ಅಪಾಯಕಾರಿ ಮೀನುಗಳ ಜೊತೆ ಸನ್ನಿ ಲಿಯೋನ್ ಮಸ್ತಿ! ವಿಡಿಯೋ ವೈರಲ್!

ಬಾಲಿವುಡ್ ನಟಿ ಸನ್ನಿ ಲಿಯೋನ್ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳ ಜೊತೆಗೆ, ಸ್ಪೆಷಲ್ ಸಾಂಗ್, ಐಟಂ ಸಾಂಗ್, ಮತ್ತು ಆಲ್ಬಂ ಸಾಂಗ್‌ಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಸನ್ನಿ, ತನ್ನ ಮೈಮಾಟದಿಂದಲೇ ಎಲ್ಲರನ್ನೂ ಆಕರ್ಷಿಸುತ್ತಿದ್ದಾರೆ. ಪಡ್ಡೆ ಹುಡುಗರು ಸನ್ನಿ ಅವತಾರಗಳನ್ನು ನೋಡಿ ಫುಲ್ ಥ್ರಿಲ್ ಆಗುತ್ತಾರೆ. ಇದೀಗ ಸನ್ನಿ ಮೈಮಾಟದ ಬದಲು ಮಾದಕ ನಟಿ ಮಾಡಿರುವ ಒಂದು ವಿಡಿಯೋ ನೋಡುಗರ ಮೈ ಚಳಿ ಬಿಡಿಸುವಂತಿದೆ ಅದೇನು ಅಂತ ಮುಂದೆ ಓದಿ..

ಬಾಲಿವುಡ್ ಬ್ಯೂಟಿ, ಹಾಟ್ ಬೆಡಗಿ ಸನ್ನಿ ಲಿಯೋನಿ ತಮ್ಮ ಸಿನಿಮಾ, ಆಲ್ಬಂ ಕೆಲಸಗಳಿಂದ ಸಣ್ಣದೊಂದು ಬ್ರೇಕ್ ಪಡೆದು ಮಾಲ್ಡೀವ್ಸ್ ಗೆ ಇತ್ತೀಚೆಗೆ ಹಾರಿರೊದು ಅವರ ಹಿಂಬಾಲಕರಿಗೆ ಗೊತ್ತೆ ಇದೆ. ಸದ್ಯ ಮಾಲ್ಡೀವ್ಸ್ ನಲ್ಲಿ ಸನ್ನಿ ಲಿಯೋನ್ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಎಂಜಾಯ್ ಮಾಡುತ್ತಿದ್ದಾರೆ. ರಜಾದಿನಗಳನ್ನು ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿರುವ ಸನ್ನಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಮಾಲ್ಡೀವ್ಸ್‌ನ ಸುಂದರ ತಾಣಗಳಲ್ಲಿ ತೆಗೆದುಕೊಂಡ ತನ್ನ ಅಂದವಾದ ಫೋಟೋ, ವೀಡಿಯೋಗಳನ್ನು ಶೇರ್ ಮಾಡಿ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಿದ್ದಾರೆ.

Sunny Leone has shared a video from her Maldives vacation

ಇನ್ನು ಇದೇ ಸಂದರ್ಭದಲ್ಲಿ ಮಾಲ್ಡೀವ್ಸ್‌ನಲ್ಲಿ ಸನ್ನಿ ಶಾರ್ಕ್ ಗಳೊಂದಿಗೆ ಕಾಣಿಸಿಕೊಂಡ ಒಂದು ವೀಡಿಯೋ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಫುಲ್ ವೈರಲ್ ಆಗುತ್ತಾ ಸಾಗಿದೆ. ಸನ್ನಿ ಮಾಲ್ಡೀವ್ಸ್‌ನ ಅದ್ಭುತ ಜಾಗವೊಂದರಲ್ಲಿ ಶಾರ್ಕ್‌ಗಳು ಇರುವ ಕಡೆ ಕುಳಿತು ಮಾಡಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸನ್ನಿ ಶೇರ್ ಮಾಡಿದ ಈ ವೀಡಿಯೋ ಕೆಲವೇ ಗಂಟೆಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ, ಮೆಚ್ಚುಗೆಗಳು ಹರಿದು ಬಂದಿವೆ.ಹಾಗೇ ಸನ್ನಿಯ ಧೈರ್ಯ ಕಂಡು ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ.

ಸನ್ನಿ ಶೇರ್ ಮಾಡಿದ ಈವಿಡಿಯೋವನ್ನು ಸುಮಾರು 15 ಲಕ್ಷಕ್ಕಿಂತಲೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, ದೊಡ್ಡ ಸಂಖ್ಯೆಯಲ್ಲಿ ಮೆಚ್ಚುಗೆಗಳು ಹರಿದು ಬಂದಿದೆ. ಸನ್ನಿ ವಿಡಿಯೋ ಶೇರ್ ಮಾಡಿಕೊಂಡು, "ಈ ಜಾಗವನ್ನು ಪ್ರೀತಿಸುತ್ತೇನೆ!! ಸ್ವಚ್ಛಂದವಾಗಿರುವ ವನ್ಯ ಜೀವಿಗಳು" ಎಂದು ಬರೆದುಕೊಂಡಿದ್ದಾರೆ. ಸನ್ನಿಯ ವಿಡಿಯೋ ನೋಡಿ ಕೆಲವರು ವಾವ್ ಎಂದರೆ ಇನ್ನೂ ಕೆಲವರು ನೋಡಲು ಬಹಳ ಭಯವಾಗುತ್ತಿದೆ ಎಂದು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಇನ್ನು ಸನ್ನಿ ಸ್ಕೂಬಾ ಡೈವ್ ಕೂಡ ಮಾಡಿದ್ದು ಸಮುದ್ರದ ಆಳದಲ್ಲಿ ವಿಭಿನ್ನ ಬಗೆಯ ಮೀನುಗಳನ್ನು ಕಂಡು ಖುಷಿ ಪಟ್ಟಿದ್ದಾರೆ. ಇದರ ವೀಡಿಯೋವನ್ನು ತಮ್ಮ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇನ್ನು ಮಾಲ್ಡೀವ್ಸ್‌ನ ಬೀಚ್‌ಗಳಲ್ಲಿ ಬಿಕಿನಿ ತೊಟ್ಟು, ಹಾಟ್ ಪೋಸ್ ಗಳನ್ನು ನೀಡಿರುವ ಸನ್ನಿ ಫೋಟೋಗಳು ಸಹಾ ಅಭಿಮಾನಿಗಳ ಮನಸ್ಸಿನಲ್ಲಿ ಕಿಚ್ಚು ಹೊತ್ತಿಸಿದೆ. ಸನ್ನಿ ಲಿಯೋನ್ ಕೆಲವು ದಿನಗಳ ಹಿಂದೆ ಮಧುಬನ್ ಮ್ಯೂಸಿಕ್ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದರು. ಇದರ ಹಾಡಿನಲ್ಲಿ ಸನ್ನಿ ಅಶ್ಲೀಲ ನೃತ್ಯ ಮಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎನ್ನುವ ವಿವಾದಗಳು ಸಹ ಹುಟ್ಟಿಕೊಂಡು ದೊಡ್ಡ ಸುದ್ದಿಯಾಗಿತ್ತು.

More from Filmibeat

English summary
Sunny Leone has shared a video from her Maldives vacation, in which she can be seen feeding sharks.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X