For Quick Alerts
  ALLOW NOTIFICATIONS  
  For Daily Alerts

  ಮುದ್ದು ಮಗಳ ಹುಟ್ಟುಹಬ್ಬಕ್ಕೆ ಸನ್ನಿ ಲಿಯೋನ್ ಹೃದಯಸ್ಪರ್ಶಿ ಪತ್ರ

  |

  ನಟಿ ಸನ್ನಿ ಮುದ್ದು ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸದ್ಯ ವಿದೇಶದಲ್ಲಿ ನೆಲೆಸಿರುವ ಸನ್ನಿ ಲಿಯೋನ್ ಅಲ್ಲೇ ಪ್ರೀತಿಯ ಮಗಳ ಬರ್ತಡೇ ಆಚರಣೆ ಮಾಡಿದ್ದಾರೆ. ಅಂದ್ಹಾಗೆ ಸನ್ನಿ ಲಿಯೋನ್ ಮೂವರು ಮಕ್ಕಳನ್ನು ದತ್ತು ಪಡೆದಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಮಕ್ಕಳನ್ನು ತುಂಬಾ ಪ್ರೀತಿಸುವ ಸನ್ನಿ ಆಗಾಗ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿರುತ್ತಾರೆ.

  ಇದೀಗ ಸನ್ನಿ ಮಗಳು ನಿಶಾ ಕೌರ್ 5ನೇ ವರ್ಷದ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ಮಗಳ ಹುಟ್ಟುಹಬ್ಬಕ್ಕೆ ಸನ್ನಿ ಲಿಯೋನ್ ಭಾವನಾತ್ಮಕ ಪತ್ರ ಬರೆದಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿರುವ ಸನ್ನಿ, ಮಗಳು ಮಾತನಾಡಿರುವ ಆಡಿಯೋವನ್ನು ಶೇರ್ ಮಾಡಿದ್ದಾರೆ. ಮಗಳು ನಿಶಾ ಕೈಯಲ್ಲಿ ಹಳದಿ ಹೂ ಹಿಡಿದಿರುವ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ. ಮುಂದೆ ಓದಿ...

  ಕಂಗನಾ ರಣಾವತ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ನಟಿ ಸನ್ನಿ ಲಿಯೋನ್ಕಂಗನಾ ರಣಾವತ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ನಟಿ ಸನ್ನಿ ಲಿಯೋನ್

  ಸನ್ನಿ ಲಿಯೋನ್ ಪುತ್ರಿಯ ಆಡಿಯೋ ವೈರಲ್

  ಸನ್ನಿ ಲಿಯೋನ್ ಪುತ್ರಿಯ ಆಡಿಯೋ ವೈರಲ್

  5ನೇ ವರ್ಷದ ಹುಟ್ಟುಹಬ್ಬಕ್ಕೆ ಏನು ಬೇಕು ಎಂದು ಆಡಿಯೋ ಮೂಲಕ ನಿಶಾ ಹೇಳಿದ್ದಾರೆ. 'ನನ್ನ ಜನ್ಮದಿನಕ್ಕಾಗಿ, ಪ್ರಪಂಚದಾದ್ಯಂತ ಎಲ್ಲಾ ಮಕ್ಕಳು ದುಷ್ಟರ ವಿರುದ್ಧ ಒಟ್ಟಾಗಿ ನಿಲ್ಲಬೇಕು ಎಂದು ನಾನು ಬಯಸುತ್ತೇನೆ. ಇದು ನನ್ನ ಆಸೆ. ಎಲ್ಲರನ್ನು ಪ್ರೀತಿಸುತ್ತೇನೆ' ಎಂದು ಹೇಳಿದ್ದಾರೆ. ಸನ್ನಿ ಮುದ್ದು ಮಗಳ ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಮಗಳ ಬಗ್ಗೆ ಸನ್ನಿಯ ದೀರ್ಘವಾದ ಪತ್ರ

  ಮಗಳ ಬಗ್ಗೆ ಸನ್ನಿಯ ದೀರ್ಘವಾದ ಪತ್ರ

  ಮಗಳ ಬಗ್ಗೆ ನಟಿ ಸನ್ನಿ ಸನ್ನಿ ಲಿಯೋನ್ ದೀರ್ಘವಾದ ಪತ್ರ ಬರೆದಿದ್ದಾರೆ. ನನ್ನ ಪ್ರೀತಿಯ ದೇವತೆ ನಿಶಾ ಕೌರ್ ವೆಬರ್ ಗೆ ಜನ್ಮದಿನದ ಶುಭಾಶಯಗಳು. ನೀನು ನನ್ನ ಮಗಳು ಆದ ದಿನದಿಂದ ನಮ್ಮ ಬದುಕು ಬೆಳಕಾಗಿದೆ. ನಿನಗೆ 5 ವರ್ಷ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ನೀನು ಚಾಣಕ್ಷೆ, ಚಿಂತನಾಶೀಲಳು, ಪ್ರೀತಿ ಮತ್ತು ಕಾಳಜಿ ಉಳ್ಳವಳು. ಯಾವಾಗಲು ನಿನ್ನ ಸಹೋದರರ ಪರ ವಹಿಸುತ್ತಿಯಾ. ನಿನಗೆ ನಮ್ಮಿಂದ ಸಿಗುವ ಉಡುಗೊರೆಗಳು ದೇವರಿಂದ ಬಂದಿವೆ' ಎಂದಿದ್ದಾರೆ.

  ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಸನ್ನಿ ಲಿಯೋನ್: ಲಾಸ್ ಏಂಜಲೀಸ್ ನಲ್ಲಿ ಜಾಲಿ ಟ್ರಿಪ್ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಸನ್ನಿ ಲಿಯೋನ್: ಲಾಸ್ ಏಂಜಲೀಸ್ ನಲ್ಲಿ ಜಾಲಿ ಟ್ರಿಪ್

  ಸನ್ನಿ ಲಿಯೋನ್ ಪ್ರತಿಜ್ಞೆ

  ಸನ್ನಿ ಲಿಯೋನ್ ಪ್ರತಿಜ್ಞೆ

  ನಿನ್ನ ಜನ್ಮದಿನದಂದು ನಾನು ನಿನ್ನ ಸಂದೇಶವನ್ನು ಜಗತ್ತಿಗೆ ಹರಡಲು ನಾನು ಪ್ರಯತ್ನ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತೇನೆ. ನಮ್ಮೆಲ್ಲರ ಬದುಕಿನಲ್ಲಿ ಅಗತ್ಯವಿರುವ ದಯೆಯನ್ನು ಪುನಃ ಸ್ಥಾಪಿಸುತ್ತೇವೆ' ಎಂದಿದ್ದಾರೆ.

  ದುಷ್ಟ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕು

  ದುಷ್ಟ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕು

  'ನಿನ್ನ ಪ್ರೀತಿಯಿಂದ ನಾವು ಒಬ್ಬ ವ್ಯಕ್ತಿಯನ್ನು ಉತ್ತಮ ಮನುಷ್ಯನನ್ನಾಗಿ ಬದಲಾಯಿಸಬಹುದು ಎಂದು ನಾನು ಭಾವಿಸುತ್ತೇನೆ. ನಾವು ನಮ್ಮ ಜೀವನದಲ್ಲಿ ಒಂದು ಹಂತವನ್ನು ತಲುಪಿದ್ದೇವೆ. ಇಲ್ಲಿ ಬಹಳಷ್ಟು ಜನರು ಹೆಚ್ಚು ಕೆಟ್ಟವರಾಗಿದ್ದಾರೆ. ನಾನು ಮತ್ತು ನಿನ್ನಂಥ ಎಲ್ಲಾ ಮಕ್ಕಳು ಸೇರಿಕೊಂಡು ದುಷ್ಟ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕು. ಇದೇ ನನ್ನ ಬಯಕೆ. ನೀನು ಮತ್ತು ಎಲ್ಲಾ ಮಕ್ಕಳು ವಿಶ್ವದ ಭವಿಷ್ಯ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ನಿಶಾ ಕೌರ್' ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.

  English summary
  Sunny Leone pens Heartwarming note for daughter Nisha on her birthday. Sunny Leone daughter Nisha celebrating her 5th birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X