ಸನ್ನಿ ಜೊತೆ ಬೆಡ್‌ರೂಂ ಸೀನ್‌ನಲ್ಲಿ ಬೆವರಾಡಿದ ಹೂಡ

By Rajendra

ಬಾಲಿವುಡ್‌ನ ರಣದೀಪ್ ಹೂಡ ಎಂಬ ನಟ ಬೆಡ್‌ರೂಂ ಸೀನ್‌ಗಳಲ್ಲಿ ಲೀಲಾಜಾಲವಾಗಿ ಅಭಿನಯಿಸಿ ಗುರುತಿಸಿಕೊಂಡಿದ್ದಾನೆ. 'ಸಾಹಿಬ್ ಬೀಬಿ ಔರ್ ಗ್ಯಾಂಗ್‌ಸ್ಟಾರ್' ಚಿತ್ರದಲ್ಲಿನ ಆತನ ಅಭಿನಯವನ್ನು ನೋಡಿದ ಬಾಲಿವುಡ್ ಪ್ರೇಕ್ಷಕರು ಇನ್ನೂ ಮರೆತಿರಕ್ಕಿಲ್ಲ.

ತಾರೆ ಮಾಹಿ ಗಿಲ್ ಜೊತೆ ಆತ ಹಾಸಿಗೆಯಲ್ಲಿ ಉರುಳಾಡಿದ ರೋಮಾಂಚಕ ದೃಶ್ಯಗಳು ಪಡ್ಡೆಗಳ ನಿದ್ದೆಗೆಡಿಸಿವೆ. ಇತ್ತೀಚೆಗೆ ಆತನಿಗೆ ಅದೇ ರೀತಿಯ ಸುವರ್ಣಾವಕಾಶ ಸಿಕ್ಕಿದೆ. ಆದರೆ ಆ ದೃಶ್ಯದಲ್ಲಿ ನಟಿಸಲು ಅವರು ಬೆವರಾಡಿ ಹೋಗಿದ್ದಾರೆ.

ಯಾಕೆ ಎಂದು ಕೇಳಿದರೆ, ಬೆಡ್‌ರೂಂನಲ್ಲಿ ಜೊತೆಗಿದ್ದವರು ವಯಸ್ಕರ ಚಿತ್ರಗಳ ತಾರೆ ಸನ್ನಿ ಲಿಯೋನ್. ಆಕೆಗೇನೋ ಇಂತಹ ದೃಶ್ಯಗಳೆಂದರೆ ನೀರು ಕುಡಿದಷ್ಟು ಸಲೀಸು. ಆದರೆ ರಣದೀಪ್ ಹೂಡ ಮಾತ್ರ ಬೆವೆತು ಬೆಂಡೆಕಾಯಿ ಆಗಿದ್ದಾನೆ. ಈ ಹಾಟ್ ದೃಶ್ಯವನ್ನು 'ಜಿಸ್ಮ್ 2' ಚಿತ್ರಕ್ಕಾಗಿ ಚಿತ್ರೀಕರಿಸಲಾಗುತ್ತಿದೆ.


ಸನ್ನಿ ಅಭಿನಯದ ಚೊಚ್ಚಲ ಬಾಲಿವುಡ್ ಚಿತ್ರ ಇದು. ಚಿತ್ರದಲ್ಲಿ ಕೇವಲ ಬೆಡ್‌ರೂಂ, ಹಾಟ್ ದೃಶ್ಯಗಳಷ್ಟೇ ಅಲ್ಲದೆ ಒಳ್ಳೆಯ ಕತೆಯೂ ಇದೆಯಂತೆ. ರಣದೀಪ್ ಮತ್ತು ಸನ್ನಿಯ ರಸಾಯನಶಾಸ್ತ್ರ ಚೆನ್ನಾಗಿ ವರ್ಕ್‌ಔಟ್ ಆಗಿದೆ ಎಂಬ ಮಾತುಗಳು ಕೇಳಿಬಂದಿವೆ. ಒಟ್ಟಿನಲ್ಲಿ ಬೆಡ್‌ರೂಂ ಹಾಟ್ ದೃಶ್ಯ ಚೆನ್ನಾಗಿ ಮೂಡಿಬಂದಿದೆಯಂತೆ.

ಈ ಬಗ್ಗೆ ಟ್ವೀಟಿಸಿರುವ ರಣದೀಪ್, "ಜಿಸ್ಮ್ 2 ಚಿತ್ರದ ಹಾಟ್ ದೃಶ್ಯದ ಚಿತ್ರೀಕರಣ ಇದೀಗ ತಾನೆ ಮುಗೀತಪ್ಪಾ. ತುಂಬಾ ಸುಸ್ತಾಯಿತು ಆದರೂ ಉಲ್ಲಾಸವಾಗಿದ್ದೇನೆ!" ಎಂದಿದ್ದಾರೆ. ಹಲವಾರು ಕಾರಣಗಳಿಗಾಗಿ 'ಜಿಸ್ಮ್ 2' ಚಿತ್ರ ಬಾಲಿವುಡ್‌ನಲ್ಲಿ ಕುತೂಹಲ ಕೆರಳಿಸಿದೆ.

ಸನ್ನಿ ಲಿಯೋನ್ ಮೊದಲೆ ಬಿಚ್ಚಮ್ಮ ಇನ್ನು ಕೇಳಬೇಕೆ? ಈ ಚಿತ್ರದಲ್ಲಿ ಸನ್ನಿಯನ್ನು ಮಹೇಶ್ ಭಟ್ ಸರಿಯಾಗಿ ಬಳಸಿಕೊಂಡಿದ್ದಾರೆ ಎಂಬ ಸುದ್ದಿಯಿದೆ. ಬೇರೆ ತಾರೆಗಳಾದರೆ ಬಟ್ಟೆ ಬಿಚ್ಚಲು ಕೊಂಚ ನಾಚುತ್ತಾರೆ. ಆದರೆ ಸನ್ನಿ ಲಿಯೋನ್ ಬಟ್ಟೆ ಕಳಚಿದರೆ ನಿರ್ದೇಶಕರೇ ನಾಚಿ ನೀರಾಗುತ್ತಾರೆ ಎಂಬ ಕಾಮೆಂಟ್ಸ್ ಕೂಡ ಕೇಳಿಬಂದಿವೆ.

'ಜಿಸ್ಮ್ 2' ಚಿತ್ರದ ಪೋಸ್ಟರ್‌ಗಳು ಈಗಾಗಲೆ ಬಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿವೆ. ಈ ಚಿತ್ರವನ್ನು ಮಹೇಶ್ ಭಟ್ ನಿರ್ದೇಶಿಸುವ ಜೊತೆಗೆ ನಿರ್ಮಿಸುತ್ತಿದ್ದಾರೆ. ಅಂದಹಾಗೆ 'ಜಿಸ್ಮ್' ಚಿತ್ರದಲ್ಲಿ ಜಾನ್ ಅಬ್ರಹಾಂ ಹಾಗೂ ಬಿಪಾಶಾ ಬಸು ಅಭಿನಯಿಸಿದ್ದರು. (ಏಜೆನ್ಸೀಸ್)

More from Filmibeat

English summary
One cannot forget the famous lovemaking scene between Randeep Hooda and Mahie Gill from the film Sahib Biwi Aur Gangster. It will surely be a treat for all the Hooda fans to see him again on bed, but this time with actress Sunny Leone in Jism 2
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X