'ನನ್ನ ನೆಚ್ಚಿನ ಕ್ರಿಕೆಟಿಗ ಧೋನಿ' ಎಂದ ಸನ್ನಿ ಲಿಯೋನ್

ಬಾಲಿವುಡ್ ಮಾದಕ ತಾರೆ ಸನ್ನಿ ಲಿಯೋನ್ ಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ಅಂದ್ರೆ ತುಂಬಾ ಇಷ್ಟವಂತೆ. ವೆಬ್ ಸೈಟ್ ಉದ್ಘಾಟನೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸನ್ನಿಗೆ 'ನಿಮ್ಮ ನೆಚ್ಚಿನ ಕ್ರಿಕೆಟಿಗ ಯಾರು' ಎಂದು ಕೇಳಿದಾಗ ಎಂ ಎಸ್ ಧೋನಿ ಎಂದಿದ್ದಾರೆ.

''ಮಹೇಂದ್ರ ಸಿಂಗ್ ಧೋನಿ ನನಗೆ ಇಷ್ಟ. ಅವರು ಮುದ್ದಾದ ಮಗು ಹೊಂದಿದ್ದಾರೆ. ಧೋನಿ ಮತ್ತು ಮಗಳ ಜೊತೆ ಇರುವುದನ್ನ ಫೋಟೋಗಳಲ್ಲಿ ನೋಡಿದ್ದೀನಿ. ತುಂಬಾ ಚೆಂದ ಕಾಣ್ತಾರೆ. ಅವರೊಬ್ಬ ಉತ್ತಮ ಕೌಟುಂಬಿಕ ವ್ಯಕ್ತಿ ಕೂಡ ಹೌದು'' ಎಂದು ಸನ್ನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Sunny leone favourite cricketer Ms dhoni

ಸದ್ಯ ನಾಯಕತ್ವ ತೊರೆದಿರುವ ಎಂ ಎಸ್ ಧೋನಿ ವಿಕೆಟ್ ಕೀಪರ್ ಜೊತೆಗೆ ಬ್ಯಾಟ್ಸಮನ್ ಆಗಿ ಭಾರತ ತಂಡದಲ್ಲಿ ಆಡುತ್ತಿದ್ದಾರೆ. ಭಾರಿ ಒತ್ತಡದ ಸಂದರ್ಭದಲ್ಲಿ ಸಮಯೋಚಿತ ಆಟವನ್ನ ಆಡುವ ಮೂಲಕ ಅನೇಕ ಪಂದ್ಯಗಳನ್ನ ಗೆದ್ದು ಕೊಟ್ಟಿರುವ ಖ್ಯಾತಿ ಧೋನಿಗೆ ಸಲ್ಲುತ್ತೆ.

ಇನ್ನು ಸನ್ನಿ ಲಿಯೋನ್ ಕೂಡ ಕೆಲವು ಟಿವಿ ಕಾರ್ಯಕ್ರಮದಲ್ಲಿ ಬ್ಯುಸಿ ಇದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆ ಅಡಿ ಸಿನಿಮಾವೊಂದನ್ನ ತಯಾರು ಮಾಡಲು ಸಜ್ಜಾಗುತ್ತಿದ್ದಾರೆ. ಇದರ ಜೊತೆಗೆ ದಕ್ಷಿಣ ಭಾರತದ ಇಬ್ಬರು ಸ್ಟಾರ್ ನಟರ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Actress Sunny Leone has said that Mahendra Singh Dhoni is her favourite cricketer as he is a family man.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X