ತಿಂಗಳ ಬಳಿಕ ಭಾರತಕ್ಕೆ ವಾಪಸ್ ಆಗುತ್ತಿರುವ ನಟಿ ಸನ್ನಿ ಲಿಯೋನ್

ಬಾಲಿವುಡ್ ನಟಿ ಸನ್ನಿ ಲಿಯೋನ್ ತಿಂಗಳ ಬಳಿಕ ಭಾರತಕ್ಕೆ ವಾಪಸ್ ಆಗುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಸನ್ನಿ ಲಿಯೋನ್ ಪತಿ ಡೇನಿಯಲ್ ವೆಬರ್ ಮತ್ತು ಮಕ್ಕಳಾದ ನೋವಾ, ಆಶರ್ ಮತ್ತು ನಿಶಾ ಅವರೊಂದಿಗೆ ಭಾರತ ಬಿಟ್ಟು ಲಾಸ್ ಏಂಜಲೀಸ್ ಗೆ ಹಾರಿದ್ದರು.

ಇದೀಗ ತಿಂಗಳ ಬಳಿಕ ಸನ್ನಿ ಲಿಯೋನ್ ಭಾರತಕ್ಕೆ ವಾಪಸ್ ಆಗುತ್ತಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ತನ್ನ ಫೋಟೋವನ್ನು ಶೇರ್ ಮಾಡಿ, ಬಹಳ ಸಮಯದ ಬಳಿಕ ಮನೆಗೆ ವಾಪಸ್ ಆಗುವ ಸಮಯ ಎಂದು ಬರೆದುಕೊಂಡಿದ್ದಾರೆ.

ಅಂದ್ಹಾಗೆ ಸನ್ನಿ ಲಿಯೋನ್ ಪತಿ ಮತ್ತು ಮಕ್ಕಳ ಜೊತೆ ಮುಂಬೈನಲ್ಲೇ ವಾಸವಿದ್ದರು. ಆದರೆ ಲಾಕ್ ಡೌನ್ ಸಡಿಲಿಕೆ ಆಗುತ್ತಿದಂತೆ ವಿದೇಶಕ್ಕೆ ಪಯಣ ಬೆಳೆಸಿದ್ದರು. ಮಕ್ಕಳ ಸುರಕ್ಷತೆಗಾಗಿ ವಿದೇಶಕ್ಕೆ ಹೋಗುವುದಾಗಿ ಹೇಳಿದ್ದರು. ಸನ್ನಿ ಲಿಯೋನ್ ಈ ನಿರ್ಧಾರದ ಬಗ್ಗೆ ಅನೇಕರು ಬೇಸರ ವ್ಯಕ್ತಪಡಿಸಿದ್ದರು.

Sunny Leone gears up to fly back to Mumbai from Los Angeles

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸನ್ನಿ ಲಿಯೋನ್, ಮುಂಬೈಯನ್ನು ಬಿಟ್ಟು ಹೋಗಲು ಇಷ್ಟವಿಲ್ಲ. ಅಂತರಾಷ್ಟ್ರೀಯ ವಿಮಾನ ಹಾರಾಟ ಪ್ರಾರಂಭವಾದ ಬಳಿಕ ಮತ್ತೆ ಭಾರತಕ್ಕೆ ವಾಪಸ್ ಆಗುವುದಾಗಿ ಹೇಳಿದ್ದರು. ವೈಯಕ್ತಿಕವಾಗಿ ಮುಂಬೈ ತೊರೆಯಲು ತುಂಬಾ ನೋವಾಗುತ್ತೆ. ನಾನು ಮುಂಬೈ ತೊರೆಯಲ್ಲ ಎಂದಿದ್ದರು. ಪತಿ ಡೇನಿಯಲ್ ತಾಯಿ ಮತ್ತು ಅವರ ಕುಟುಂಬಕ್ಕಾಗಿ ಲಾಸ್ ಎಂಜಲೀಸ್ ಗೆ ಹೋಗುತ್ತಿರುವುದಾಗಿ ಹೇಳಿದ್ದರು.

Recommended Video

ಮೈದಾನದಲ್ಲಿದ್ರು ಕೊಹ್ಲಿಗೆ ಅನುಷ್ಕಾ ಶರ್ಮಾರದ್ದೇ ಚಿಂತೆ | Filmibeat Kannada

More from Filmibeat

English summary
Actress Sunny Leone gears up to fly back to Mumbai from Los Angeles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X