For Quick Alerts
  ALLOW NOTIFICATIONS  
  For Daily Alerts

  21ನೇ ವಯಸ್ಸಿನಲ್ಲಿ ಸನ್ನಿ ಲಿಯೋನ್ ಎದುರಿಸಿದ್ದಳು ಗಂಭೀರ ಸಮಸ್ಯೆ.!

  By Bharath Kumar
  |
  21ನೇ ವಯಸ್ಸಿನಲ್ಲಿ ಸನ್ನಿ ಲಿಯೋನ್ ಎದುರಿಸಿದ್ದಳು ಗಂಭೀರ ಸಮಸ್ಯೆ.! | FIlmibeat Kananda

  ಮಾಜಿ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಬಾಲಿವುಡ್ ಇಂಡಸ್ಟ್ರಿ ಮೂಲಕ ಭಾರತ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಬಹುಬೇಗನೇ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ನಟಿ. ಸನ್ನಿ ಬಿ-ಟೌನ್ ಗೆ ಬಂದಾಗ ಅದೇಷ್ಟೋ ಜನ ಅವರ ಕಾಲೆಳದಿದ್ದರು. ಆದ್ರೆ, ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸನ್ನಿ ಎಲ್ಲರನ್ನ ಹಿಂದಿಕ್ಕಿ ಬೆಳದು ನಿಂತಳು.

  ಇಂತಹ ಸನ್ನಿಯ ರೋಚಕ ಕಥೆ ಈಗ ಸಿನಿಮಾ ಆಗುತ್ತಿದೆ. ನೀಲಿ ತಾರೆಯ ಲೈಫ್ ಸ್ಟೋರಿ ಬಯೋಪಿಕ್ ಆಗಿ ತೆರೆಮೇಲೆ ಬರಲು ಸಜ್ಜಾಗುತ್ತಿದೆ. ಈ ಮಧ್ಯೆ ಟಿವಿ ಸಂದರ್ಶನದಲ್ಲಿ ಮಾತನಾಡಿದ ಸನ್ನಿ ಲಿಯೋನ್ ತನ್ನ ಜೀವನದಲ್ಲಿ ಎದುರಿಸಿದ ಕೆಲವು ಘಟನೆಗಳನ್ನ ನೆನದು ಭಾವುಕರಾದ ಘಟನೆ ನಡೆದಿದೆ.

  ಲೈಟರ್ ಹಿಡಿದು ಟೀ ಮಾಡಲು ಹೋದ ಸನ್ನಿ ಲಿಯೋನ್ ಕಂಡು ಆಡಿಕೊಂಡವರೇ ಹೆಚ್ಚು!ಲೈಟರ್ ಹಿಡಿದು ಟೀ ಮಾಡಲು ಹೋದ ಸನ್ನಿ ಲಿಯೋನ್ ಕಂಡು ಆಡಿಕೊಂಡವರೇ ಹೆಚ್ಚು!

  ''ಎಲ್ಲ ಕುಟುಂಬಗಳಂತೆ, ನಮ್ಮ ಕುಟುಂಬದಲ್ಲಿ ಕೂಡಾ ಕೆಲವು ಸಮಸ್ಯೆಗಳಿತ್ತು. ನಮ್ಮ ಜೀವನದಲ್ಲಿ ಪ್ರೀತಿ, ದ್ವೇಷ, ಭಾವನಾತ್ಮಕ ಕ್ಷಣಗಳು ಇತ್ತು. ನಮ್ಮ ಹೆತ್ತವರು ನನ್ನ ಮತ್ತು ಸಹೋದರನನ್ನು ಎಲ್ಲದರಿಂದಲೂ ಎಷ್ಟು ಸಾಧ್ಯವೋ ಅಷ್ಟು ರಕ್ಷಿಸಿದ್ದಾರೆ. ಆದ್ರೆ, 21ನೇ ವಯಸ್ಸಿನಲ್ಲಿ, ಜನರು ನಿಮ್ಮ ಬಗ್ಗೆ ಅಸಹ್ಯವಾಗಿ ಮಾತನಾಡುವುದನ್ನ ಕೇಳಿದರೇ, ಅದು ನಿಮ್ಮನ್ನು ಕೆಟ್ಟದಾಗಿ ಪ್ರಭಾವ ಬೀರುತ್ತೆ'' ಎಂದು ತಮ್ಮ ಜೀವನದ ಫ್ಲ್ಯಾಶ್ ಬ್ಯಾಕ್ ನ್ನ ನೆನಸಿಕೊಂಡಿದ್ದಾರೆ.

  ''ಎಲ್ಲರೂ ಅಂದುಕೊಂಡಿದ್ದಾರೆ. ನಾನು ಭಾರತಕ್ಕೆ ಬಂದಾಗ ನನಗೆ ಅವಮಾನಗಳು ಎದುರಾಯಿತು ಎಂದು. ಆದ್ರೆ, ಅದಕ್ಕೂ ಮುಂಚೆಯೇ ನಾನು ಸಾಕಷ್ಟು ಅಪಮಾನ ಎದುರಿಸಿದ್ದೇನೆ. ನಾನು 21 ವರ್ಷ ವಯಸ್ಸಿನಲ್ಲಿದ್ದಾಗಲೇ ದ್ವೇಷದ ಸಂದೇಶಗಳನ್ನ ಮತ್ತು ಟೀಕೆಗಳನ್ನು ಪಡೆದಿದ್ದೇನೆ. ಇಲ್ಲಿ ದೇಶದ ಪ್ರಶ್ನೆ ಬರುವುದಿಲ್ಲ. ಸಮಾಜವೂ ಸಾಮಾನ್ಯವಾಗಿದೆ'' ಎಂದು ಸನ್ನಿ ಹೇಳಿಕೊಂಡಿದ್ದಾರೆ.

  ''ನನ್ನ ವೈಯಕ್ತಿಕ ಕಥೆಯನ್ನು ನನ್ನಲ್ಲೇ ಇಟ್ಟುಕೊಳ್ಳಬಹುದೆಂದು ನನಗೆ ಗೊತ್ತು, ಆದರೆ, ನನ್ನ ನಿಜವಾದ ಸ್ವಭಾವವನ್ನು ವ್ಯಕ್ತಪಡಿಸಲು ನನಗೆ ಅವಕಾಶ ಸಿಕ್ಕಿದೆ. ಹೀಗಾಗಿ, ಈ ಬಯೋಪಿಕ್ ಆಗುತ್ತಿದೆ'' ಎಂದು ಸನ್ನಿ ತಮ್ಮ ಅಂತರಾಳವನ್ನ ಹೊರಹಾಕಿದ್ದಾರೆ.

  ಅಯ್ಯೋ ಪಾಪ...ರಾಖಿ ಸಾವಂತ್ ಗೆ ಸನ್ನಿ ಲಿಯೋನ್ ಹೀಗೆ ಮಾಡಬಾರದಿತ್ತು.!ಅಯ್ಯೋ ಪಾಪ...ರಾಖಿ ಸಾವಂತ್ ಗೆ ಸನ್ನಿ ಲಿಯೋನ್ ಹೀಗೆ ಮಾಡಬಾರದಿತ್ತು.!

  ಕೆನಡಾ ಮೂಲದ ಮಧ್ಯಮ ವರ್ಗದ ಹುಡುಗಿಯೊಬ್ಬಳು ಹೇಗೆ ಪೋರ್ನ್ ಸ್ಟಾರ್ ಆದಳು ಮತ್ತು ಅಲ್ಲಿಂದ ಬಾಲಿವುಡ್ ಗೆ ಹೇಗೆ ಬಂದಳು ಎಂಬ ರೋಚಕ ಕಥೆಯನ್ನ ''ಕರೆನ್ಜಿತ್ ಕೌರ್ - ದಿ ಅನ್ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್'' ಎಂಬ ಸಿನಿಮಾದ ಮೂಲಕ ಸನ್ನಿ ತಿಳಿಸುತ್ತಿದ್ದಾರೆ.

  English summary
  Sunny Leone opened her heart out about how she faced brickbats and criticism during her growing up days and the hate was getting much worse as each day passed. From receiving hateful emails to getting mocked and being called disgusting names, she faced it all.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X