For Quick Alerts
  ALLOW NOTIFICATIONS  
  For Daily Alerts

  ಮುಂಬೈನಲ್ಲಿ ಭಾರಿ ದುಬಾರಿ ಮನೆ ಖರೀದಿಸಿದ ಸನ್ನಿ ಲಿಯೋನ್

  |

  ನಟಿ ಸನ್ನಿ ಲಿಯೋನ್ ಕೊನೆಗೂ ಭಾರತದಲ್ಲಿ ನೆಲೆಯೂರಲು ನಿಶ್ಚಯಿಸಿದ್ದಾರೆ. ಮುಂಬೈನಲ್ಲೊಂದು ಮನೆ ಖರೀದಿಸಿರುವ ಸನ್ನಿ, ಇತ್ತೀಚೆಗಷ್ಟೆ ಕುಟುಂಬದೊಂದಿಗೆ ಹೊಸ ಮನೆ ಪ್ರವೇಶ ಮಾಡಿದ್ದಾರೆ. ಈ ದುಬಾರಿ ಮನೆ ಈಗ ಬಾಲಿವುಡ್‌ನ ಚರ್ಚೆಯ ವಿಷಯಗಳಲ್ಲಿ ಒಂದು.

  ಅಮೆರಿಕದ ಲಾಸ್ ಏಂಜಲಿಸ್‌ನಲ್ಲಿ ಐಶಾರಾಮಿ ಮನೆ ಹೊಂದಿರುವ ಸನ್ನಿ ಲಿಯೋನ್ ಹಾಗೂ ಡ್ಯಾನಿಯಲ್ ದಂಪತಿ ಹಲವು ವರ್ಷದಿಂದ ಭಾರತದಲ್ಲಿಯೇ ನೆಲೆಸಿದ್ದರು. ಮುಂಬೈನಲ್ಲಿ ನಟಿ ಸೆಲೀನಾ ಜೇಟ್ಲಿಗೆ ಸೇರಿದ ಐಶಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆಗೆ ಈ ದಂಪತಿ ಮಕ್ಕಳೊಟ್ಟಿಗೆ ವಾಸವಿದ್ದರು.

  ಕಳೆದ ವರ್ಷ ಕೊರೊನಾ ಲಾಕ್‌ಡೌನ್ ಆದಾಗ ಮುಂಬೈನಿಂದ ಲಾಸ್ ಏಂಜಲ್ಸ್‌ಗೆ ಹಾರಿದ ಸನ್ನಿ ಲಿಯೋನ್ ಹಾಗೂ ಡ್ಯಾನಿಯಲ್ ಅಲ್ಲಿಯೇ ಹಲವು ತಿಂಗಳು ವಾಸವಿದ್ದರು. ನಂತರ ಮತ್ತೆ ಭಾರತಕ್ಕೆ ಮರಳಿದ ಇವರು ಈಗ ಮುಂಬೈನಲ್ಲಿಯೇ ಹೊಸದಾದ ದೊಡ್ಡ ಮನೆಯೊಂದನ್ನು ಖರೀದಿಸಿದ್ದಾರೆ.

  ಭಾರಿ ದುಬಾರಿ ಮನೆ ಖರೀದಿಸಿದ ಸನ್ನಿ ಲಿಯೋನ್

  ಭಾರಿ ದುಬಾರಿ ಮನೆ ಖರೀದಿಸಿದ ಸನ್ನಿ ಲಿಯೋನ್

  ಅಂಧೇರಿಯಲ್ಲಿ ಹೊಸ ಮನೆ ಖರೀದಿಸಿರುವ ಸನ್ನಿ ಲಿಯೋನ್ ಈ ಮನೆಗೆ ತೆತ್ತಿರುವುದು ಬರೋಬ್ಬರಿ 16 ಕೋಟಿ ಹಣ! ಈ ಪ್ರಾಪರ್ಟಿಯ ಸ್ಟ್ಯಾಂಪ್ ಡ್ಯೂಟಿಯೇ 48 ಲಕ್ಷ ಆಗಿದೆ. ಆಸ್ತಿಯು ಮಾರ್ಚ್ 28ರಂದು ನೊಂದಾವಣಿ ಆಗಿದೆ. ಸನ್ನಿ ಲಿಯೋನ್ ಖರೀದಿಸಿರುವ ಮನೆ ಐಶಾರಾಮಿ ಅಪಾರ್ಟ್‌ಮೆಂಟ್‌ನ 12ನೇ ಅಂತಸ್ಥಿನಲ್ಲಿದೆ.

  ಕರಣ್‌ಜೀತ್ ಕೌರ್ ಹೆಸರಲ್ಲಿ ಮನೆ ನೊಂದಣಿ ಆಗಿದೆ

  ಕರಣ್‌ಜೀತ್ ಕೌರ್ ಹೆಸರಲ್ಲಿ ಮನೆ ನೊಂದಣಿ ಆಗಿದೆ

  ಅಟ್ಲಾಂಟೀಸ್ ಪ್ರಾಜೆಕ್ಟ್ ಹೆಸರಿನ ಸಮುಚ್ಛಯದಲ್ಲಿ ಸನ್ನಿ ಲಿಯೋನ್ ಮನೆ ಖರೀದಿಸಿದ್ದು, ಸನ್ನಿ ಲಿಯೋನ್‌ಗೆ ವಿಸ್ತಾರವಾದ ಕಾರುಗಳ ಪಾರ್ಕಿಂಗ್‌ ಸ್ಥಳ ಸಹ ದೊರೆತಿದೆ. ಆಸ್ತಿಯು ಸನ್ನಿ ಲಿಯೋನ್‌ರ ಮೂಲ ಹೆಸರು ಕರಣ್‌ಜೀತ್ ಕೌರ್ ಹೆಸರಲ್ಲಿ ನೊಂದಣಿ ಆಗಿದೆ. ಈ ಅಪಾರ್ಟ್‌ಮೆಂಟ್ ಅನ್ನು ಪ್ರತಿಷ್ಠಿತ ಕ್ರಿಸ್ಟಲ್ ಪ್ರೈಡ್ ಡೆವಲಪರ್ಸ್ ನಿರ್ಮಿಸಿದ್ದಾರೆ.

  4365 ಚದರ ಅಡಿ ವಿಸ್ತಾರವಾದ ಮನೆ

  4365 ಚದರ ಅಡಿ ವಿಸ್ತಾರವಾದ ಮನೆ

  ಸನ್ನಿ ಲಿಯೋನ್‌ರ ಈ ಹೊಸ ಮನೆಯು 4365 ಚದರ ಅಡಿ ವಿಸ್ತಾರವಾಗಿದ್ದು ಮನೆಯಲ್ಲಿ ನಾಲ್ಕು ಬೆಡ್‌ ರೂಂ. ಒಂದು ವೀಶಾಲವಾದ ಟೆರೆಸ್ ಇದ್ದು ಅಲ್ಲಿಂದ ಅರಬ್ಬಿ ಸಮುದ್ರ ಸುಂದರವಾಗಿ ಕಾಣುತ್ತದೆ. ಅಮೆರಿಕದಿಂದ ಮರಳಿ ಬಂದಾಗಿನಿಂದಲೂ ಸನ್ನಿ ಲಿಯೋನ್ ಕುಟುಂಬವು ಹೋಟೆಲ್‌ಗಳಲ್ಲಿಯೇ ವಾಸ್ತವ್ಯ ಹೂಡಿತ್ತು. ಆದರೆ ಹೋಟೆಲ್ ವಾಸ್ತವ್ಯ ಸರಿ ಬರಲಿಲ್ಲವಾದ್ದರಿಂದ ಕೆಲವು ವಾರಗಳಿಂದ ಹೊಸ ಮನೆಗಾಗಿ ಈ ದಂಪತಿ ಹುಡುಕಾಡುತ್ತಿದ್ದರು.

  ಅಮಿತಾಬ್ ಬಚ್ಚನ್‌ ಸಹ ಇಲ್ಲಿಯೇ ಮನೆ ಹೊಂದಿದ್ದಾರೆ

  ಅಮಿತಾಬ್ ಬಚ್ಚನ್‌ ಸಹ ಇಲ್ಲಿಯೇ ಮನೆ ಹೊಂದಿದ್ದಾರೆ

  ಕ್ರಿಸ್ಟಲ್ ಪ್ರೈಡ್ ಡೆವಲಪರ್ಸ್ ನಿರ್ಮಿಸಿರಿವು ಇದೇ ಅಪಾರ್ಟ್‌ಮೆಂಟ್‌ನಲ್ಲಿ ಅಮಿತಾಬ್ ಬಚ್ಚನ್ ಸಹ ಒಂದು ಐಶಾರಾಮಿ ಫ್ಲ್ಯಾಟ್ ಖರೀದಿಸಿದ್ದಾರೆ. ಡ್ಯೂಪ್ಲೆಕ್ಸ್‌ ಫ್ಲ್ಯಾಟ್‌ ಅನ್ನು ಬಚ್ಚನ್ ಈ ಅಪಾರ್ಟ್‌ಮೆಂಟ್‌ನಲ್ಲಿ ಹೊಂದಿದ್ದು ಇದಕ್ಕೆ ಬರೋಬ್ಬರಿ 31 ಕೋಟಿ ರುಪಾಯಿ ವ್ಯಯಿಸಿದ್ದಾರೆ. ಬಾಲಿವುಡ್ ನಿರ್ದೇಶಕ ಆನಂದ್ ಎಲ್ ರಾಯ್ ಸಹ ಇದೇ ಅಪಾರ್ಟ್‌ಮೆಂಟ್‌ನಲ್ಲಿ ಒಂದು ಐಶಾರಾಮಿ ಫ್ಲ್ಯಾಟ್ ಹೊಂದಿದ್ದಾರೆ.

  English summary
  Actress Sunny Leone purchased new house in Mumbai worth Rs 16 crore . Sunny Leone's new house is located in Andheri, Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X