ಮಕ್ಕಳ ಸಮ್ಮುಖದಲ್ಲಿ ಮತ್ತೆ ಮದುವೆಯಾದ ಸನ್ನಿ ಲಿಯೋನ್!

ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಮತ್ತೆ ಮದುವೆ ಆಗಿದ್ದಾರೆ. ಆ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಸನ್ನಿ ಲಿಯೋನ್ ಸಿನಿಮಾಗಳಲ್ಲಿ ಹೆಚ್ಚು ಸದ್ದು ಮಾಡ್ತಿಲ್ಲ. ಆಕೆಗೆ ಮೊದಲಿನ ಕ್ರೇಜ್ ಈಗ ಇಲ್ಲ. ಸೌತ್ ಸಿನಿಮಾಗಳಲ್ಲಿ ಕೂಡ ಸೇಸಮ್ಮ ಹೆಜ್ಜೆ ಹಾಕಿ ಅಭಿಮಾನಿಗಳನ್ನು ರಂಜಿಸಿದ್ದಾರೆ.

ನೀಲಿ ಸಿನಿಮಾಗಳಲ್ಲಿ ನಟಿಸುತ್ತಿದ್ದ ಸನ್ನಿ ಲಿಯೋನ್ ಬಳಿಕ ಬಾಲಿವುಡ್ ಪ್ರವೇಶಿಸಿದ್ದರು. ಹಿಂದಿ ಬಿಗ್‌ಬಾಸ್ ಶೋನಲ್ಲಿ ಕಾಣಿಸಿಕೊಂಡು ಹುಬ್ಬೇರಿಸಿದ್ದರು. ಬಳಿಕ ಒಂದು ಹಿಂದಿ ಚಿತ್ರಗಳಲ್ಲಿ ನಟಿಸಿದ್ದರು. ದಕ್ಷಿಣದ ಸಿನಿಮಾಗಳಲ್ಲಿ ಐಟಂ ಸಾಂಗ್‌ಗಳಿಗೆ ಹೆಜ್ಜೆ ಹಾಕಿ ರಂಗೇರಿಸಿದ್ದರು. ಕನ್ನಡದ ಎರಡು ಸಿನಿಮಾಗಳಲ್ಲಿ ಬಿಂದಾಸ್ ಬೆಡಗಿ ಕುಣಿದಿದ್ದು ಗೊತ್ತೇಯಿದೆ. ಉಪೇಂದ್ರ ನಿರ್ದೇಶಿಸಿ ನಟಿಸಿರುವ 'ಯುಐ' ಚಿತ್ರದಲ್ಲಿ ಕೂಡ ಸನ್ನಿ ಮಿಂಚಿದ್ದಾರೆ. ಡಿಸೆಂಬರ್ 20ಕ್ಕೆ ಸಿನಿಮಾ ತೆರೆಗೆ ಬರಲಿದೆ.

Sunny Leone and husband Daniel Weber renewed their vows in an intimate ceremony

ಸನ್ನಿ ಲಿಯೋನ್ ಮತ್ತೆ ಮದುವೆ ಆಗಿರುವುದು ನಿಜ. ಆದರೆ ತಮ್ಮ ಪತಿಯ ಡೇನಿಯಲ್ ಜೊತೆಗೆ ಮರು ಮದುವೆ ಆಗಿದ್ದಾರೆ. ತಮ್ಮ ಮೂವರು ಮಕ್ಕಳ ಸಮ್ಮುಖದಲ್ಲೇ ಮದುವೆ ನಡೆದಿದ್ದು ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ಹಂಚಿಕೊಂಡಿದಾರೆ. 13 ವರ್ಷಗಳ ಹಿಂದೆ ಡೇನಿಯಲ್ ವೆಬರ್ ಅವರನ್ನು ಪ್ರೀತಿಸಿ ಸನ್ನಿ ಮದುವೆ ಆಗಿದ್ದರು. ಇದೀಗ ಮತ್ತೆ ಮದುವೆ ಆಗಿದ್ದಾರೆ.

ವಿವಾಹಿತ ದಂಪತಿ ಪರಸ್ಪರ ತಮ್ಮ ಬದ್ಧತೆಯನ್ನು ನವೀಕರಿಸಲು ಜೊತೆಗೆ ಮದುವೆ ಪ್ರತಿಜ್ಞೆಯನ್ನು ಮರೆತ್ತಿಲ್ಲ ಎಂದು ತೋರಿಸಲು ಮರು ಮದುವೆ ಆಗುತ್ತಾರೆ. ವಿದೇಶಗಳಲ್ಲಿ ಇಂತಹ ಮರು ಮದುವೆಗಳು ನಡೆಯುತ್ತವೆ. ಒಂದರ್ಥದಲ್ಲಿ ಇದು ಷಷ್ಠಿಪೂರ್ತಿ ಇದ್ದಂತೆ. ಕಳೆದೆರಡು ವರ್ಷಗಳಿಂದ ಡೇನಿಯಲ್ ಹಾಗೂ ಸನ್ನಿ ಮರು ಮದುವೆ ಆಗುವ ಬಗ್ಗೆ ಯೋಚಿಸಿದ್ದರಂತೆ. ಆದರೆ ಮಕ್ಕಳು ಕೊಂಚ ದೊಡ್ಡವರಾಗಲಿ ಎಂದು ಕಾಯುತ್ತಿದ್ದರು. ಇದೀಗ ಮಕ್ಕಳ ಎದುರು ಮತ್ತೆ ಮದುವೆ ಆಗಿದ್ದಾರೆ.

Sunny Leone and husband Daniel Weber renewed their vows in an intimate ceremony

ಡೇನಿಯಲ್ ಹಾಗೂ ಸನ್ನಿಗೆ ಮೂವರು ಮಕ್ಕಳಿದ್ದಾರೆ. 2017ರಲ್ಲಿ ಒಂದು ಹೆಣ್ಣು ಮಗು(ನಿಶಾ ಕೌರ್) ದತ್ತು ಪಡೆದಿದ್ದರು. ಬಳಿಕ 2018ರಲ್ಲಿ ಸಾರೋಗಸಿ ಪದ್ಧತಿಯಲ್ಲಿ ಅವಳಿ ಗಂಡು ಮಕ್ಕಳನ್ನು ಪಡೆದಿದ್ದರು. ಸದ್ಯ ಮಾಲ್ಡೀವ್ಸ್‌ನಲ್ಲಿ ಸನ್ನಿ- ಡೇನಿಯಲ್ ಮರು ಮದುವೆ ಆಗಿದ್ದಾರೆ. ಆಗಾಗ್ಗೆ ಅಲ್ಲಿಗೆ ದಂಪತಿ ಪ್ರವಾಸಕ್ಕೆ ಹೋಗುತ್ತಿರುತ್ತಾರೆ. ಸದ್ಯ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಹಾಗಾಗಿ ರಜಾ ದಿನಗಳಲ್ಲಿ ಅವರನ್ನು ಮಾಲ್ಡೀವ್ಸ್‌ಗೆ ಕರೆದೊಯ್ದು ಅವರ ಉಪಸ್ಥಿತಿಯಲ್ಲಿ ಹೀಗೆ ಮರು ಮದುವೆ ಆಗಿದ್ದಾರೆ.

ಮಕ್ಕಳಿಗೂ ಕೂಡ ಮದುವೆ, ಫ್ಯಾಮಿಲಿ, ಸಂಬಂಧಗಳ ಬಗ್ಗೆ ಗೊತ್ತಾಗಬೇಕು ಎನ್ನುವ ಕಾರಣಕ್ಕೆ ಕೊಂಚ ತಡವಾಗಿ ಮರು ಮದುವೆ ಆಗಿದ್ದಾರೆ ಎಂದು ವರದಿಯಾಗಿದೆ. ಮಕ್ಕಳಿಗೂ ಮದುವೆ ಸಮಾರಂಭದ ಬಗ್ಗೆ ಅರ್ಥವಾಗಬೇಕು ಎನ್ನುವುದು ಇದರ ಹಿಂದಿನ ಉದ್ದೇಶವಂತೆ.

ಸನ್ನಿ ಲಿಯೋನ್ ಬಿಳಿ ಬಣ್ಣದ ಗೌನ್‌ನಲ್ಲಿ ರಾಜಕುಮಾರಿಯಂತೆ ಮಿಂಚಿದ್ದಾರೆ. ಮಗಳು ನಿಶಾ ಕೂಡ ಬಿಳಿ ಬಣ್ಣದ ಗೌನ್‌ನಲ್ಲಿ ಕಾಣಿಸಿಕೊಂಡಿದ್ದಾಳೆ. ಇನ್ನು ಡೇನಿಯಲ್ ಹಾಗೂ ಮಕ್ಕಳಾದ ಆಶರ್ ಸಿಂಗ್ ಮತ್ತು ನೋವಾ ಸಿಂಗ್ ಜೊತೆ ವೈಟ್ ಅಂಡ್ ವೈಟ್ ಕಾಸ್ಟ್ಯೂಮ್‌ನಲ್ಲಿ ಗಮನ ಸೆಳೆದಿದ್ದಾರೆ.

ಸಿನಿಮಾಗಳ ವಿಚಾರಕ್ಕೆ ಬಂದರೆ ಬಾಲಿವುಡ್‌ನಲ್ಲಿ ಸನ್ನಿ ಕ್ರೇಜ್ ಕಮ್ಮಿ ಆಗಿದೆ. ಮಲಯಾಳಂ ಹಾಗೂ ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 'ಪೆಟಾ ರ್ಯಾಪ್' ಒಂದು ತಮಿಳು ಸಿನಿಮಾ, ರಂಗೀಲಾ, ಶೆರೋ ಎಂಬ ಮಲಯಾಳಂ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. 'ಕೋಕಾ ಕೋಲ', 'ಹೆಲೆನ್', 'ದಿ ಬ್ಯಾಟಲ್ ಆಫ್ ಭೀಮಾ ಕೋರೆಗಾಂವ್' ಎನ್ನುವ ಹಿಂದಿ ಸಿನಿಮಾಗಳು ಕೈಯಲ್ಲಿವೆ.

More from Filmibeat

English summary
Sunny Leone and Daniel Weber renew wedding vows in front of their children
Read more about: bollywood hindi sunny leone
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X