»   » ಹೊಸ ಅವತಾರದಲ್ಲಿ ಹಾಟ್ ತಾರೆ ಸನ್ನಿ ಲಿಯೋನ್

ಹೊಸ ಅವತಾರದಲ್ಲಿ ಹಾಟ್ ತಾರೆ ಸನ್ನಿ ಲಿಯೋನ್

By: ರವಿಕಿಶೋರ್
Subscribe to Filmibeat Kannada

ಬಾಲಿವುಡ್ ಬೆಳ್ಳಿತೆರೆಯ ಹಾಟ್ ಬಾಂಬ್ ಸನ್ನಿ ಲಿಯೋನ್ ಹೆಸರು ಕೇಳಿದರೆ ಸಾಕು ಚಿತ್ರರಸಿಕರ ಕಣ್ಣರಳುತ್ತದೆ. ಇದೀಗ ಹೊಸ ಅವತಾರದಲ್ಲಿ ಪ್ರತ್ಯಕ್ಷವಾಗಿದ್ದಾರೆ ಸನ್ನಿ. ತಮ್ಮ ಮುಂದಿನ ಚಿತ್ರ 'ಟಿನಾ ಅಂಡ್ ಲೋಲೋ' ಚಿತ್ರಕ್ಕಾಗಿ ಅವರು ತಮ್ಮ ಎಂದಿನ ಗೆಟಪ್ ಬದಲಾಯಿಸಿದ್ದಾರೆ.

ತಮ್ಮ ರಾಗಿಣಿ ಎಂಎಂಎಸ್ 2 ಚಿತ್ರ ಬಾಕ್ಸ್ ಆಫೀಸಲ್ಲಿ ಒಳ್ಳೆಯ ಫಸಲನ್ನೇ ತೆಗೆದಿದೆ. ಈ ಬಗ್ಗೆ ಸನ್ನಿ ಸಹ ಖುಷಿಯಾಗಿದ್ದಾರೆ. ಎಲ್ಲಕ್ಕಿಂತಲೂ ಹೆಚ್ಚಾಗಿ ರಾಗಿಣಿ ಎಂಎಂಎಸ್ 2 ಚಿತ್ರಕ್ಕೆ ಕೊಟ್ಟಂತಹ ಭರ್ಜರಿ ಪ್ರಚಾರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲು ಕಾರಣವಾಯಿತು. [ನಟಿ ಸನ್ನಿ ಲಿಯೋನ್ ಅಂಡರ್ ವೇರ್ ಕದ್ದವನಾರು?]

ಇದೀಗ ಟಿನಾ ಅಂಡ ಲೋಲೋ ಚಿತ್ರಕ್ಕಾಗಿಯೂ ಇದೇ ರೀತಿ ಪ್ರಚಾರ ಕೊಡಲು ಮುಂದಾಗಿದೆ ಚಿತ್ರತಂಡ. ಈ ಚಿತ್ರದ ಬಗ್ಗೆ ರಾಗಿಣಿ ಮಾತನಾಡುತ್ತಾ, "ಚಿತ್ರದಲ್ಲಿ ಗ್ಲಾಮರ್ ಗೆ ನೀಡಿರುವಷ್ಟೇ ಒತ್ತನ್ನೂ ಅಭಿನಯಕ್ಕೂ ನೀಡಲಾಗಿದೆ. ಕೇವಲ ಗ್ಲಾಮರ್ ಅಷ್ಟೇ ಅಲ್ಲ ತಮ್ಮ ಅಭಿನಯದ ಇನ್ನೊಂದು ಕೋನವನ್ನೂ ಚಿತ್ರದಲ್ಲಿ ಕಾಣಬಹುದು" ಎನ್ನುತ್ತಾರೆ ರಾಗಿಣಿ.

ಸನ್ನಿ ಲಿಯೋನ್ ಗೆ ಜೋಡಿ ಕರಿಷ್ಮಾ ತನಾ

'ಟಿನಾ ಅಂಡ್ ಲೋಲೋ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ದೇವಾಂಗ್ ಧೋಲಾಕಿಯಾ. ಈ ಚಿತ್ರದ ಪಾತ್ರವರ್ಗದಲ್ಲಿ ತಾಹ ಶಾ, ಕರಿಷ್ಮಾ ತನಾ, ಮಿನಿಷಾ ಲಾಂಬಾ ಹಾಗೂ ದೀಪಕ್ ತಿಜೋರಿ ಇದ್ದಾರೆ.

ಕೈಯಲ್ಲಿ ಗನ್ನು ಮೈಯಲ್ಲಿ ಮಿಂಚು

ಸದಾ ಅರೆಬರೆ ಬಟ್ಟೆಗಳಲ್ಲಿ ಅರೆನಗ್ನ ದೃಶ್ಯಗಳಲ್ಲಿ ಕಾಣುತ್ತಿದ್ದ ಸನ್ನಿ ಲಿಯೋನ್ ಈ ಚಿತ್ರದಲ್ಲಿ ಮೈತುಂಬ ಬಟ್ಟೆ ಹೊದ್ದು ಕೈಯಲ್ಲಿ ಗನ್ ಹಿಡಿದು ಕಾಣಿಸುತ್ತಾರೆ.

ಮಸಾಲೆ ರೊಮ್ಯಾನ್ಸ್ ಗೂ ಬರವಿರಲ್ಲ

ಬಾಲಿವುಡ್ ನ ಇಬ್ಬರು ಹಾಟ್ ಬೆಡಗಿಯರೂ ಕೈಯಲ್ಲಿ ಗನ್ ಹಿಡಿದು ಕಾಣಿಸುತ್ತಾರೆ. ಮಲಾಸೆ, ರೊಮ್ಯಾನ್ಸ್ ನಿರೀಕ್ಷಿಸಿ ಹೋಗುವ ಪ್ರೇಕ್ಷಕರಿಗೆ ಇವರಿಬ್ಬರೂ ಖಂಡಿತ ನಿರಾಸೆಪಡಿಸಲ್ಲ ಎನ್ನುತ್ತದೆ ಚಿತ್ರತಂಡ.

ಸಲ್ಲಿ ಲಿಯೋನ್ ದು ಇಲ್ಲಿ ಆಕ್ಷನ್ ಆಟ

ಇಷ್ಟು ದಿನ ಬಿಕಿನಿ, ಸ್ವಿಮ್ ಸೂಟ್ ನಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದ್ದ ಸನ್ನಿ ಲಿಯೋನ್ ಇಲ್ಲಿ ಆಕ್ಷನ್ ನಲ್ಲಿ ಆಟ ಆಡಿಸಲಿದ್ದಾರೆ.

ಆಕ್ಷನ್ನೂ ಉಂಟು ರೊಮ್ಯಾನ್ಸೂ ಉಂಟು

ಒಟ್ಟಾರೆಯಾಗಿ ಸನ್ನಿ ಲಿಯೋನ್ ಆಕ್ಷನ್ ಆದರೂ ಅಷ್ಟೇ ರೊಮ್ಯಾನ್ಸ್ ಆದರೂ ಅಷ್ಟೇ, ಸನ್ನಿ ಇದ್ದಾರೆ ಎಂದ ಮೇಲೆ ಆಕರ್ಷಣೆ ಇದ್ದೇ ಇರುತ್ತದೆ.

English summary
Sunny Leone, porn star-turned actress is once again going to set the screen on fire. This time in her upcoming flick Tina and Lolo. Will her sex appeal rake in the moolah for the film makers?
Please Wait while comments are loading...