For Quick Alerts
  ALLOW NOTIFICATIONS  
  For Daily Alerts

  ಕಾಲೇಜಿನ ಮೆರಿಟ್ ಪಟ್ಟಿಯಲ್ಲಿ ಸನ್ನಿ ಲಿಯೋನ್ ಟಾಪರ್: ಮತ್ತೆ ಕಾಲೇಜಿಗೆ ಹೋಗ್ತಾರಾ ಸನ್ನಿ?

  By ಫಿಲ್ಮ್ ಡೆಸ್ಕ್
  |

  ನಟಿ ಸನ್ನಿ ಲಿಯೋನ್ ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಮಾದಕ ನಟಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ. ಸನ್ನಿ ಲಿಯೋನ್ ನೋಡಲು ಸಾಗರೋಪಾದಿಯಲ್ಲಿ ಜನ ಸೇರಿರುತ್ತಾರೆ. ಬಾಲಿವುಡ್ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಲ್ಲಿಯೂ ನಟಿಸಿರುವ ಸನ್ನಿ ಈಗ ಕಾಲೇಜ್ ನ ಮೆರಿಟ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ.

  Ayogya ಸಿನಿಮಾದ ಕ್ಲೈಮ್ಯಾಕ್ಸ್ ಸನ್ನಿವೇಶದ ತೆರೆ ಹಿಂದಿನ ದೃಶ್ಯ | Ayogya Climax Making | Filmibeat Kannada

  ಸದ್ಯ ಕಾಲೇಜ್ ಗಳಲ್ಲಿ ವಿದ್ಯಾರ್ಥಿಗಳ ಆನ್ ಲೈನ್ ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ. ಕೊಲ್ಕತ್ತಾದ ಪದವಿ ಕಾಲೇಜ್ ಒಂದರಲ್ಲಿ ಮೆರಿಟ್ ಪಟ್ಟಿಯಲ್ಲಿ ಸನ್ನಿ ಲಿಯೋನ್ ಟಾಪ್ ನಲ್ಲಿದ್ದಾರೆ. ಈ ಬಗ್ಗೆ ಕಾಲೇಜ್ ವೆಬ್ ಸೈಟ್ ನಲ್ಲಿ ಮಾಹಿತಿ ಬಹಿರಂಗವಾಗಿದ್ದು, ಸನ್ನಿ ಲಿಯೋನ್ ಹೆಸರು ನೋಡಿ ಎಲ್ಲರೂ ಅಚ್ಚರಿ ಪಟ್ಟುಕೊಂಡಿದ್ದಾರೆ. ಅಲ್ಲದೆ ಕಾಲೇಜ್ ಅಧಿಕಾರಿಗಳು ಇದು ಕಿಡಿಗೇಡಿಗಳ ಕೃತ್ಯ ಎಂದು ಆರೋಪಿಸಿದ್ದಾರೆ. ಮುಂದೆ ಓದಿ...

  ಸುದೀಪ್ ಜೊತೆ ಹೆಜ್ಜೆ ಹಾಕಲು ಮತ್ತೆ ಕನ್ನಡಕ್ಕೆ ಬರ್ತಿದ್ದಾರಂತೆ ಸನ್ನಿ ಲಿಯೋನ್ಸುದೀಪ್ ಜೊತೆ ಹೆಜ್ಜೆ ಹಾಕಲು ಮತ್ತೆ ಕನ್ನಡಕ್ಕೆ ಬರ್ತಿದ್ದಾರಂತೆ ಸನ್ನಿ ಲಿಯೋನ್

   ಮೆರಿಟ್ ಪಟ್ಟಿಯಲ್ಲಿ ಸನ್ನಿ ಲಿಯೋನ್ ನಂ.1

  ಮೆರಿಟ್ ಪಟ್ಟಿಯಲ್ಲಿ ಸನ್ನಿ ಲಿಯೋನ್ ನಂ.1

  ಕೊಲ್ಕತ್ತಾದ ಅಶುತೋಷ್ ಕಾಲೇಜಿನ ಪ್ರವೇಶ ಪಟ್ಟಿಯಲ್ಲಿ ಸನ್ನಿ ಲಿಯೋನ್ ಹೆಸರು ಇರುವುದು ಅಚ್ಚರಿಗೆ ಕಾರಣವಾಗಿದೆ. ಕಾಲೇಜಿನ ಪ್ರವೇಶ ಮೆರಿಟ್ ಪಟ್ಟಿಯಲ್ಲಿರುವ ಪ್ರಕಾರ ಸನ್ನಿ ಹೆಸರಿನಲ್ಲಿ ಇಂಗ್ಲೀಷ್ ಬಿಎ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಮೆರಿಟ್ ಪಟ್ಟಿಯಲ್ಲಿ ಸನ್ನಿ ಲಿಯೋನ್ ಹೆಸರು ನಂ.1 ಸ್ಥಾನದಲ್ಲಿದೆ.

   ಸನ್ನಿ ಪಡೆದ ಮಾರ್ಕ್ಸ್ ಎಷ್ಟು?

  ಸನ್ನಿ ಪಡೆದ ಮಾರ್ಕ್ಸ್ ಎಷ್ಟು?

  ಅಪ್ಲಿಕೇಶನ್ ಐಡಿ ಮತ್ತು ರೋಲ್ ಸಂಖ್ಯೆ ಪಟ್ಟಿಯಲ್ಲಿ ಸನ್ನಿ ಲಿಯೋನ್ ಹೆಸರಿದೆ. ಸನ್ನಿ ಲಿಯೋನ್ ಹೆಸರಿನಲ್ಲಿರುವ ಮಾರ್ಕ್ಸ್ ಕಾರ್ಡ್ ನಲ್ಲಿ 12ನೇ ತರಗತಿಯಲ್ಲಿ ನಾಲ್ಕು ವಿಷಯಗಳಲ್ಲಿ 400ಕ್ಕೆ 400 ಅಂಕ ಪಡೆದಿದ್ದಾರೆ. ಸನ್ನಿ ಲಿಯೋನ್ ಫುಲ್ ಮಾರ್ಕ್ಸ್ ನೋಡಿ ಎಲ್ಲರಿಗೂ ಶಾಕ್ ಆಗಿದೆ.

  ಕೊರೊನಾ ನಡುವೆ ಬೀಚ್‌ನಲ್ಲಿ ಎಂಜಾಯ್ ಮಾಡಿದ ಸನ್ನಿ ಲಿಯೋನ್ಕೊರೊನಾ ನಡುವೆ ಬೀಚ್‌ನಲ್ಲಿ ಎಂಜಾಯ್ ಮಾಡಿದ ಸನ್ನಿ ಲಿಯೋನ್

   ಕಾಲೇಜಿನವರು ಹೇಳುವುದೇನು?

  ಕಾಲೇಜಿನವರು ಹೇಳುವುದೇನು?

  ಈ ಬಗ್ಗೆ ಮಾತನಾಡಿರುವ ಕಾಲೇಜು ಅಧಿಕಾರಿಯೊಬ್ಬರು, "ಯಾರೋ ಉದ್ದೇಶಪೂರ್ವಕವಾಗಿಯೇ ಸನ್ನಿ ಲಿಯೋನ್ ಹೆಸರಿನಲ್ಲಿ ಅರ್ಜಿ ಸಲ್ಲಿದ್ದಾರೆ. ಇದು ಕಿಡಿಗೇಡಿಗಳ ಕೃತ್ಯವಾಗಿದೆ. ಅದನ್ನು ಸರಿಪಡಿಸಲು ನಾವು ಪ್ರವೇಶ ಇಲಾಖೆಯನ್ನು ಕೇಳಿದ್ದೇವೆ. ಘಟನೆಯ ಬಗ್ಗೆ ತನಿಖೆ ನಡೆಸುತ್ತೇವೆ" ಎಂದಿದ್ದಾರೆ.

   ಸನ್ನಿ ಲಿಯೋನ್ ಪ್ರತಿಕ್ರಿಯೆ

  ಸನ್ನಿ ಲಿಯೋನ್ ಪ್ರತಿಕ್ರಿಯೆ

  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಸನ್ನಿ ಲಿಯೋನ್ "ಮುಂದಿನ ಸೆಮಿಸ್ಟರ್ ನಲ್ಲಿ ನಿಮ್ಮೆಲ್ಲರನ್ನೂ ನೋಡುತ್ತೇನೆ. ನೀವೆಲ್ಲರೂ ನನ್ನ ತರಗತಿಯವರೇ ಎಂದು ಭಾವಿಸುತ್ತೇನೆ" ಎಂದು ತಮಾಷೆ ಮಾಡಿದ್ದಾರೆ.

   ಆನ್ ಲೈನ್ ಪ್ರವೇಶದ ಬಗ್ಗೆ ಆತಂಕ

  ಆನ್ ಲೈನ್ ಪ್ರವೇಶದ ಬಗ್ಗೆ ಆತಂಕ

  ಈ ಘಟನೆ ಬಳಿಕ ಈಗ ಕಾಲೇಜಿನ ಆನ್ ಲೈನ್ ಪ್ರವೇಶ ಪ್ರಕ್ರಿಯೆಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕೊರೊನಾ ಹಾವಳಿಯ ಪರಿಣಾಮ ಕಾಲೇಜ್ ಗಳು ಇನ್ನೂ ತೆರೆದಿಲ್ಲ. ಆನ್ ಲೈನ್ ಮೂಲಕವೇ ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ. ಈ ಘಟನೆಯಿಂದ ಈಗ ಆನ್ ಲೈನ್ ಪ್ರವೇಶದ ಬಗ್ಗೆ ವಿದ್ಯಾರ್ಥಿಗಳಲ್ಲಿ ಮತ್ತು ಪೋಷಕರಲ್ಲಿ ಆತಂಕ ಮೂಡಿದೆ.

  English summary
  Sunny Leone name topper on Merit list of Kolkata college.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X