ಸನ್ನಿ ಲಿಯೋನ್ ಗೆ ಬಾಡಿಗೆ ಮನೆ ಸಿಗುತ್ತಿಲ್ವಂತಪ್ಪೋ!
ಆದರೆ ಭಾರತದಂತ ಸಂಪ್ರದಾಯಬದ್ಧ ದೇಶದಲ್ಲಿ ನೀಲಿ ತಾರೆಯಾಗಿದ್ದವರೊಬ್ಬರಿಗೆ ಬಾಡಿಗೆ ಮನೆ ಸಿಗುವುದು ಅಷ್ಟು ಸುಲಭವೇ? ಅದರಲ್ಲೂ ಜಗತ್ತೇ ತಿಳಿದಿರುವ ಸನ್ನಿ ಲಿಯೋನ್ ಅಂಥವರಿಗೆ ಮುಂಬೈನಂತ ಮಹಾನಗರದಲ್ಲೂ ಬಾಡಿಗೆ ಮನೆ ಕೊಡಲು ನಿರಾಕರಿಸುತ್ತಿದ್ದಾರೆ. ಇಲ್ಲಿನ ಪರಿಸರ, ಪರಿಸ್ಥಿತಿ ಅರಿಯದ ಸನ್ನಿ ದಂಪತಿಗಳು ಇನ್ನೂ ಮನೆ ಹುಡುಕಾಟ ಮುಂದುವರಿಸಿದ್ದಾರೆ.
ಮುಂಬೈ ಸಬರ್ಬನ್ ಸೊಸಾಯ್ಟಿ ಯಲ್ಲಿ ಸನ್ನಿಗೆ ಮನೆ ಕೊಡಲು ಯಾರೂ ಒಪ್ಪುತ್ತಿಲ್ಲವಾದ ಕಾರಣ ಸನ್ನಿ ಹಾಗೂ ಪತಿ ಡೇನಿಯಲ್ ಸೇರಿ ಮುಂಬೈನ ಟಾಪ್ ಎಸ್ಟೇಟ್ ಏಜೆಂಟರುಗಳನ್ನು ಸಂಪರ್ಕಿಸಿ ಮನೆ ಹುಡುಕಾಟಕ್ಕೆ ಪ್ರಯತ್ನಿಸುತ್ತಿದ್ದಾರೆ. ಆದರೆ, ಹುಡುಕಾಟ ಪ್ರಾರಂಭವಾಗಿ ವಾರ ಕಳೆದರೂ ಅವರಿಗೆ ಮನೆ ಸಿಕ್ಕಿಲ್ಲ. ಹೊಟೆಲ್ ತೊರೆದು ಮನೆಯಲ್ಲಿ ವಾಸಿಸುವ ಸನ್ನಿ ಬಯಕೆ ಈಡೇರಿಲ್ಲ.
ಸನ್ನಿ ದಂಪತಿಗಳು ಮುಂಬೈನಲ್ಲಿ ಮನೆ ಹುಡುಕುತ್ತಿರುವ ಕಾರಣ, ಸನ್ನಿ ಲಿಯೋನ್ ಪತಿ ಡೇನಿಯಲ್ ವೆಬರ್ ಅವರಿಗೆ ಇತ್ತೀಚಿಗೆ ಕೆಲವು ಬಾಲಿವುಡ್ ಚಿತ್ರಗಳ ಆಫರ್ ಲಭಿಸಿದೆ. ಸ್ವತಃ ಸನ್ನಿಗಂತೂ ಬಾಲಿವುಡ್ ಚಿತ್ರಗಳು ಕೈನಲ್ಲಿವೆ. ಹೀಗಿರುವಾಗ ಇಬ್ಬರೂ ಮುಂಬೈನಲ್ಲೇ ಮನೆ ಮಾಡಬೇಕಾದ ಅಗತ್ಯತೆಗೆ ಸಿಲುಕಿದ್ದಾರೆ. ಆದರೆ ಅವರೇನೂ ಮನೆ ಹುಡುಕುತ್ತಿದ್ದಾರೆ, ಸಿಗುವುದೋ ಇಲ್ಲವೋ, ಸದ್ಯಕ್ಕೆ ಹೊಟೆಲ್ ಗತಿಯಾಗಿದೆ. (ಏಜೆನ್ಸೀಸ್)


Click it and Unblock the Notifications












