For Quick Alerts
  ALLOW NOTIFICATIONS  
  For Daily Alerts

  ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಸನ್ನಿ ಲಿಯೋನ್ ಟ್ವೀಟ್: ನೆಟ್ಟಿಗರಿಂದ ಮೆಚ್ಚುಗೆ

  |

  ದೇಶದಲ್ಲಿ ಪೆಟ್ರೋಲ್ ಬೆಲೆ 100ರ ಗಡಿ ದಾಟಿಯಾಗಿದೆ. ಈ ಬಗ್ಗೆ ವಿಪಕ್ಷಗಳು ಪ್ರತಿಭಟನೆ ಮಾಡುತ್ತಿವೆ. ಆದರೆ ಈ ಹಿಂದೆ ಪೆಟ್ರೋಲ್ ಬೆಲೆ ಹೆಚ್ಚಾಗಿದ್ದಾಗ ಟೀಕೆ ಮಾಡಿದ್ದ ಸಿನಿಮಾ ಸೆಲೆಬ್ರಿಟಿಗಳು ಈಗ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಆದರೆ ನಟಿ ಸನ್ನಿ ಲಿಯೋನ್ ಸುಮ್ಮನಿಲ್ಲ. ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಧೈರ್ಯವಾಗಿ ಮಾತನಾಡಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ಸೈಕಲ್‌ನೊಂದಿಗೆ ನಿಂತಿರುವ ತಮ್ಮ ಚಿತ್ರ ಪ್ರಕಟಿಸಿರುವ ಸನ್ನಿ ಲಿಯೋನ್, ''ಕೊನೆಗೂ 100ರ ಗಡಿ ದಾಟಿಯೇ ಬಿಟ್ಟಿತು. ನಿಮ್ಮ ಆರೋಗ್ಯ ನೀವು ಕಾಪಾಡಿಕೊಳ್ಳಿ'' ಎಂದಿದ್ದಾರೆ. ಜೊತೆಗೆ 'ಹೊಸ ಗ್ಲಾಮರ್‌ನೊಂದಿಗೆ ಸೈಕ್ಲಿಂಗ್‌' ಎಂಬ ಟ್ಯಾಗ್ ಲೈನ್ ಅನ್ನು ಬರೆದಿದ್ದಾರೆ.

  ಸನ್ನಿ ಲಿಯೋನ್‌ ಟ್ವೀಟ್‌ಗೆ ಕಮೆಂಟ್ ಮಾಡಿರುವ ಹಲವರು, ಪೆಟ್ರೋಲ್ ಬೆಲೆ ಏರಿಕೆಯ ಬಗ್ಗೆ ಮಾತನಾಡಿ ಸರ್ಕಾರವನ್ನು ಟೀಕಿಸಿರುವ ಸನ್ನಿ ಧೈರ್ಯವನ್ನು ಮೆಚ್ಚಿ ಕೊಂಡಾಡಿದ್ದಾರೆ. ಸನ್ನಿಗೆ ಇರುವ ಧೈರ್ಯ ಹಲವು ಬಾಲಿವುಡ್ ಸೂಪರ್‌ ಸ್ಟಾರ್‌ಗಳಿಗೆ ಇಲ್ಲವೆಂದು ಮೂದಲಿಸಿದ್ದಾರೆ.

  ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗಿದ್ದಾಗ ನಟ ಅಕ್ಷಯ್ ಕುಮಾರ್, ಅಮಿತಾಬ್ ಬಚ್ಚನ್ ಸೇರಿ ಇನ್ನೂ ಕೆಲವರು ಟೀಕೆ ಮಾಡಿದ್ದರು. ಆದರೆ ಆಗ ಏರಿಕೆಯಾಗಿದ್ದಕ್ಕಿಂತಲೂ ಹೆಚ್ಚಿಗೆ ಪೆಟ್ರೋಲ್ ಬೆಲೆ ಈಗ ಏರಿಕೆ ಆಗಿದೆ ಆದರೆ ಆಗ ಟೀಕೆ ಮಾಡಿದ್ದ ಸೆಲೆಬ್ರಿಟಿಗಳ್ಯಾರು ಪೆಟ್ರೋಲ್ ಬೆಲೆ ಬಗ್ಗೆ ಈಗ ಬಾಯಿ ಬಿಟ್ಟಿಲ್ಲ. ಇದು ಹಲವರ ಸಿಟ್ಟಿಗೆ ಕಾರಣವಾಗಿದೆ.

  ತಮಿಳುನಾಡು ವಿಧಾನಸಭೆ ಚುನಾವಣೆ ಸಮಯದಲ್ಲಿ ನಟ ವಿಜಯ್, ಸೈಕಲ್‌ನಲ್ಲಿ ತೆರಳಿ ಮತದಾನ ಮಾಡಿ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದ್ದರು. ವಿಜಯ್‌ರ ಈ ನಡೆಗೆ ಭಾರಿ ಬೆಂಬಲ ವ್ಯಕ್ತವಾಗಿತ್ತು. ಆದರೆ ಈ ಬಗ್ಗೆ ಹೇಳಿಕೆ ಬಿಡಗುಡೆ ಮಾಡಿದ ವಿಜಯ್, ''ಪೆಟ್ರೊಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಲು ನಾನು ಸೈಕಲ್ ಏರಿಲ್ಲ'' ಎಂದಿದ್ದರು.

  Recommended Video

  ಎಲ್ಲದಕ್ಕೂ ಇವರಿಬ್ಬರೇ ಕಾರಣ ಎಂದ ರಕ್ಷಿತ್ ಶೆಟ್ಟಿ!! | Rakshith Shetty | Pushkar Mallikarjun | Filmibeat

  ಸನ್ನಿ ಲಿಯೋನ್ ವಿಷಯಕ್ಕೆ ಮರಳುವುದಾದರೆ, ಕನ್ನಡದ 'ಕಾಟನ್‌ಪೇಟೆ' ಸಿನಿಮಾದ ವಿಶೇಷ ಹಾಡಿನಲ್ಲಿ ನರ್ತಿಸಲಿದ್ದಾರೆ. ಈ ಹಿಂದೆಯೂ ಸನ್ನಿ ಲಿಯೋನ್ ಕನ್ನಡದ ಹಾಡಿಗೆ ನರ್ತಿಸಿದ್ದಾರೆ. ಇದರ ಹೊರತಾಗಿ ಹಲವು ಸಿನಿಮಾಗಳು ಸನ್ನಿ ಲಿಯೋನ್ ಕೈಯಲ್ಲಿವೆ. 'ಶೇರೊ', 'ರಂಗೀಲಾ', 'ಅನಾಮಿಕ' ಜೊತೆಗೆ ತಮಿಳಿನ 'ವೀರ ಮಹಾದೇವಿ' ಸಿನಿಮಾದಲ್ಲಿಯೂ ಸನ್ನಿ ನಟಿಸುತ್ತಿದ್ದಾರೆ.

  English summary
  Actress Sunny Leone criticize petrol price hike. Sunny tweeted photo with cycle and said, ''When it's finally crossed ₹100...you gotta take care of your health''.
  Friday, July 9, 2021, 23:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X