ಮಕ್ಕಳು ಪಡೆಯಲು ಮರುಗಿದ್ದ ಸನ್ನಿ ಲಿಯೋನಿ : ಅದು ನನ್ನ ಸೋಲು ಎಂದ ನಟಿ!

ನಟಿ ಸನ್ನಿ ಲಿಯೋನಿ ಸದ್ಯ ಬಾಲಿವುಡ್‌ನಲ್ಲಿ ಬೇಡಿಕೆಯ ನಟಿ. ಆಕೆಯ ಹಿನ್ನೆಲೆ ಏನೇ ಆಗಿದ್ದರು, ಇಂದು ಸಮಾಜದಲ್ಲಿ ಉತ್ತಮ ರೀತಿಯ ಬದುಕು ಕಟ್ಟಿಕೊಂಡು ಗುರುತಿಸಿಕೊಂಡಿದ್ದಾರೆ. ಸಿನಿಮಾಗಳಲ್ಲಿ ಅಭಿನಯಿಸುತ್ತಾ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಎಲ್ಲಾದಕ್ಕಿಂತಲೂ ಹೆಚ್ಚಾಗಿ ಆಕೆ ಮೂರು ಮಕ್ಕಳ ತಾಯಿ ಆಗಿ ಜೀವನ ಸಾಗಿಸುತ್ತಿದ್ದಾರೆ.

ಸನ್ನಿ ಲಿಯೋನಿಗೆ ಮೂರು ಮಂದಿ ಮಕ್ಕಳು. ಒಂದು ಹೆಣ್ಣು ಮಗು ಮತ್ತು ಇಬ್ಬರು ಗಂಡು ಮಕ್ಕಳು. ಸದ್ಯ ಮಕ್ಕಳೊಂದಿಗೆ ಸನ್ನಿ ದಂಪತಿ ಹೆಚ್ಚು ಕಾಲ ಕಳೆಯುತ್ತಿರುತ್ತಾರೆ. ತಮ್ಮ ಮುದ್ದಾದ ಕುಟುಂಬದ ಫೋಟೊ ಮತ್ತು ವಿಡಿಯೋಗಳನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿರುತ್ತಾರೆ ಸನ್ನಿ.

ಈಗ ಸನ್ನಿ ಲಿಯೋನಿ ಸಂದರ್ಶನ ಒಂದರಲ್ಲಿ ತಾನು ತಾಯಿ ಆಗುವ ಬಗ್ಗೆ ಮಾತನಾಡಿದ್ದಾರೆ. ಅಂದರೆ ಮಕ್ಕಳನ್ನು ದತ್ತು ಪಡೆಯುವ ಮೊದಲು ಸನ್ನಿ ಸರೊಗೇಟರಿ ತಾಯಿ ಆಗಲು ಬಯಸಿದ್ದರಂತೆ. ಆದರೆ ಅದು ಸಾಧ್ಯ ಆಗದೇ ಹೋದಾಗ, ಬೇರೆ ದಾರಿ ಇಲ್ಲದೆ ಮಕ್ಕಳನ್ನು ದತ್ತು ಪಡೆದುಕೊಂಡಿದ್ದಾರಂತೆ.

ಬಾಡಿಗೆ ತಾಯ್ತನದ ಮೂಲಕ ತಾಯಿ ಆಗಲು ಬಯಸಿದ್ದ ಸನ್ನಿ ಲಿಯೋನಿ!

ಬಾಡಿಗೆ ತಾಯ್ತನದ ಮೂಲಕ ತಾಯಿ ಆಗಲು ಬಯಸಿದ್ದ ಸನ್ನಿ ಲಿಯೋನಿ!

ಸನ್ನಿ ಲಿಯೋನಿ ಮತ್ತು ಆಕೆಯ ಪತಿ ಮಕ್ಕಳು ಬೇಕು ಎಂದುಕೊಂಡಾಗ, ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಮುಂದಾಗಿದ್ದರಂತೆ. ಆದರೆ ಅದಕ್ಕಾಗಿ ಸನ್ನಿ ಲಿಯೋನಿ ಸಾಕಷ್ಟು ವ್ಯಥೆ ಪಟ್ಟಿದ್ದಾರೆ. ಆಕೆ ಅಂದು ಕೊಂಡ ಹಾಗೆ, ಸರೊಗೇಟರಿ ತಾಯಿ ಆಗಲು ಸಾಧ್ಯವಾಗಿಲ್ಲ. ಸಾಕಷ್ಟು ಕನಸುಗಳನ್ನು ಕಂಡು, ಬಾಡಿಗೆ ತಾಯ್ತನದ ಮೂಲಕ ತಾಯಿ ಆಗಲು ಸನ್ನಿ ಬಯಸಿದ್ದರಂತೆ. ಅದಕ್ಕಾಗಿ 2018ರಲ್ಲಿ ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಆದರೆ ಎಷ್ಟೇ ಪ್ರಯತ್ನ ಮಾಡಿದರು, ಸನ್ನಿ ಬಾಡಿಗೆ ತಾಯ್ತನದ ಮೂಲಕ ತಾಯಿ ಆಗಲು ಸಾಧ್ಯ ಆಗಲಿಲ್ಲ. ಈ ವಿಚಾರವನ್ನು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಸನ್ನಿ ತಿಳಿಸಿದ್ದಾರೆ.

ಇದು ನನ್ನ ಸೋಲು ಎಂದು ಭಾವಿಸಿದ್ದೆ: ಸನ್ನಿ ಲಿಯೋನಿ!

ಇದು ನನ್ನ ಸೋಲು ಎಂದು ಭಾವಿಸಿದ್ದೆ: ಸನ್ನಿ ಲಿಯೋನಿ!

ಇನ್ನು ಸನ್ನಿ ಲಿಯೋನೆ ಮತ್ತು ಪತಿ ಬಾಡಿಗೆ ತಾಯ್ತನಕ್ಕೆ ಮುಂದಾದಾಗ ಅದು ಸಾಧ್ಯವಾಗಿಲ್ಲ. ಆರು ಬಾರಿ ಬಾಡಿಗೆ ತಾಯ್ತನದಿಂದ ಮಗುವಿಗಾಗಿ ಪ್ರಯತ್ನ ಪಟ್ಟಿದ್ದಾರಂತೆ. ಇದ್ಕಕಾಗಿ ಆರು ಎಗ್ಸ್, ನಾಲ್ಕು ಹುಡುಗಿಯರು ಮತ್ತು ಇಬ್ಬರು ಹುಡುಗರ ಮೊರೆ ಹೋಗಿದ್ದರಂತೆ. ಇಷ್ಟಾದರೂ ಮಗು ಆಗದೇ ಇದ್ದಾಗ ಅವರು ಮಕ್ಕಳನ್ನು ದತ್ತು ಪಡೆಯುವ ಬಗ್ಗೆ ಯೋಚಿಸಿದರಂತೆ.

ರಕ್ತ ಸಂಬಂಧ ಇಲ್ಲ ಆದರೆ ಹೃದಯದ ಬಂಧ ಇದೆ: ಸನ್ನಿ ಲಿಯೋನಿ!

ರಕ್ತ ಸಂಬಂಧ ಇಲ್ಲ ಆದರೆ ಹೃದಯದ ಬಂಧ ಇದೆ: ಸನ್ನಿ ಲಿಯೋನಿ!

ಬಾಡಿಗೆ ತಾಯ್ತನದ ಮೂಲಕ ತಮ್ಮದೇ ಮಗುವನ್ನು ಪಡೆಯಲು ಆಗದಿದ್ದಾಗ. ಮುಂಬೈನಲ್ಲಿರುವ ಅನಾಥ ಆಶ್ರಮಕ್ಕೆ ಭೇಟಿ ನೀಡಿ ಮೊದಲಿಗೆ ನಿಶಾ ಎನ್ನುವ ಮಗುವನ್ನು ಸನ್ನಿ ದಂಪತಿ ದತ್ತು ಪಡೆಯುತ್ತಾರೆ. ಈ ಬಗ್ಗೆ ಹೇಳಿರುವುದು ಹೀಗೆ " ಈಗ ಇರುವ ದತ್ತು ಮಕ್ಕಳ ಜೊತೆಗೆ ನಮಗೆ ರಕ್ತ ಸಂಬಂಧ ಇಲ್ಲದೇ ಇರಬಹುದು. ಆದರೆ ಹೃದಯದ ಬಂಧ ಇದೆ. ನಾವು ಹೃದಯದಿಂದ ಹತ್ತಿರ ಆಗಿದ್ದೇವೆ" ಎಂದಿದ್ದಾರೆ ಸನ್ನಿ.

ಇದು ದೇವರ ನಿರ್ಧಾರ ಎನ್ನುತ್ತಾರೆ ಸನ್ನಿ ಲಿಯೋನಿ!

ಇದು ದೇವರ ನಿರ್ಧಾರ ಎನ್ನುತ್ತಾರೆ ಸನ್ನಿ ಲಿಯೋನಿ!

ತಮ್ಮ ಜೀವನದಲ್ಲಿ ಹೀಗೆ ಆಗಿರುವುದು ದೇವರ ನಿರ್ಧಾರದಿಂದ ಎನ್ನುತ್ತಾರೆ, ಸನ್ನಿ ಲಿಯೋನಿ. ಸನ್ನಿ ಲಿಯೋನಿ ಅವರು ಬೇರೆ ಏನನ್ನೋ ಯೋಚಿಸಿದರೆ. ದೇವರ ಉದ್ದೇಶ ಇದೇ ಆಗಿದೆ. ಹಾಗಾಗಿ ನಮ್ಮ ಮನೆಗೆ ಮೂವರು ದತ್ತು ಮಕ್ಕಳು ಬಂದಿದ್ದಾರೆ ಎಂದಿದ್ದಾರೆ. ನಿಶಾ ಕೌರ್ ವೆಬರ್, ಆಶೆರ್ ಸಿಂಗ್ ವೆಬರ್, ನೋಹಾ ಸಿಂಗ್ ವೆಬರ್ ಎನ್ನುವ ಮೂರು ಮುದ್ದು ಮಕ್ಕಳೊಂದಿಗೆ ಸನ್ನಿ ಲಿಯೋನಿ ಮತ್ತು ದಂಪತಿ ಸಂತಸದ ಜೀವನ ನಡೆಸುತ್ತಿದ್ದಾರೆ. ಈ ಬಗ್ಗೆ ಅವರಲ್ಲಿ ಯಾವುದೇ ಬೇಸರವಿಲ್ಲ ಎನ್ನುವುದನ್ನು ಕೂಡ ಸ್ಪಷ್ಟ ಪಡಿಸಿದ್ದಾರೆ.

More from Filmibeat

English summary
Sunny Leone Opens Up On Her Surrogacy Motherhood,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X