ಜನ್ನತ್ 2 ಎದುರು ಸೋತ ಸನ್ನಿ ಲಿಯೋನ್ 'ಜಿಸ್ಮ್ 2'

ಜಿಸ್ಮ್ 2 ನಿರ್ದೇಶಕಿ ಪೂಜಾ ಭಟ್ ತಮ್ಮ ಟ್ವೀಟರ್ ಪೇಜಿನಲ್ಲಿ, "ರ್ಡರ್ 2 ಹಾಗೂ ಜನ್ನತ್ 2 ಮೊದಲ ದಿನದ ಗಳಿಕೆ ದಾಖಲೆಯನ್ನು ಇದೀಗ ಬಿಡುಗಡೆಯಾಗಿರುವ ತಮ್ಮ ನಿರ್ದೇಶನದ ಜಿಸ್ಮ್ 2 ಮುರಿದಿದೆ" ಎಂದಿದ್ದರು. ಅದು ಮರ್ಡರ್ 2 ವಿಷಯದಲ್ಲಿ ಅಕ್ಷರಶಃ ನಿಜವೂ ಆಗಿತ್ತು. ಆದರೆ ಜನ್ನತ್ 2 ದಾಖಲೆಯನ್ನು ಮುರಿಯುವಲ್ಲಿ ಹಾಗಿರಲಿ, ಸರಿಗಟ್ಟುವಲ್ಲೂ ಜಿಸ್ಮ್ 2 ವಿಫಲವಾಗಿದೆ.

ಇದೇ ವರ್ಷ, ಮೇ 04, 2012 ರಂದು ಬಿಡುಗಡೆಯಾಗಿದ್ದ ಪೂಜಾ ತಂದೆ ಮಹೇಶ್ ಭಟ್ ನಿರ್ದೇಶನದ ಚಿತ್ರ ಜನ್ನತ್ 2, ಮಲ್ಟಿಪ್ಲೆಕ್ಸ್ ಗಳಲ್ಲಿ ಶೇ. 70 ರಿಂದ 80 ಹಾಗೂ ಥಿಯೇಟರ್ ಗಳಲ್ಲಿ ಶೇ. 90 ರಿಂದ 100 ಗಳಿಕೆ ಸಂಗ್ರಹಿಸಿತ್ತು. ಇಮ್ರಾನ್ ಹಶ್ಮಿ ಹಾಗೂ ಇಶಾ ಗುಪ್ತ ಜೋಡಿಯ ಚಿತ್ರ ಿಂಡಿಯನ್ ಬಾಕ್ಸ್ ಆಫೀಸಿನಲ್ಲಿ ರು. 8.52 ಕೋಟಿ ಗಳಿಸಿತ್ತು.

ಆದರೆ ಜಿಸ್ಮ್ 2 ಗಳಿಕೆ ರು. 7.50 ಕೋಟಿ ಮಾತ್ರ. ಹೀಗಾಗಿ ತಮ್ಮ ತಂದೆಯ ಚಿತ್ರದ ಗಳಿಕೆಯನ್ನು ಸರಿಗಟ್ಟುವಲ್ಲೂ ಪೂಜಾ ವಿಫಲವಾಗಿದ್ದಾರೆ. ಈ ಎರಡೂ ಚಿತ್ರಗಳೂ ಮಹೇಶ್ ಭಟ್ ನಿರ್ಮಾಣದವೇ ಆದ್ದರಿಂದ ಇವೆರಡೂ ಚಿತ್ರಗಳ ಹೋಲಿಕೆ ಅನಿವಾರ್ಯ. ಮಹೇಶ್ ಭಟ್ ಜನ್ನತ್ 2 ಸೋಲಿಸುವಲ್ಲಿ ಸನ್ನಿ ವಿಫಲರಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಕಾರಣ, ಜಗದ್ವಿಖ್ಯಾತ ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಜಿಸ್ಮ್ 2 ಚಿತ್ರದಲ್ಲಿದ್ದಾರೆ.

ಸನ್ನಿ ಲಿಯೋನ್ ಜೊತೆ ರಣದೀಪ್ ಹೂಡಾ ಹಾಗೂ ಅರುಣೋದಯ್ ಸಿಂಗ್ ಎಂಬಿಬ್ಬರು ನಟರನ್ನು ಜೋಡಿಯಾಗಿಸಿ ಪೂಜಾ ಭಟ್ ನಿರ್ದೇಶಿಸಿದ ಚಿತ್ರ ಜಿಸ್ಮ್ 2, ನಿರೀಕ್ಷೆಗೆ ಸರಿಯಾದ ಗಳಿಕೆ ಪಡೆಯಲಿಲ್ಲ. ಸನ್ನಿ ಲಿಯೋನ್ ನಟಿಸಿದ್ದರೂ ವಯಸ್ಕರ ಚಿತ್ರದಂತಿರದೇ ಮಾಮೂಲಿ ಬಾಲಿವುಡ್ ಚಿತ್ರಗಳಂತೆ ಕ್ಲಾಸ್ ಆಗಿರುವುದು ಸನ್ನಿ ಲಿಯೋನ್ ಅಭಿಮಾನಿ ಪ್ರೇಕ್ಷಕರಿಗೆ ಇಷ್ಟವಾಗಿಲ್ಲ ಎನ್ನಬಹುದು. ಆದರೆ ಚಿತ್ರದ ಗಳಿಕೆ ಶೋಚನೀಯವಾಗೇನೂ ಇಲ್ಲ. (ಏಜೆನ್ಸೀಸ್)

More from Filmibeat

English summary
Pooja Bhatt movie Jism 2 starring Sunny Leone, Randeep, has failed to beat first day collection record of Jannat 2 and Murder 2 at Indian Box Office.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X