ಕ್ರಿಕೆಟಿಗ ಶ್ರೀಶಾಂತ್ ಸಿನಿಮಾದಲ್ಲಿ ಸನ್ನಿ ಲಿಯೋನ್

ಕ್ರಿಕೆಟ್ ಆಟಗಾರ ಶ್ರೀಶಾಂತ್ ಇದೀಗ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಕ್ರಿಕೆಟ್ ಬದುಕಿನಲ್ಲಿ ಸಾಕಷ್ಟು ಅಡೆತಡೆಗಳನ್ನು ಎದುರಿಸಿರುವ ಶ್ರೀಶಾಂತ್ ಇದೀಗ ನಟನಾಗಿ ಗುರುತಿಸಿಕೊಂಡಿದ್ದಾರೆ. ಕಿರುತೆರೆ ಮತ್ತು ಸಿನಿಮಾಗಳಲ್ಲಿ ಸಕ್ರಿಯರಾಗಿರುವ ಶ್ರೀಶಾಂತ್, ಈಗಾಗಲೇ ಹಿಂದಿ ಮಲಯಾಳಂ ಮತ್ತು ಕನ್ನಡದಲ್ಲಿ ಮಿಂಚಿದ್ದಾರೆ. ಇದೀಗ ಶ್ರೀಶಾಂತ್ ನಟನೆಯ ಹೊಸ ಹಿಂದಿ ಸಿನಿಮಾ ಸದ್ದು ಮಾಡುತ್ತಿದೆ.

ಈಗಾಗಲೇ ಶ್ರೀಶಾಂತ್ ಹೊಸ ಚಿತ್ರದ ಟೈಟಲ್ ಮತ್ತು ನಿರ್ದೇಶಕರು ಫೈನಲ್ ಆಗಿದ್ದು, ಚಿತ್ರೀಕರಣಕ್ಕಾಗಿ ಎದುರು ನೋಡುತ್ತಿದ್ದಾರೆ ಶ್ರೀಶಾಂತ್. ಅಂದಹಾಗೆ ಶ್ರೀಶಾಂತ್ ಹೊಸ ಸಿನಿಮಾಗೆ ಆರ್ ರಾಧಕೃಷ್ಣನ್ ಕತೆ ಬರೆದು ನಿರ್ದೇಶಕ ಮಾಡುತ್ತಿದ್ದು 'ಪಟ್ಟಾ' ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರದಲ್ಲಿ ಶ್ರೀಶಾಂತ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇದೀಗ ಚಿತ್ರದ ಬಗ್ಗೆ ಮತ್ತೊಂದು ಇಂಟ್ರೆಸ್ಟಿಂಗ್ ಸುದ್ದಿ ಕೇಳಿಬರುತ್ತಿದೆ. ಶ್ರೀಶಾಂತ್ ನಟನೆಯ ಪಟ್ಟಾ ಚಿತ್ರಕ್ಕೆ ಬಾಲಿವುಡ್ ನಟಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಎಂಟ್ರಿ ಕೊಟ್ಟಿದ್ದಾರೆ. ಅಂದಹಾಗೆ ಪಟ್ಟಾ ರಾಜಕೀಯ ಥ್ರಿಲ್ಲರ್ ಸಿನಿಮಾವಾಗಿದೆ.

Sunny Leone playing a major role in Sreeshanths Bollywood Movie Patta

ಚಿತ್ರದಲ್ಲಿ ಶ್ರೀಶಾಂತ್ ಸಿಬಿಐ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ಇದರಲ್ಲಿ ಮಹಿಳೆಯ ಪಾತ್ರ ಪ್ರಮುಖವಾಗಿರುವ ಕಾರಣ ಸನ್ನಿ ಲಿಯೋನ್ ಅವರನ್ನು ಚಿತ್ರತಂಡ ಆಯ್ಕೆ ಮಾಡಿದೆಯಂತೆ. ಅಂಜಲಿ ಎನ್ನುವ ಪಾತ್ರದಲ್ಲಿ ಸನ್ನಿಲಿಯೋನ್ ನಟಿಸುತ್ತಿದ್ದಾರೆ. ಇಲ್ಲಿವರೆಗೂ ಸನ್ನಿ ಲಿಯೋನ್ ಮಾಡಿರದ ಪಾತ್ರ ಇದಾಗಿದೆ ಎನ್ನಲಾಗುತ್ತಿದೆ.

ಈ ಬಗ್ಗೆ ಟೈಂ ಆಫ್ ಇಂಡಿಯಾ ವೆಬ್ ಪೋರ್ಟಲ್ ಜೊತೆ ಮಾತನಾಡಿದ ನಿರ್ದೇಶಕ ರಾಧಕೃಷ್ಣನ್, "ಈ ಪಾತ್ರದಲ್ಲಿ ಸನ್ನಿ ಲಿಯೋನ್ ನಟಿಸುತ್ತಾರಾ ಇಲ್ಲವೋ ಎನ್ನುವ ಅನುಮಾನವಿತ್ತು. ಆದರೆ ಕಥೆ ಕೇಳಿ ತುಂಬಾ ಇಂಪ್ರೆಸ್ ಆಗಿ ಸಿನಿಮಾ ಒಪ್ಪಿಕೊಂಡಿದ್ದಾರೆ" ಎಂದು ಹೇಳಿದ್ದಾರೆ. ಇನ್ನು ಚಿತ್ರದಲ್ಲಿ ಗುಜರಾತಿನ ಖ್ಯಾತ ನಟ ಬಿಮಲ್ ತ್ರಿವೇದಿ ಕೂಡ ನಟಿಸುತ್ತಿದ್ದಾರೆ.

ಸದ್ಯದಲ್ಲೇ ಚಿತ್ರೀಕರಕ್ಕೆ ಹೊರಡಲು ಸಿದ್ಧವಾಗಿದೆ ಪಟ್ಟಾ ಟೀಂ. ಕ್ರಿಕೆಟ್ ಜೀವನದಿಂದ ದೂರ ಸರಿದ ಶ್ರೀಶಾಂತ್ ಸಿನಿಮಾ ಮೂಲಕ ಮತ್ತೆ ಅಭಿಮಾನಿಗಳನ್ನು ಮನ ಗೆಲ್ಲುತ್ತಾರಾ ಎಂದು ಕಾದುನೋಡಬೇಕು.

More from Filmibeat

English summary
Actress Sunny Leone playing a major role in Sreeshanth's Bollywood Movie Patta.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X