"ಅವನನ್ನು ಬಹಳ ಪ್ರೀತಿಸಿದ್ದೆ, ಮದ್ವೆ ಹೊಸ್ತಿಲಲ್ಲಿ ಮೋಸ ಮಾಡಿಬಿಟ್ಟ"; ಸನ್ನಿ ಲಿಯೋನ್
ಬಾಲಿವುಡ್ ನಟಿ ಸನ್ನಿ ಲಿಯೋನ್‌ಗೆ ದೊಡ್ಡ ಅಭಿಮಾನಿಗಳ ಬಳಗ ಇದೆ. ಒಂದ್ಕಾಲದಲ್ಲಿ ನೀಲಿ ಚಿತ್ರಗಳಲ್ಲಿ ನಟಿಸುತ್ತಿದ್ದ ಸನ್ನಿ ಬಳಿಕ ಅದನ್ನು ಬಿಟ್ಟು ಭಾರತಕ್ಕೆ ಬಂದರು. ಬಿಗ್‌ಬಾಸ್ ಹಿಂದಿ ರಿಯಾಲಿಟಿ ಶೋ ಮೂಲಕ ಗಮನ ಸೆಳೆದರು. ಬಳಿಕ ಒಂದಷ್ಟು ಹಿಂದಿ ಸಿನಿಮಾ ಬೋಲ್ಡ್ ಪಾತ್ರಗಳಲ್ಲಿ ಮಿಂಚಿದರು.
ಸದ್ಯ ಸನ್ನಿ ಕ್ರೇಜ್ ಕಮ್ಮಿ ಆಗಿದೆ. ಮೊದಲಿನ ರೀತಿ ಅವಕಾಶಗಳು ಸಿಗುತ್ತಿಲ್ಲ. ಬಾಲಿವುಡ್ ಬಳಿಕ ಸೌತ್ ಸಿನಿಮಾಗಳಲ್ಲಿ ಕೂಡ ಸನ್ನಿ ಬಿಂದಾಸ್ ಸಾಂಗ್ಸ್‌ಗೆ ಹೆಜ್ಜೆ ಹಾಕಿದ್ದರು. ಕನ್ನಡ ಸಿನಿಮಾ ಗೀತೆಗಳಿಗೂ ಕುಣಿದಿದ್ದಾರೆ. ಡೇನಿಯಲ್ ವೆಬರ್ ಸನ್ನಿ ಮದುವೆ ಆಗಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ತಮ್ಮ ಫಸ್ಟ್ ಲವ್ ಬಗ್ಗೆ ಮಾತನಾಡಿದ್ದಾರೆ.

"ಮದುವೆಗೆ ಮುನ್ನ ನಾನು ಒಬ್ಬ ವ್ಯಕ್ತಿಯನ್ನು ತುಂಬಾ ಪ್ರೀತಿಸುತ್ತಿದ್ದೆ. ನಾವು ಮದುವೆಯಾಗಲು ಬಯಸಿದ್ದೆವು. ನಾವು ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದೇವೆ. ಆದರೆ ಅವನು ನನಗೆ ಮೋಸ ಮಾಡುತ್ತಿದ್ದಾನೆ ಎಂದು ನನಗೆ ಅನಿಸಿತು. ನಾನು ತಕ್ಷಣ ಅವನನ್ನು ನೇರವಾಗಿ ಕೇಳಿದೆ. ನೀನು ನನ್ನನ್ನು ಪ್ರೀತಿಸುತ್ತಿಯಾ ಎಂದು ಕೇಳಿದಾಗ ಇಲ್ಲ ಎಂದು ಹೇಳಿದರು. ನಿನ್ನ ಮೇಲಿನ ಪ್ರೀತಿ ಮಾಯವಾಯಿತು ಎಂದುಬಿಟ್ಟಿದ್ದ" ಎಂದು ಆ ಘಟನೆ ನೆನಪಿಸಿಕೊಂಡಿದ್ದಾರೆ.
"ಅಂದು ಆತನ ಮಾತು ಕೇಳಿ ನಾನು ನಿಂತಿದ್ದ ನೆಲ ಅಲುಗಾಡಿದ ಅನುಭವ ಆಗಿತ್ತು. ಅದಾಗಲೇ ನಮ್ಮಿಬ್ಬರ ಮದುವೆಗೆ ಎಲ್ಲಾ ಸಿದ್ಧತೆ ನಡೆದಿತ್ತು. ಅದಕ್ಕಾಗಿ ಹಣ ಕಟ್ಟಿದ್ದೆವು. ಮದುವೆಯ ಜಾಗ ಗೊತ್ತು ಮಾಡಿದ್ದೆ. ಆದರೆ ನಾನಂದ್ರೆ ಇಷ್ಟ ಇಲ್ಲ ಎಂದು ಹೇಳಿ ಅವನು ಹೋಗಿಬಿಟ್ಟ. ಅದು ನನ್ನ ಜೀವನದ ಕೆಟ್ಟ ಗಳಿಗೆ. ಆ ನಂತರ ದೇವರು ನನ್ನ ಜೀವನಕ್ಕೆ ಡೇನಿಯಲ್‌ನ ಕಳುಹಿಸಿದ"
"ನನ್ನ ತಂದೆ- ತಾಯಿ ನಿಧನದ ಬಳಿಕ ಡೇನಿಯಲ್ ನನ್ನ ಜೊತೆಗಿದ್ದಾನೆ. ಇವತ್ತಿಗೂ ನನ್ನ ಬೆಂಬಲಕ್ಕೆ ನಿಂತಿದ್ದಾನೆ. ನಾನು ನನ್ನ ಗಂಡನ ಕೈ ಬಿಡುವುದಿಲ್ಲ" ಎಂದು ಸನ್ನಿ ಲಿಯೋನ್ ಹೇಳಿದ್ದಾರೆ. 2017ರಲ್ಲಿ ಸನ್ನಿ ಹಾಗೂ ಡೇನಿಯಲ್ ದಂಪತಿ ನಿಶಾ ಎಂಬ ಹುಡುಗಿಯನ್ನು ದತ್ತು ಪಡೆದಿದ್ದರು. ಬಳಿಕ ಸಾರೋಗಸಿ ವಿಧಾನದಲ್ಲಿ ಎರಡು ಗಂಡು ಮಕ್ಕಳಿಗೆ ಪೋಷಕರಾದರು.

ಅಂದಹಾಗೆ ಸನ್ನಿ ಲಿಯೋನ್ ಮೊದಲ ಹೆಸರು ಕರೆಂಜಿತ್ ಕೌರ್ ವೋಹ್ರಾ. ನೀಲಿ ಚಿತ್ರಲೋಕಕ್ಕೆ ಹೋದ ಮೇಲೆ ಸನ್ನಿ ಲಿಯೋನ್ ಎಂದು ಹೆಸರು ಬದಲಿಸಿಕೊಂಡಿದ್ದರು. 'ಜಿಸ್ಮ್' ಸಿನಿಮಾ ಮೂಲಕ ಸನ್ನಿ ಬಾಲಿವುಡ್ ಪ್ರವೇಶಿಸಿದರು. 'ರಾಗಿಣಿ ಎಂಎಂಎಸ್-2', 'ಹೇಟ್ ಸ್ಟೋರಿ-2' ಹೀಗೆ ಹಲವು ಸಿನಿಮಾಗಳಲ್ಲಿ ಬೋಲ್ಡ್ ಪಾತ್ರಗಳಲ್ಲಿ ಮಿಂಚಿದರು.
'ಡಿಕೆ' ಕನ್ನಡ ಚಿತ್ರದಲ್ಲಿ 'ಸೇಸಮ್ಮ ಸೇಸಮ್ಮ' ಎಂದು ಜೋಗಿ ಪ್ರೇಮ್ ಜೊತೆ ಸನ್ನಿ ಲಿಯೋನ್ ಹೆಜ್ಜೆ ಹಾಕಿದ್ದರು. ಬಳಿಕ 'ಲವ್‌ಯು ಆಲಿಯಾ' ಚಿತ್ರದ ಹಾಡಿಗೂ ಕುಣಿದರು. ಕೊನೆಯದಾಗಿ 'ಚಾಂಪಿಯನ್' ಚಿತ್ರದಲ್ಲಿ 'ಡಿಂಗರ ಬಿಲ್ಲಿ' ಹಾಡಿನಲ್ಲಿ ಕಾಣಿಸಿಕೊಂಡರು. ಸದ್ಯ ಮಲಯಾಳಂ, ಹಿಂದಿ, ತಮಿಳು ಸಿನಿಮಾಗಳಲ್ಲಿ ಮಾದಕ ನಟಿ ಬಣ್ಣ ಹಚ್ಚಿದ್ದಾರೆ. ಆದರೆ ದೊಡ್ಡ ಸಿನಿಮಾಗಳು ಆಕೆಯ ಕೈಯಲ್ಲಿ ಇಲ್ಲ.


Click it and Unblock the Notifications











