»   » ಹಸಿರು ಪಾರದರ್ಶಕ ಸೀರೆಯಲ್ಲಿ ನೀಲಿ ಚಿತ್ರಗಳ ತಾರೆ

ಹಸಿರು ಪಾರದರ್ಶಕ ಸೀರೆಯಲ್ಲಿ ನೀಲಿ ಚಿತ್ರಗಳ ತಾರೆ

Posted By:
Subscribe to Filmibeat Kannada
ಪಾಶ್ಚಿಮಾತ್ಯ ಜಗತ್ತಿನಲ್ಲಿ ಬಿಚ್ಚಮ್ಮಳೆಂದೇ ಖ್ಯಾತಳಾಗಿರುವ ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಈಗ ಬಾಲಿವುಡ್‌ಗೆ ಅಡಿಯಿಟ್ಟಿರುವುದು ಗೊತ್ತೇ ಇದೆ. ನೀಲಿ ಚಿತ್ರಗಳ ತಾರೆ ಎಂದು ಕರೆಸಿಕೊಂಡಿದ್ದರೂ ಆಕೆ ಹಸಿರು ಸೀರೆಯುಟ್ಟು ಎಲ್ಲರ ಗಮನಸೆಳೆದಿದ್ದಾರೆ.

ಸನ್ನಿ ಲಿಯೋನ್ ಕೇವಲ ಸೀರೆಯುಟ್ಟಿದ್ದರೆ ಅಷ್ಟಾಗಿ ಸುದ್ದಿಯಾಗುತ್ತಿರಲಿಲ್ಲವೇನೋ. ಆದರೆ ಆಕೆ ಪಾರದರ್ಶಕ ಸೀರೆಯುಟ್ಟಿರುವುದು ಚರ್ಚೆಗೆ ನಾಂದಿಹಾಡಿದೆ. ಪುರುಷರ ಜನಪ್ರಿಯ ನಿಯತಕಾಲಿಕೆ 'ಎಫ್‌ಎಚ್‌ಎಂ' ಮುಖಪುಟಕ್ಕಾಗಿ ಸನ್ನಿ ಈ ರೀತಿ ತಮ್ಮ ಸೌಂದರ್ಯವನ್ನು ತೆರೆದಿಟ್ಟಿದ್ದಾರೆ.

ಸದ್ಯಕ್ಕೆ ಮಹೇಶ್ ಭಟ್ ಅವರ 'ಜಿಸ್ಮ್ 2' ಚಿತ್ರದಲ್ಲಿ ನಟಿಸುತ್ತಿರುವ ಈಕೆಯ ಹಾಟ್ ಬೆಡ್ ರೂಂ ಸನ್ನಿವೇಶಗಳು ಈಗಾಗಲೆ ಬಾಲಿವುಡ್‌ನಲ್ಲಿ ಭಾರಿ ಗುಲ್ಲೆಬ್ಬಿಸಿವೆ. ಈಕೆಗೆ ಅಭಿನಯದ ಗಂಧಗಾಳಿ ಗೊತ್ತಿದೆಯೋ ಇಲ್ಲವೋ ಒಟ್ಟಿನಲ್ಲಿ ಈಕೆ ತಮ್ಮ ಮೈಮಾಟದಿಂದಲೇ ಎಲ್ಲರ ಗಮನ ಸೆಳೆಯುತ್ತಿರುವುದು ವಿಶೇಷ. (ಏಜೆನ್ಸೀಸ್)

English summary
Bollywood actress Sunny Leone appeared in translucent green saree. She has chosen to go seductively desi for the cover of the popular men’s magazine FHM.
Please Wait while comments are loading...