Don't Miss!
- Sports
IPL 2023: ರವೀಂದ್ರ ಜಡೇಜಾ CSK ತಂಡವನ್ನ ತೊರೆದ್ರೆ, ಈ ಇಬ್ಬರು ಆಟಗಾರರ ಮೇಲಿದೆ ಫ್ರಾಂಚೈಸಿ ಕಣ್ಣು
- Finance
ಚಿನ್ನದ ಹೂಡಿಕೆ ಯೋಜನೆ ಮತ್ತೆ ಆರಂಭ, ಈ 4 ದಿನಗಳನ್ನು ನೆನಪಿಡಿ!
- News
ಮಂಗಳೂರು: ಬ್ಯಾನರ್ನಲ್ಲಿ ಗೋಡ್ಸೆ ಫೋಟೋ ಪ್ರತ್ಯಕ್ಷ, ಮತ್ತೊಂದು ವಿವಾದ
- Technology
ಇನ್ಫಿನಿಕ್ಸ್ ನೋಟ್ 12 ಪ್ರೊ 4G ಸ್ಮಾರ್ಟ್ಫೋನ್ ಲಾಂಚ್ ಡೇಟ್ ಫಿಕ್ಸ್!
- Lifestyle
ನಿಮ್ಮ ಲೈಫ್ ಪಾರ್ಟನರ್ ಹತ್ರ ಈ ವಿಷಯಗಳನ್ನು ಹೇಳಲೇಬೇಡಿ
- Automobiles
ಸ್ಟೈಲಿಶ್ ಲುಕ್ ಹೊಂದಿರುವ ಹೋಂಡಾ ಆಕ್ಟಿವಾ 6ಜಿ ಪ್ರೀಮಿಯಂ ಎಡಿಷನ್ ವಿಶೇಷತೆಗಳು
- Education
Online Courses After Class 12 : ಆನ್ಲೈನ್ ಸರ್ಟಿಫಿಕೇಟ್, ಡಿಪ್ಲೋಮಾ ಮತ್ತು ಪದವಿ ಕೋರ್ಸ್ ಗಳ ಪಟ್ಟಿ
- Travel
2022ರ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ: ಭಾರತದಲ್ಲಿಯ ಪ್ರಸಿದ್ದ ಕೃಷ್ಣ ದೇವರ ದೇವಾಲಯಗಳಿಗೆ ಭೇಟಿ ಕೊಡಿ
ದರ್ಶನ್ ಸೋ ನೈಸ್, ರಾಕಿ ಭಾಯ್ ನಾಟ್ ಮೈ ಬಾಯ್ ಎಂದಳು ಸನ್ನಿ ಲಿಯೋನ್!
ಬಾಲಿವುಡ್ನಲ್ಲಿ ಮಿಂಚಿದ ನಟಿ ಸನ್ನಿ ಲಿಯೋನ್, ಕನ್ನಡ ಸಿನಿಮಾ ರಂಗದಲ್ಲೂ ಕೂಡ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಕನ್ನಡ ಸಿನಿಮಾದ ಐಟಂ ಹಾಡುಗಳಲ್ಲಿ ಹೆಜ್ಜೆ ಹಾಕಿ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಕೇವಲ ಕನ್ನಡದಲ್ಲಿ ಅಭಿನಯಿಸುವುದು ಮಾತ್ರವಲ್ಲ ಸನ್ನಿ ಲಿಯೋನ್ ಕನ್ನಡ ಚಿತ್ರರಂಗದ ಬಗ್ಗೆ ಒಂದಷ್ಟು ತಿಳಿದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ನಟ ದರ್ಶನ್ ಮತ್ತು ಯಶ್ ಬಗ್ಗೆ ಸನ್ನಿ ಲಿಯೋನ್ ಮಾತನಾಡಿದ್ದಾರೆ. ನಿರೂಪಕಿ ಅನುಶ್ರೀ ನಡೆಸಿಕೊಟ್ಟಿರುವ ಕಾರ್ಯಕ್ರಮದಲ್ಲಿ ಸನ್ನಿ ಲಿಯೋನ್ ದರ್ಶನ್ ಮತ್ತು ಯಶ್ ಕುರಿತಾಗಿ ಮಾತನಾಡಿದ್ದಾರೆ. ಈ ಸಂದರ್ಶನದ ಸಣ್ಣದೊಂದು ಪ್ರೋಮೊ ಹರಿಬಿಟ್ಟಿದ್ದಾರೆ ಅನುಶ್ರೀ.
ಕರಣ್
ಜೋಹರ್ಗೆ
ಸಿನಿಮಾ
ಮಾಡುವುದಕ್ಕೆ
ಬರಲ್ವಾ?
ಸಮಂತಾ
ಮಾತಿನ
ಅರ್ಥವೇನು?
ರಾಕಿ ಭಾಯ್ ಮತ್ತು ದರ್ಶನ್ ಬಗ್ಗೆ ಮಾತನಾಡಿರುವ ಸನ್ನಿ ಲಿಯೋನ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಷ್ಟಕ್ಕೂ ದರ್ಶನ್ ಬಗ್ಗೆ ಸನ್ನಿ ಲಿಯೋನ್ ಏನಂದ್ರು? ಯಶ್ ಫೋಟೊ ನೋಡಿ ಸನ್ನಿ ಲಿಯೋನಿ ಹೀಗೆ ಅಂದಿದ್ದು ಯಾಕೆ? ಅನ್ನೋದನ್ನ ಮುಂದೆ ಓದಿ...

ಅನುಶ್ರೀ ಶೋನಲ್ಲಿ 'ಚಾಂಪಿಯನ್' ತಂಡ!
ನಿರೂಪಕಿ ಅನುಶ್ರೀ ತಮ್ಮ ಯುಟ್ಯೂಬ್ ಚಾನಲ್ನಲ್ಲಿ ಹಲವು ಸಿನಿಮಾಗಳ ಸಂದರ್ಶನವನ್ನು ಮಾಡುತ್ತಾರೆ. ನಾನಾ ಸೆಲೆಬ್ರಿಟಿಗಳು ಮತ್ತು ಸಿನಿಮಾ ತಂಡಗಳು ಅನುಶ್ರೀ ಸಂದರ್ಶನದಲ್ಲಿ ಕಾಣಿಸಿಕೊಳ್ಳುತ್ತವೆ. ಅಂತೆಯೇ ಈಗ ಕನ್ನಡದ ಸಿನಿಮಾ 'ಚಾಂಪಿಯನ್' ತಂಡ ಕೂಡ ಅನುಶ್ರೀ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಕಾಣಿಸಿಕೊಂಡಿದೆ. ಚಿತ್ರದ ನಿರ್ಮಾಪಕ, ನಟ ಮತ್ತು ಸನ್ನಿ ಲಿಯೋನ್ ಈ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ.
ಅರ್ಧ
ವರ್ಷ
ಬಾಲಿವುಡ್
ಬಾಕ್ಸಾಫೀಸ್
ಕಥೆಯೇನು?
KGF
2,
RRR,
ದಿ
ಕಾಶ್ಮೀರ್
ಫೈಲ್ಸ್ನದ್ದೇ
ಸದ್ದು!

ಸಚಿನ್ ನಾಯಕನಾಗಲು ದರ್ಶನ್ ಸ್ಪೂರ್ತಿ!
ಕಾರ್ಯಕ್ರಮದಲ್ಲಿ ಭಾಗಿಯಾದ ನಟ ಸಚಿನ್ಗೆ ಅನುಶ್ರೀ ಪ್ರಶ್ನೆಯೊಂದನ್ನು ಕೇಳ್ತಾರೆ. ನಿಮಗೆ ಸಿನಿಮಾ ಮಾಡಲು ಯಾರು ಸ್ಪೂರ್ತಿ ಎಂದು ಅನುಶ್ರೀ ಪ್ರಶ್ನೆ ಮಾಡುತ್ತಾರೆ. ಈ ಪ್ರಶ್ನೆಗೆ ಉತ್ತರ ಕೊಟ್ಟ ಸಚಿನ್ ಡಿಬಾಸ್ ನನಗೆ ಸ್ಪೂರ್ತಿ ಎನ್ನುತ್ತಾರೆ. ಜೊತೆಗೆ ಅವರ ಗತ್ತು ತುಂಬಾ ಇಷ್ಟ ಎಂದಿದ್ದಾರೆ. "ಸಚಿನ್ ನಾನು ಮೊದಲು ಸಿನಿಮಾ ಮಾಡುವಾಗ ಇದೇ ರೀತಿ ಇದ್ದೆ. ಹಿಂಜರಿಕೆ ಬೇಡ ನಿಮ್ಮ ಬೆಂಬಲಕ್ಕೆ ನಾನಿದ್ದೇನೆ" ಎಂದು ಹೇಳಿದರಂತೆ ನಟ ದರ್ಶನ್. ದರ್ಶನ್ ಬಗ್ಗೆ ಈ ರೀತಿಯ ಮಾತುಗಳನ್ನು ಹೇಳುತ್ತಾ ತನಗೆ ಸಿನಿಮಾ ಮಾಡಲು ಸ್ಫೂರ್ತಿಯಾಗಿದ್ದು ಹೇಗೆ ಎನ್ನುವುದನ್ನು ಮಾತನಾಡಿದ್ದಾರೆ. ಜೊತೆಗೆ ಸನ್ನಿ ಲಿಯೋನ್ ಕೂಡ ಮಾತನಾಡಿದ್ದಾರೆ.
ದರ್ಶನ್, ಯಶ್ ಬಗ್ಗೆ ಸನ್ನಿ ಹೇಳಿದ್ದೇನು?
ಸಂದರ್ಶನದಲ್ಲಿ ಸನ್ನಿ ಲಿಯೋನ್ ದರ್ಶನ್ ಎಂದರೆ ತುಂಬಾನೇ ಇಷ್ಟ ಎಂದು ಹೇಳಿಕೊಂಡಿದ್ದಾರೆ. ನಟ ದರ್ಶನ್ ಬಗ್ಗೆ ಸನ್ನಿ ಲಿಯೋನ್ ಹೇಳಿದ್ದು ಹೀಗೆ "ಅವರು ತುಂಬಾ ಒಳ್ಳೆಯವರು. ಅವರು ಅಂದ್ರೆ ಇಷ್ಟ". ಎಂದ ಸನ್ನಿ ಲಿಯೋನ್ ರಾಕಿಭಾಯ್ ಫೋಟೋ ನೋಡಿ ಕಾಮೆಂಟ್ ಮಾಡಿದ್ದಾರೆ. ಅನುಶ್ರೀ ಯಶ್ ಅವರ ಕೆಜಿಎಫ್ ಪೋಸ್ಟರನ್ನು ತೋರಿದಾಗ. 'ಇದು ರಾಕಿ ಭಾಯ್' ಅಂತಾರೆ. ಜೊತೆಗೆ ಅವರನ್ನು ನೋಡಿ "ಅವರು ನನ್ನ ಹುಡುಗ ಅಲ್ಲ" ಅಂತ ಹೇಳಿ ನಗುತ್ತಾರೆ. ಈ ಮೂಲಕ ಸನ್ನಿ ಲಿಯೋನ್ ಕನ್ನಡ ಸಿನಿಮಾ ರಂಗದ ಮೇಲೆ ತಮಗಿರುವ ಪ್ರೇಮವನ್ನು ವ್ಯಕ್ತಪಡಿಸಿದ್ದಾರೆ.
ವಿವಾಹಪೂರ್ವ
ಲೈಂಗಿಕತೆ
ಬಗ್ಗೆ
ನಟಿ
ದಿಯಾ
ಮಿರ್ಜಾ
ಮಾತು

ರಿಲೀಸ್ಗೆ ರೆಡಿ ಚಾಂಪಿಯನ್!
ಚಾಂಪಿಯನ್ನರ ಸಿನಿಮಾ ಸ್ಪೋರ್ಟ್ಸ್ ಕಥೆಯನ್ನು ಆಧರಿಸಿದ ಸಿನಿಮಾ. ಈ ಸಿನಿಮಾದಲ್ಲಿ ಸಚಿನ್ ಬಾಲ ನಾಯಕ ನಟನಾಗಿ ಅಭಿನಯಿಸಿದ್ದಾರೆ. ನಾಯಕಿಯಾಗಿದ್ದಾರೆ ಅದಿತಿ ಪ್ರಭುದೇವ. ಏನು ಈ ಚಿತ್ರದ ವಿಶೇಷ ಹಾಡಿಗೆ ಹೆಜ್ಜೆ ಹಾಕುವುದರ ಮೂಲಕ ಸನ್ನಿ ಲಿಯೋನ್ ಮತ್ತೆ ಕನ್ನಡಕ್ಕೆ ವಾಪಸಾಗಿದ್ದಾರೆ. ಈ ಹಾಡಿಗೆ ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದು, ಶಿವು ಬೆಳಗ್ಗೆ ಸಾಹಿತ್ಯ ಬರೆದಿದ್ದಾರೆ.