For Quick Alerts
  ALLOW NOTIFICATIONS  
  For Daily Alerts

  ಫೀಲ್ಡಿಗಿಳಿದು ಫುಟ್ಬಾಲ್ ಆಡಿದ ಸನ್ನಿ ನೋಡಿ ಅಭಿಮಾನಿಗಳು ಫಿದಾ

  |
  Sunny Leone played football in a cricket stadium | FILIMIBEAT kannada

  ಬಾಲಿವುಡ್ ನಟಿ ಸನ್ನಿ ಲಿಯೋನ್ ಬಣ್ಣದ ಲೋಕದಿಂದ ಆಚೆ ಬಂದು ಫುಟ್ಬಾಲ್ ಫೀಲ್ಡೆಗೆ ಇಳಿದ್ದಾರೆ. ಸನ್ನಿಲಿಯೋನ್ ಫುಲ್ ಬಾಲ್ ಆಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಗೋಲ್ ಮೇಲೆ ಗೋಲ್ ಹೊಡೆದು ಸಖತ್ ಎಂಜಾಯ್ ಮಾಡಿದ್ದಾರೆ. ಸನ್ನಿ ಫುಟ್ಬಾಲ್ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ಅಬುದಾಬಿಯಲ್ಲಿ ನಡೆಯುತ್ತಿರುವ ಟಿ 10 ಲೀಗ್ ಸಮಯದಲ್ಲಿ ಸನ್ನಿ ಫುಟ್ಬಾಲ್ ಆಡಿದ್ದಾರೆ. ದೆಹಲಿ ಬುಲ್ಸ್ ತಂಡಕ್ಕೆ ಚಿಯರ್ ಹೇಳಲು ಭಾಗಿಯಾಗಿದ್ದ ಸನ್ನಿ ಫುಟ್ಬಾಲ್ ಆಡಿ ಗಮನ ಸಳೆದಿದ್ದಾರೆ. ದೆಹಲಿ ತಂಡದ ಬ್ರಾಂಡ್ ಅಂಬಾಸಿಡರ್ ಆಗಿರುವ ಸನ್ನಿ ತಂಡವನ್ನು ಹುರಿದುಂಬಿಸಲು ಭಾಗಿಯಾಗಿದ್ದರು.

  ಈ ವಿಚಾರದಲ್ಲಿ ಸನ್ನಿ ಲಿಯೋನನ್ನೇ ಮೀರಿಸಿದ ನಟಿ ಪ್ರಿಯಾಂಕಾ ಚೋಪ್ರಾಈ ವಿಚಾರದಲ್ಲಿ ಸನ್ನಿ ಲಿಯೋನನ್ನೇ ಮೀರಿಸಿದ ನಟಿ ಪ್ರಿಯಾಂಕಾ ಚೋಪ್ರಾ

  ಈ ಸಮಯದಲ್ಲಿ ಡೆಲ್ಲಿ ಬುಲ್ಸ್ ತಂಡದ ಜೆರ್ಸಿ ತೊಟ್ಟು ಸನ್ನಿ ಫೀಲ್ಡಿಗಿಳಿದು ಫುಟ್ಬಾಲ್ ಆಡಿದನ್ನು ನೋಡಿ ಸನ್ನಿ ಫುಟ್ಬಾಲ್ ಕೂಡ ಆಡುತ್ತಾರಾ ಎಂದು ಅಚ್ಚರಿ ಪಟ್ಟಿದ್ದಾರೆ. ಸನ್ನಿ ಲಿಯೋನ್ ಗೆ ಪತಿ ಡೇನಿಯಲ್ ವೆಬೆರ್ ಸಾಥ್ ನೀಡಿದ್ದಾರೆ. ಈ ವಿಡಿಯೋವನ್ನು ಸನ್ನಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಸನ್ನಿಯ ಈ ವಿಡಿಯೋಗೆ ಸಿಕ್ಕಾಟಕ್ಕೆ ಲೈಕ್ಸ್ ಹರಿದುಬಂದಿದೆ.

  ಡೆಲ್ಲಿ ಬುಲ್ಸ್ ತಂಡವನ್ನು ಇಂಗ್ಲೆಂಡ್ ನ ಇಯಾನ್ ಮಾರ್ಗನ್ ಮುನ್ನಡೆಸುತ್ತಿದ್ದಾರೆ. ಭಾರತದ ಮಾಜಿ ಎಡಗೈ ವೇಗಿ ಜಹೀರ್ ಖಾನ್, ಪಾಕಿಸ್ತಾನದ ಶೊಯೆಬ್ ಮಲಿಕ್, ಸೊಹೈಲ್ ತನ್ವೀರ್, ಇಂಗ್ಲೆಂಡ್ ನ ಆದಿಲ್ ರಶೀದ್, ಶ್ರೀಲಂಕಾದ ಕುಸಾಲ್ ಪರೇರಾರ ಹಾಗೂ ಅಫಘಾನಿಸ್ತಾನದ ಮೊಹಮ್ಮದ್ ನಬಿ ಸೇರಿದಂತೆ ಮುಂತಾದವರು ಡೆಲ್ಲಿ ಬುಲ್ಸ್ ತಂಡದಲ್ಲಿ ಇದ್ದಾರೆ.

  English summary
  Bollywood actress Sunny Leone attending a cricket match to support the Delhi Bulls. When she is playing Football.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X