ಸನ್ನಿ ಜಿಸ್ಮ್ 2 ಚಿತ್ರ ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ
ವಯಸ್ಕರ ಚಿತ್ರಗಳ ಮೂಲಕ ಜನಪ್ರಿಯತೆ ಗಳಿಸಿದ್ದ ಮೋಹಕ ತಾರೆ ಸನ್ನಿ ಲಿಯೋನ್ ಅಭಿನಯದ ಹಿಂದಿಯ 'ಜಿಸ್ಮ್ 2' ಚಿತ್ರ ಸೆನ್ಸಾರ್ ನಲ್ಲಿ ಪಾಸಾಗಿದೆ. ಈ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ದಯಪಾಲಿಸಿದೆ. ಅಂದರೆ ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ.
ಈ ಚಿತ್ರ ಸೆಟ್ಟೇರಿದಾಗಿನಿಂದಲೂ ಒಂದಲ್ಲ ಒಂದು ಕಾರಣಗಳಿಗೆ ಸುದ್ದಿ ಮಾಡುತ್ತಲೇ ಇದೆ. ಈಗಾಗಲೆ ಬಿಡುಗಡೆಯಾಗಿರುವ ಚಿತ್ರದ ಹಾಟ್ ಪ್ರೊಮೋಗಳು ಸಾಕಷ್ಟು ಕುತೂಹಲ ಮೂಡಿಸಿವೆ. ಇನ್ನು ಚಿತ್ರದ ಸ್ಟಿಲ್ಸ್ ಬಗ್ಗೆ ಹೇಳುವುದೇ ಬೇಡ. ಧುಮ್ಮಿಕ್ಕುವ ಆ ಸೌಂದರ್ಯವನ್ನು ನೀವೇ ನೋಡಿ.
ಸನ್ನಿ ಲಿಯೋನ್, ರಣದೀಪ್ ಹೂಡ, ಅರುಣೋದಯ್ ಸಿಂಗ್ ತಾರಾಗಣದ ಈ ಚಿತ್ರ ಆಗಸ್ಟ್ 3ರಂದು ತೆರೆಕಾಣುತ್ತಿದೆ. ಪೂಜಾ ಭಟ್ ನಿರ್ದೇಶನದ ಈ ಚಿತ್ರವನ್ನು ಡಿನೋ ಮೋರಿಯಾ ಹಾಗೂ ಪೂಜಾ ಭಟ್ ಜಂಟಿಯಾಗಿ ನಿರ್ಮಿಸಿದ್ದಾರೆ.
ಈ ಹಿಂದೆ 2003ರಲ್ಲಿ ತೆರೆಕಂಡಿದ್ದ 'ಜಿಸ್ಮ್' ಚಿತ್ರದಲ್ಲಿ ಜಾನ್ ಅಬ್ರಹಾಂ ಹಾಗೂ ಬಿಪಾಶಾ ಬಸು ಲೀಲಾಜಾಲವಾಗಿ ಅಭಿನಯಿಸಿದ್ದರು. ಆ ಚಿತ್ರದ ಮುಂದುವರಿದ ಭಾಗವಾಗಿ 'ಜಿಸ್ಮ್ 2' ಚಿತ್ರ ಬರುತ್ತಿದೆ. ಚಿತ್ರದಲ್ಲಿ ಸನ್ನಿ ಲಿಯೋನ್ ಅವರ ಧುಮ್ಮಿಕ್ಕುವ ಸೌಂದರ್ಯ ಪ್ರಮುಖ ಆಕರ್ಷಣೆ.
ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್'ಗೆ ಅಡಿಯಿಟ್ಟ ಬಳಿಕ ಸನ್ನಿ ಲಿಯೋನ್ ಬಾಲಿವುಡ್ ಗಮನವನ್ನು ಸೆಳೆದಿದ್ದರು. ಕೂಡಲೆ ಆಕೆಯನ್ನು 'ಜಿಸ್ಮ್ 2' ಚಿತ್ರಕ್ಕೆ ಆಯ್ಕೆ ಮಾಡಿದ್ದರು ಮಹೇಶ್ ಭಟ್.
ಜೈಪುರ, ಗೋವಾ ಹಾಗೂ ಶ್ರೀಲಂಕಾದ ಸುಂದರ ತಾಣಗಳಲ್ಲಿ ಚಿತ್ರೀಕರಿಸಿರುವ ಈ ಚಿತ್ರಕ್ಕೆ ಇಟಾಲಿಯನ್ ರೊಮ್ಯಾಂಟಿಕ್ ಸಿನಿಮಾ Last Tago In Paris ಎಂಬ ಚಿತ್ರ ಸ್ಫೂರ್ತಿಯಾಗಿದೆ. 'ಜಿಸ್ಮ್ 2' ಚಿತ್ರದ ಪೋಸ್ಟರ್‌ಗಳು ಈಗಾಗಲೆ ಬಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿವೆ.
ಸನ್ನಿ ಅಭಿನಯದ ಚೊಚ್ಚಲ ಬಾಲಿವುಡ್ ಚಿತ್ರ ಇದು. ಚಿತ್ರದಲ್ಲಿ ಕೇವಲ ಬೆಡ್‌ರೂಂ, ಹಾಟ್ ದೃಶ್ಯಗಳಷ್ಟೇ ಅಲ್ಲದೆ ಒಳ್ಳೆಯ ಕತೆಯೂ ಇದೆಯಂತೆ. ರಣದೀಪ್ ಮತ್ತು ಸನ್ನಿಯ 'ರಸಾಯನ'ಶಾಸ್ತ್ರ ಚೆನ್ನಾಗಿ ವರ್ಕ್‌ಔಟ್ ಆಗಿದೆ ಎಂಬ ಮಾತುಗಳು ಕೇಳಿಬಂದಿವೆ. ಒಟ್ಟಿನಲ್ಲಿ ಬೆಡ್‌ರೂಂ ಹಾಟ್ ದೃಶ್ಯಗಳಂತೂ ವರ್ಣನೆಗೆ ನಿಲುಕದಷ್ಟು ಅದ್ಭುತ ಎನ್ನುತ್ತವೆ ಮೂಲಗಳು. (ಏಜೆನ್ಸೀಸ್)


Click it and Unblock the Notifications











