ಸನ್ನಿ ಲಿಯೋನ್ ಮೇಲೆ ಹಾವು ಬಿಸಾಡಿದ ವ್ಯಕ್ತಿ.!
ಚಿತ್ರೀಕರಣದ ಬಿಡುವಿನ ವೇಳೆ ಕುಳಿತು ಸ್ಕ್ರಿಪ್ಟ್ ಓದುತ್ತಿದ್ದ ಸನ್ನಿ ಲಿಯೋನ್ ಮೇಲೆ ವ್ಯಕ್ತಿಯೋರ್ವ ಹಾವೊಂದನ್ನು ಹರಿಬಿಟ್ಟಿದ್ದಾನೆ. ಇದರಿಂದ ಭಯಗೊಂಡ ಸನ್ನಿ ಹಾವಿನಿಂದ ತಪ್ಪಿಸಿಕೊಳ್ಳಲು ಒದ್ದಾಡಿದ್ದಾರೆ.
ಅಂದ್ಹಾಗೆ, ಈ ಘಟನೆ ನಡೆದಿರುವುದು ಮುಂಬೈನಲ್ಲಿ. ಸನ್ನಿ ಅಭಿನಯಿಸುತ್ತಿರುವ 'ತೇರಾ ಇಂತಜಾರ್' ಚಿತ್ರದ ಶೂಟಿಂಗ್ ವೇಳೆ ಈ ಘಟನೆ ನಡೆದಿದೆ. ಇದು ಗಂಭೀರವಾದ ವಿಷ್ಯವಲ್ಲ. ಯಾಕಂದ್ರೆ, ಇದು ತಮಾಷೆಗಾಗಿ ಮಾಡಿದ್ದು. ಇದನ್ನ ಸ್ವತಃ ಸನ್ನಿ ಕೂಡ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಇನ್ನು ಇದಾದ ನಂತರ ಹಾವು ಬಿಸಾಡಿದವನ ಮೇಲೆ ಸನ್ನಿ ಪ್ರತಿಕಾರ ತೀರಿಸಿಕೊಂಡಿದ್ದಾರೆ. ಸನ್ನಿ ಲಿಯೋನ್ ಅದೇ ಹಾವು ಹರಿಬಿಟ್ಟ ವ್ಯಕ್ತಿಗೆ ಇದೇ ರೀತಿ ಬಕ್ರಾ ಮಾಡಿದ್ದಾರೆ. ಲ್ಯಾಪ್ ಟಾಪ್ ನಲ್ಲಿ ವಿಡಿಯೋ ನೋಡುತ್ತಿದ್ದ ಆ ವ್ಯಕ್ತಿಗೆ ಸನ್ನಿ ಹಿಂಬದಿಯಿಂದ ಬಂದು ಕೇಕ್ ನಿಂದ ಹೊಡೆದಿದ್ದರು.
ಈ ರೀತಿಯ ಘಟನೆಗಳು ಚಿತ್ರೀಕರಣದ ವೇಳೆ ಸಾಕಷ್ಟು ನಡೆಯುತ್ತಿರುತ್ತೆ. ಆದ್ರೆ, ಅಂತಹ ದೃಶ್ಯಗಳು ಜನರಿಗೆ ನೋಡಲು ಅವಕಾಶ ಸಿಗಲ್ಲ. ಆದ್ರೆ, ಸನ್ನಿ ಲಿಯೋನ್ ಇಂತಹದೊಂದು ಉದಾಹರಣೆ ನೀಡಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.


Click it and Unblock the Notifications











