ಕಾಮಿಡಿ ವೆಬ್ ಸಿರೀಸ್ನಲ್ಲಿ ಮಾದಕ ನಟಿ ಸನ್ನಿ ಲಿಯೋನ್!
ಸ್ವಂತ ನಿರ್ಮಾಣ ಸಂಸ್ಥೆ ಹುಟ್ಟುಹಾಕಿ ಸಿನಿಮಾ ಮಾಡುವ ತಯಾರಿ ನಡೆಸುತ್ತಿದ್ದಾರೆ ನಟಿ ಸನ್ನಿ ಲಿಯೋನ್. ಈ ನಡುವೆ ಕಾಮಿಡಿ ವೆಬ್ ಸೀರಿಸ್ ಚಿತ್ರವೊಂದರಲ್ಲಿ ಸನ್ನಿ ಕಾಣಿಸಿಕೊಳ್ಳಲಿದ್ದಾರೆ ಸುದ್ದಿ ಹೊರಬಿದ್ದಿದೆ.
ಹೌದು, ಆನ್ ಲೈನ್ ಚಾನಲ್ ನಲ್ಲಿ ಪ್ರಸಾರವಾಗಲಿರುವ ಕಾಮಿಡಿ ವೆಬ್ ಸೀರಿಸ್ ನಲ್ಲಿ ಸನ್ನಿ ಬಣ್ಣ ಹಚ್ಚುತ್ತಿದ್ದಾರೆ. ಈ ಸುದ್ದಿಯನ್ನು ಸ್ವತಃ ಸನ್ನಿ ಹಂಚಿಕೊಂಡಿದ್ದಾರೆ.
''ಸದ್ಯಕ್ಕೆ ವೆಬ್ ಸೀರಿಸ್ ಕುರಿತು ಹೆಚ್ಚಿನ ಮಾಹಿತಿ ಬಿಟ್ಟುಕೊಡಲು ಸಾಧ್ಯವಿಲ್ಲ. ಆದರೆ, ಈ ಚಿತ್ರದ ಬಗ್ಗೆ ನಾನು ಕಾತುರದಿಂದ ಕಾಯುತ್ತಿದ್ದೇನೆ. ಕಾಮಿಡಿ ಜಾನರ್ ನಲ್ಲಿ ನಟಿಸುವುದಕ್ಕೆ ಖುಷಿಯಾಗ್ತಿದೆ. ಇನ್ನೊಬ್ಬರ ಮುಖದಲ್ಲಿ ನಗು ತರಿಸುವಂತಹ ಕೆಲಸ ಇಷ್ಟ ಆಗುತ್ತೆ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸನ್ನಿ ಲಿಯೋನ್ ಮತ್ತು ಪತಿ ಡೇನಿಯಲ್ ಮೂರನೇ ಮಗುವನ್ನು ದತ್ತು ಪಡೆದುಕೊಂಡಿದ್ದಾರೆ. ಇದಕ್ಕೂ ಮುಂಚೆ ಇಬ್ಬರು ಮಕ್ಕಳನ್ನು ದತ್ತು ಪಡೆದುಕೊಂಡಿದ್ದರು. ಈಗ ಮೂವರು ಮಕ್ಕಳೊಂದಿಗೆ ಖಾಸಗಿ ಜೀವನ ಎಂಜಾಯ್ ಮಾಡ್ತಿದ್ದಾರೆ.

ಈ ಹಿಂದೆ ಸನ್ನಿ ಲಿಯೋನ್ ತನ್ನದೇ ಬಯೋಗ್ರಫಿಯನ್ನು 'ಕರೆನ್ಜಿತ್ ಕೌರ್' ವೆಬ್ ಸೀರಿಸ್ ಮೂಲಕ ತೆರೆಗೆ ತಂದಿದ್ದರು. 'ರಾಗಿಣಿ ಎಂಎಂಎಸ್ ರಿಟರ್ನ್ಸ್ ಸೀಸನ್ 2' ಎಂದು ಮತ್ತೊಂದು ವೆಬ್ ಸೀರಿಸ್ ಮಾಡಿದ್ದರು. ನಂತರ 'ವಾಟ್ ದಿ ಲವ್ ವಿತ್ ಕರಣ್ ಜೋಹರ್' ವೆಬ್ ಸೀರೀಸ್ ನಲ್ಲಿ ಕಾಣಿಸಿಕೊಂಡಿದ್ದರು.
ಇದೀಗ, ಕಾಮಿಡಿ ವೆಬ್ ಸೀರಿಸ್ ಗೆ ಗ್ರೀನ್ ಸಿಗ್ನಲ್ ಕೊಟ್ಟಿರುವ ಸನ್ನಿ ಲಿಯೋನ್ ಪ್ರೇಕ್ಷಕರನ್ನು ನಗಿಸಲು ಬರ್ತಿದ್ದಾರೆ. ಉಳಿದಂತೆ ಯಾವಾಗ ಆರಂಭವಾಗುತ್ತೆ, ಕಲಾವಿದರು, ರಿಲೀಸ್ ದಿನಾಂಕ ಎಲ್ಲವೂ ತಿಳಿಯಬೇಕಿದೆ.


Click it and Unblock the Notifications











