twitter
    For Quick Alerts
    ALLOW NOTIFICATIONS  
    For Daily Alerts

    ನಾನು 'ಮಿಸೆಸ್ ಇಂಡಿಯಾ' ಎಂದು 'ಅದೃಶ್ಯ'ರಾದ ಸನ್ನಿ ಲಿಯೋನ್: ವೈರಲ್ ವಿಡಿಯೋ

    |

    ಅನಿಲ್ ಕಪೂರ್ ನಟನೆಯ, 1987ರಲ್ಲಿ ಬಿಡುಗಡೆಯಾದ 'ಮಿಸ್ಟರ್ ಇಂಡಿಯಾ' ಹಿಂದಿ ಸಿನಿಮಾ ಚಿತ್ರರಂಗದಲ್ಲಿ ಧೂಳೆಬ್ಬಿಸಿತ್ತು. ಈ ಚಿತ್ರವನ್ನು ರೀಮೇಕ್ ಮಾಡಬೇಕೇ ಬೇಡವೇ ಎಂಬ ವಿಚಾರ ತೀವ್ರ ಚರ್ಚೆಯಲ್ಲಿದೆ. ಈ ನಡುವೆ ನಟಿ ಸನ್ನಿ ಲಿಯೋನ್ ತಾನು 'ಮಿಸೆಸ್ ಇಂಡಿಯಾ' ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ.

    ಸೋಷಿಯಲ್ ಮೀಡಿಯಾಗಳಲ್ಲಿ ತಮಾಷೆಯ ವಿಡಿಯೋಗಳ ಮೂಲಕ ಅಭಿಮಾನಿಗಳನ್ನು ಕೆಣಕುವುದು ಸನ್ನಿ ಲಿಯೋನ್‌ಗೆ ಅಭ್ಯಾಸವಾಗಿದೆ. ಮಿರರ್ ಎಫೆಕ್ಟ್‌ನಲ್ಲಿನ ತಂತ್ರಜ್ಞಾನವನ್ನು ಬಳಸಿಕೊಂಡು ಟಿಕ್ ಟಾಕ್‌ನಲ್ಲಿ ಸನ್ನಿ ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದನ್ನು ಕಂಡು ಅಭಿಮಾನಿಗಳು ಇದೇ ರೀತಿ ಮತ್ತಷ್ಟು ವಿಡಿಯೋ ಮಾಡಿ ಎಂದು ದುಂಬಾಲು ಬಿದ್ದಿದ್ದಾರೆ.

    ಸನ್ನಿ ಲಿಯೋನ್ ಬಳಿ ಫೋನ್ ನಂಬರ್ ಕೇಳಿ ಮುಜುಗರಕ್ಕೀಡಾದ ಹಿರಿಯ ನಟ ಸನ್ನಿ ಲಿಯೋನ್ ಬಳಿ ಫೋನ್ ನಂಬರ್ ಕೇಳಿ ಮುಜುಗರಕ್ಕೀಡಾದ ಹಿರಿಯ ನಟ

    ತಮ್ಮನ್ನು ತಾವು ಮಿಸೆಸ್ ಇಂಡಿಯಾ ಎಂದು ಬರೆದುಕೊಂಡಿರುವ ಸನ್ನಿ ಲಿಯೋನ್ ಟಿಕ್ ಟಾಕ್ ವಿಡಿಯೋ ವೈರಲ್ ಆಗಿದೆ. ನೃತ್ಯಪಟುಗಳು ಸೊಂಟದ ಸುತ್ತ ಸಿಕ್ಕಿಸಿಕೊಂಡು ಗಿರಕಿ ಹೊಡೆಸುವ ರಿಂಗ್ (ಹೂಲಾ ಹೂಪ್) ಬಳಸಿಕೊಂಡು ಸನ್ನಿ ವಿಭಿನ್ನವಾದ ವಿಡಿಯೋ ಮಾಡಿದ್ದಾರೆ.

    ಸನ್ನಿ ಮ್ಯಾಜಿಕ್

    ಸನ್ನಿ ಮ್ಯಾಜಿಕ್

    ಹೂಲಾ ಹೂಪ್‌ನಿಂದ ಸನ್ನಿ ಲಿಯೋನ್ ಅವರ ದೇಹದ ಒಂದು ಭಾಗ ಕಣ್ಮರೆಯಾದಂತೆ ಕಾಣಿಸುತ್ತದೆ. ಬಿಳಿ ಮತ್ತು ಹಳದ ಬಣ್ಣದ ಇಟ್ಟಿಗೆಗಳಿರುವ ಗೋಡೆಯ ಹಿನ್ನೆಲೆಯಲ್ಲಿ ಸನ್ನಿ ಈ ಟ್ರಿಕ್ ಮಾಡಿದ್ದಾರೆ. ಇದರಿಂದ ಸನ್ನಿ ಮ್ಯಾಜಿಕ್ ಮಾಡಿ ತಮ್ಮ ಅರ್ಧ ದೇಹವನ್ನು ಅಗೋಚರವಾಗಿಸಿದ್ದಂತೆ ಕಾಣಿಸುತ್ತದೆ.

    ರಿಂಗ್ ಹಿಡಿದು ಸನ್ನಿ ಅದೃಶ್ಯ

    ರಿಂಗ್ ಹಿಡಿದು ಸನ್ನಿ ಅದೃಶ್ಯ

    'ಮಿಸ್ಟರ್ ಇಂಡಿಯಾ' ಸಿನಿಮಾದಲ್ಲಿ ನಟ ಅನಿಲ್ ಕಪೂರ್, ಅಗೋಚರವಾಗಲು ಕೈಗೆ ಚಿನ್ನದ ವಾಚ್ ಧರಿಸುತ್ತಿದ್ದ ದೃಶ್ಯ ನಿಮಗೆ ನೆನಪಿರಬಹುದು. ಅದೇ ರೀತಿ ಸನ್ನಿ, ರಿಂಗ್ ಹಿಡಿದು ಅದೃಶ್ಯರಾಗುತ್ತಾರೆ. ಅದಕ್ಕಾಗಿಯೇ ತಮ್ಮನ್ನು 'ಮಿಸೆಸ್ ಇಂಡಿಯಾ' ಎಂದು ಕರೆದುಕೊಂಡಿದ್ದಾರೆ.

    ಕಾಮಿಡಿ ವೆಬ್ ಸಿರೀಸ್ನಲ್ಲಿ ಮಾದಕ ನಟಿ ಸನ್ನಿ ಲಿಯೋನ್ಕಾಮಿಡಿ ವೆಬ್ ಸಿರೀಸ್ನಲ್ಲಿ ಮಾದಕ ನಟಿ ಸನ್ನಿ ಲಿಯೋನ್

    ನನಗೆ ವಾಚ್ ಬೇಕಾಗಿಲ್ಲ

    ನನಗೆ ವಾಚ್ ಬೇಕಾಗಿಲ್ಲ

    'ಬಹುಶಃ ನಾನು ಅದೃಶ್ಯಳಾಗಲು ನನಗೆ ಇನ್ನು ವಾಚ್‌ನ ಅಗತ್ಯ ಇರುವುದಿಲ್ಲ' ಎಂದು ಸನ್ನಿ ಲಿಯೋನ್ ತಮ್ಮ ವಿಡಿಯೋದ ಜತೆ ಹೇಳಿಕೊಂಡಿದ್ದಾರೆ. ಅದಕ್ಕೆ ಹಿಂದಿ ಸಿನಿಮಾಗಳ ಜನಪ್ರಿಯ ಡೈಲಾಗ್‌ಗಳನ್ನೂ ಹ್ಯಾಷ್‌ ಟ್ಯಾಗ್‌ನಲ್ಲಿ ಸೇರಿಸಿದ್ದಾರೆ. 'ಝಕಾಸ್', 'ಮೊಗ್ಯಾಂಬೋ ಖುಷ್ ಹೋಗಾ ಕ್ಯಾ' ಎಂದು ಬರೆದಿದ್ದಾರೆ.

    13.57 ಲಕ್ಷ ವೀಕ್ಷಣೆ

    13.57 ಲಕ್ಷ ವೀಕ್ಷಣೆ

    ಈ ವಿಡಿಯೋವನ್ನು ಅವರು ಹಂಚಿಕೊಂಡ ಒಂದು ಗಂಟೆಯೊಳಗೇ 2.5 ಲಕ್ಷ ಮಂದಿ ವೀಕ್ಷಿಸಿದ್ದರು. ಎರಡು ದಿನದಲ್ಲಿ ಈ ವಿಡಿಯೋವನ್ನು ಇನ್‌ ಸ್ಟಾಗ್ರಾಂನಲ್ಲಿ 13.57 ಲಕ್ಷ ಬಾರಿ ವೀಕ್ಷಿಸಲಾಗಿದೆ. ಸಾವಿರಾರು ಅಭಿಮಾನಿಗಳು ಸನ್ನಿಯ ಅದೃಶ್ಯ ವಿಡಿಯೋವನ್ನು ಮೆಚ್ಚಿಕೊಂಡು ಕಾಮೆಂಟ್ ಹಾಕಿದ್ದಾರೆ.

    ರೀಮೇಡ್ ಘೋಷಣೆಯಿಂದ ವಿವಾದ

    ರೀಮೇಡ್ ಘೋಷಣೆಯಿಂದ ವಿವಾದ

    1987ರಲ್ಲಿ ಬಿಡುಗಡೆಯಾಗಿದ್ದ ಮಿಸ್ಟರ್ ಇಂಡಿಯಾ ಚಿತ್ರದಲ್ಲಿ ಅನಿಲ್ ಕಪೂರ್, ಶ್ರೀದೇವಿ, ಅಮರೀಶ್ ಪುರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಶೇಖರ್ ಕಪೂರ್ ನಿರ್ದೇಶನ ಮಾಡಿದ್ದರು. ಈ ಸಿನಿಮಾವನ್ನು ರೀಮೇಡ್ ಮಾಡುವುದಾಗಿ ಅಲಿ ಅಬ್ಬಾಸ್ ಜಫರ್ ಘೋಷಿಸಿದ್ದು ವಿವಾದ ಸೃಷ್ಟಿಸಿತ್ತು. ಈ ಘೋಷಣೆ ಮಾಡುವ ಮುನ್ನ ತಮ್ಮನ್ನು ಸಂಪರ್ಕಿಸಿಯೂ ಇಲ್ಲ ಎಂದು ಶೇಖರ್ ಕಪೂರ್ ಅಸಮಾಧಾನ ವ್ಯಕ್ತಪಡಿಸಿದ್ದರು.

    English summary
    Sunny Leone has shared her TikTok video in Instagram. She turns invisible as Mrs India amid Mr India reboot debate.
    Thursday, March 5, 2020, 16:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X