ಪೋಲಿ ರಾಣಿ ಸನ್ನಿ ನೈಜ ಪ್ರಣಯಕ್ಕೆ ಸಿದ್ಧರಾಗಿದ್ದರೆ?
ಪೋಲಿ ರಾಣಿ ಸನ್ನಿ ಲಿಯೋನ್ ತಮಗೆ ಬಾಲಿವುಡ್ ಚಿತ್ರ 'ಜಿಸ್ಮ್-2' ಅವಕಾಶ ಬಂದಾಗ, ಹೀರೋಗಳಾದ ರಣದೀಪ್ ಹೂಡಾ ಹಾಗೂ ಅರುಣೋದಯ್ ಸಿಂಗ್ ಅವರಿಬ್ಬರ ಮೆಡಿಕಲ್ ವರದಿ (Medical Reports) ಕೇಳಿದ್ದರು ಎಂಬ ಅಂಶ ಈಗ ಎಲ್ಲಕಡೆ ಬಹಿರಂಗವಾಗಿದೆ. ಅರೇ, ಹೇಳಿಕೇಳಿ ಸನ್ನಿ ಲಿಯೋನ್ ನೀಲಿ ಚಿತ್ರಗಳ ತಾರೆ. ಅವರಿಗೆ ಬಾಲಿವುಡ್ ಚಿತ್ರದಲ್ಲಿ ಬರುವಂತಹ ಯಾವುದೇ ಪಾತ್ರದಲ್ಲಿ ನಟಿಸಲು ಮಜುಗರದ ಸಾಧ್ಯತೆಯಿಲ್ಲ.
ಆದರೆ ನಟರ ಜೊತೆ ನಟಿಸಲು ಮೆಡಿಕಲ್ ವರದಿ ಅಥವಾ ಸರ್ಟಿಫಿಕೇಟ್ ಅಗತ್ಯವೇನು? ಎಂಬುದು ತಕ್ಷಣಕ್ಕೆ ಯಾರಿಗೂ ಅರ್ಥವಾಗುವುದಿಲ್ಲ. ಆದರೆ, ಆಳವಾಗಿ ಯೋಚಿಸಿದಾಗ ನಿಜ ಸಂಗತಿ ಅರ್ಥವಾಗುವುದು ಕಷ್ಟವೇನಲ್ಲ. ನೀಲಿ ತಾರೆಯಾಗಿರುವ ಸನ್ನಿ, ಜಿಸ್ಮ್-2 ದಲ್ಲಿ ನೈಜ ಪ್ರಣಯ ದೃಶ್ಯಗಳಿವೆ ಎಂದುಕೊಂಡಿದ್ದಾರೆ. ನೀಲಿ ಚಿತ್ರಗಳಂತೆ ಕ್ಯಾಮರಾ ಮುಂದೆ 'ಅದನ್ನೇ' ಮಾಡಬೇಕು ಎಂದಿಕೊಂಡಿರುವ ಸನ್ನಿ ನಟರ ವೈದ್ಯಕೀಯ ವರದಿ ಕೇಳಿದ್ದಾರೆ.
ಇಲ್ಲದಿದ್ದರೆ ನಟರ ವೈದ್ಯಕೀಯ ಪ್ರಮಾಣ ಪತ್ರ ಅಥವಾ ವರದಿಯ ಯಾವ ಅಗತ್ಯವೂ ನಟಿಯರಿಗೆ ಇರುವುದಿಲ್ಲ ಎಂಬುದು ಎಂಥವರಿಗೂ ಗೊತ್ತಾಗುವ ಸಂಗತಿ. ಸನ್ನಿಯಂತೆ ಆ ರೀತಿ ಯೋಚಿಸಿದರೆ, ಅವರು ನಟರ ಮೆಡಿಕಲ್ ವರದಿ ಕೇಳಿದ್ದು ನ್ಯಾಯವಾಗಿಯೇ ಇದೆ ಎನ್ನದೇ ಬೇರೆ ದಾರಿಯಲ್ಲಿದೆ. ಅಬ್ಬಾ!, ಸನ್ನಿಯ ದೂರಾಲೋಚನೆಗೆ (ದುರಾಲೋಚನೆ!) ಭೇಷ್ ಎನ್ನಲೇಬೇಕು.
ಸನ್ನಿ ಕೇಳಿದ ನಟರ ಮೆಡಿಕಲ್ ವರದಿಯಿಂದ ಒಂದಂಶವಂತೂ ಸ್ಪಷ್ಟ. ಮೆಡಿಕಲ್ ಸರ್ಟಿಫಿಕೇಟ್ ವರದಿ ಕೊಟ್ಟರೆ, ಅದರಲ್ಲಿ ಯಾವ ತೊಂದರೆ ಇಲ್ಲದಿದ್ದರೆ ಅವರು ನಟನರೊಂದಿಗೆ 'ಪ್ರಣಯ'ವನ್ನೂ ಮಾಡಲು ಸಿದ್ಧವಿದ್ದರು. ಈ ವಿಷಯ ಅವರದೇ ಬೇಡಿಕೆಯಿಂದಲೇ ಸ್ಪಷ್ಟವಾಗಿದೆ. ಏನೇ ಇರಲಿ, ಪೂಜಾ ಭಟ್ ನಿರ್ದೇಶನದ ಬಾಲಿವುಡ್ ಜಿಸ್ಮ್-2 ಚಿತ್ರದಲ್ಲಿ ಈ 'ಪೋಲಿ ರಾಣಿ' ಸನ್ನಿ ಲಿಯೋನ್ ರನ್ನು ನೋಡಲು ಜನ ತುದಿಗಾಲಲ್ಲಿ ನಿಂತಿದ್ದಾರೆ. (ಏಜೆನ್ಸೀಸ್)


Click it and Unblock the Notifications











