದ ರಾಕ್ಷಸ ಕೊರೊನಾ ದಿಂದ ನಮ್ಮ ಮಕ್ಕಳಿಗೆ ಯಾವ ಸ್ಥಳ ಸುರಕ್ಷಿತ ಎನಿಸಿತೋ ಅಲ್ಲಿಗೆ ನಾವು ಬಂದಿದ್ದೇವೆ ಎಂದು ಸನ್ನಿ ಲಿಯೋನ್ ಹೇಳಿದ್ದಾರೆ.

ಡ್ಯಾನಿಯಲ್ ಸಹ ಫೋಟೊ ಹಾಕಿದ್ದಾರೆ

ಡ್ಯಾನಿಯಲ್ ಸಹ ಫೋಟೊ ಹಾಕಿದ್ದಾರೆ

ಸನ್ನಿ ಲಿಯೋನ್ ಪತಿ ಡ್ಯಾನಿಯಲ್ ವೇಬರ್ ಸಹ ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟರ್ ಹಾಕಿದ್ದು, ದೊಡ್ಡ ಕೆರೆಯೋ-ನದಿಯೊಂದರ ಪಕ್ಕ ಬರಿಮೈಲಿ ಕೂತು, ಕ್ವಾರೆಂಟೈನ್ 2 ಪ್ರಾರಂಭವಾಗಿದೆ. ಮೊದಲಿನಷ್ಟು ಬೋರ್ ಆಗಿ ಇದಿಲ್ಲ ಎಂದಿದ್ದಾರೆ. ಆ ಮೂಲಕ ಭಾರತದಲ್ಲಿ ಬೋರ್ ಹೊಡೆದಿದ್ದಾಗಿ ಅವರು ಸೂಚ್ಯವಾಗಿ ಹೇಳಿದ್ದಾರೆ.

ಸರ್ಕಾರ ವ್ಯವಸ್ಥೆ ಮಾಡಿದ್ದ ವಿಮಾನ

ಸರ್ಕಾರ ವ್ಯವಸ್ಥೆ ಮಾಡಿದ್ದ ವಿಮಾನ

ಲಾಕ್‌ಡೌನ್‌ ಸಮಯದಲ್ಲಿ ವಿಮಾನ ಯಾನ ಬಂದ್ ಮಾಡಲಾಗಿದ್ದು, ಸನ್ನಿ ಲಿಯೋನ್ ಕುಟುಂಬ ಹೇಗೆ ಅಮೆರಿಕ ತಲುಪಿದರು ಎಂಬ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಡ್ಯಾನಿಯಲ್ ಹೇಳಿದಂತೆ ಸರ್ಕಾರವು ವ್ಯವಸ್ಥೆ ಮಾಡಿದ್ದ ವಿಮಾನದಲ್ಲಿಯೇ ಅವರು ಅಮೆರಿಕ ತಲುಪಿದ್ದಾರಂತೆ.

ಅಮೆರಿಕಕ್ಕೆ ಹೋಗಿ ತಪ್ಪು ಮಾಡಿದರೇ ಸನ್ನಿ

ಅಮೆರಿಕಕ್ಕೆ ಹೋಗಿ ತಪ್ಪು ಮಾಡಿದರೇ ಸನ್ನಿ

ಅಮೆರಿಕದಲ್ಲಿ ಈಗಾಗಲೇ ಕೊರೊನಾ ಸೋಂಕು ಹೆಚ್ಚಾಗಿದ್ದು, ಸನ್ನಿ ಲಿಯೋನ್ ಭಾರತ ಬಿಟ್ಟು ಅಮೆರಿಕಕ್ಕೆ ಹೋಗಿ ತಪ್ಪು ಮಾಡಿದ್ದಾರೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಅಮೆರಿಕದಲ್ಲಿ ಈವರೆಗೆ (ಏಪ್ರಿಲ್ 11) 13,80,000 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಅದರಲ್ಲಿ 81,000 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

More from Filmibeat

English summary
Actress Sunny Leone and her family gone to America two days before leaving India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X