»   » ವಯಸ್ಕರ ವೆಬ್ ಸೈಟ್ ಗಳಿಗೆ ಸನ್ನಿ ಹಾಟ್ ಚಿತ್ರ ಲಗ್ಗೆ

ವಯಸ್ಕರ ವೆಬ್ ಸೈಟ್ ಗಳಿಗೆ ಸನ್ನಿ ಹಾಟ್ ಚಿತ್ರ ಲಗ್ಗೆ

By: ರವಿಕಿಶೋರ್
Subscribe to Filmibeat Kannada

ಬಾಲಿವುಡ್ ತಾರೆ ಸನ್ನಿ ಲಿಯೋನ್ ಮುಟ್ಟಿದ ಕಡೆಯಲ್ಲಾ ಕರೆಂಟ್ ಪಾಸಾಗುತ್ತಿದೆ. ಇದೀಗ ರಾಗಿಣಿ ಎಂಎಂಎಸ್ 2 ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಚಿತ್ರದ ಹಾಟ್ ದೃಶ್ಯಗಳು ಅಂತರ್ಜಾಲದ ನೀಲಿ ತಾಣಗಳಿಗೂ ಲಗ್ಗೆ ಹಾಕುತ್ತಿವೆ.

ಹಾರರ್ ಹಾಗೂ ಸೆಕ್ಸ್ ಮಿಶ್ರಿತ ಈ ಚಿತ್ರಕ್ಕೆ ಭೂಷಣ್ ಪಟೇಲ್ ಆಕ್ಷನ್ ಕಟ್ ಹೇಳಿದ್ದು, ಈ ಚಿತ್ರದ ಥಿಯೇಟ್ರಿಕಲ್ ಟ್ರೇಲರನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಇನ್ನೊಂದು ಮುಖ್ಯ ಸಂಗತಿ ಎಂದರೆ ಈ ಟ್ರೇಲರನ್ನು ವಯಸ್ಕರ ಜಾಲತಾಣಗಳಲ್ಲೂ ಬಿಡುಗಡೆ ಮಾಡಲಾಗುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ವಯಸ್ಕರ ಜಾಲತಾಣಗಳಲ್ಲಿ ಸನ್ನಿ ಲಿಯೋನ್ ಗೆ ಬಹಳಷ್ಟು ಅಭಿಮಾನಿಗಳಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡೇ ಟ್ರೇಲರನ್ನು ವಯಸ್ಕರ ಜಾಲತಾಣಗಳಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿದ್ದೇವೆ ಎಂದು ಬಾಲಾಜಿ ಫಿಲಂಸ್ ಸಿಈಓ ತನುಜ್ ಗಾರ್ಗ್ ತಿಳಿಸಿದ್ದಾರೆ. ಸ್ಲೈಡ್ ನಲ್ಲಿ ಮತ್ತಷ್ಟು ವಿವರಗಳು...

ಮಾರ್ಚ್ 21ಕ್ಕೆ ರಾಗಿಣಿ ಎಂಎಂಎಸ್ 2 ತೆರೆಗೆ

ಈ ಚಿತ್ರದ ವಿಶೇಷಗಳ ಬಗ್ಗೆ ಹೇಳಬೇಕೆಂದರೆ...ಸೆಕ್ಸಿ ಸನ್ನಿವೇಶಗಳು, ಭಯಾನಕ ದೃಶ್ಯಗಳಿಂದ ಕೂಡಿರುವ ಚಿತ್ರ ಪ್ರೇಕ್ಷಕರಿಗೆ ಥ್ರಿಲ್ಲಿಂಗ್ ಅನುಭವವನ್ನು ಕೊಡುತ್ತದಂತೆ. ಮಾರ್ಚ್ 21ಕ್ಕೆ ತೆರೆಗೆ ರಾಗಿಣಿ ಎಂಎಂಎಸ್ ಚಿತ್ರ ಅಪ್ಪಳಿಸುತ್ತಿದೆ.

ನಿರೀಕ್ಷೆಗಳಿಗಿಂತಲೂ ಕುತೂಹಲವೇ ಜಾಸ್ತಿ

ಬಾಲಿವುಡ್ ನಲ್ಲಿ ಸನ್ನಿ ಲಿಯೋನ್ ಅಭಿನಯಿಸುತ್ತಿರುವ ಎರಡನೇ ಚಿತ್ರವಿದು. ಈ ಬಾರಿಯೂ ಅಭಿಮಾನಿಗಳಿಗೆ ಖಂಡಿತ ನಿರಾಸೆಪಡಿಸಲ್ಲ ಎಂಬಂತಿವೆ ಚಿತ್ರದ ದೃಶ್ಯಗಳು. ಸನ್ನಿ ಲಿಯೋನ್ ಚಿತ್ರದ ಎಂದರೆ ನಿರೀಕ್ಷೆಗಳಿಗಿಂತಲೂ ಕುತೂಹಲವೇ ಜಾಸ್ತಿ. ಅದಕ್ಕೆ ತಕ್ಕಂತೆಯೇ ನಿರ್ದೇಶಕರು ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.

ಇದು ಮೊದಲ HORREX ಚಿತ್ರ

ಇಷ್ಟಕ್ಕೂ ರಾಗಿಣಿ ಎಂಎಂಎಸ್ ಚಿತ್ರ ಯಾವ ವಿಭಾಗಕ್ಕೆ ಸೇರುತ್ತದೆ? ಇದುವರೆಗೂ ಭಾರತೀಯ ಚಿತ್ರರಂಗದಲ್ಲಿ ತೆರೆಕಂಡಿರುವ ಚಿತ್ರಗಳ ಸಾಲಿಗೆ ಇದು ಸೇರಲ್ಲವಂತೆ. ಏಕೆಂದರೆ ಇದು ಮೊದಲ HORREX ಚಿತ್ರ. ಅಂದರೆ ಹಾರರ್ ಹಾಗೂ ಸೆಕ್ಸ್ ಎರಡನ್ನೂ ಬ್ರೆಡ್ ಮತ್ತು ಜಾಮ್ ನಂತೆ ಬೆಸೆದಿರುವ ಚಿತ್ರವಂತೆ.

ಜಿಸ್ಮ್ 2 ಬಳಿಕ ಸನ್ನಿ ಒಪ್ಪಿಕೊಂಡಿರುವ ಚಿತ್ರ

'ಜಿಸ್ಮ್ 2' ಚಿತ್ರದ ಬಳಿಕ ಸನ್ನಿ ಲಿಯೋನ್ ಬಣ್ಣ ಹಚ್ಚಿಕೊಂಡಿರುವ ಚಿತ್ರ. ಈ ಚಿತ್ರದಲ್ಲಿನ ಸನ್ನಿ ಸಲಿಂಗಸ್ತ್ರೀಕಾಮಿ ಪಾತ್ರವನ್ನು ಪೋಷಿಸುತ್ತಿದ್ದಾರೆ. ತೆರೆಯ ಮೇಲೆ ಸನ್ನಿಗೆ ಸಾಥ್ ನೀಡುತ್ತಿರುವವರು ಕಿರುತೆರೆ ನಟಿ ಸಂಧ್ಯಾ ಮೃದುಲ್.

ಒಂದು ಕೋಟಿ ಸಂಭಾವನೆ ಪಡೆದಿರುವ ಸನ್ನಿ

ಚಿತ್ರದಲ್ಲಿ ಇವರಿಬ್ಬರೂ ತುಂಬಾ ರೋಚಕವಾಗಿ ಅಭಿನಯಿಸಿದ್ದಾರೆ ಎಂಬ ಸುದ್ದಿ ಇದೆ. ಇವರಿಬ್ಬರೂ ಅಪ್ಪಿಕೊಳ್ಳುವುದು, ಚುಂಬಿಸಿಕೊಳ್ಳುವ ಕೆಲವು ಸನ್ನಿವೇಶಗಳೂ ಇವೆ. ಈ ಚಿತ್ರಕ್ಕಾಗಿ ಸನ್ನಿ ಲಿಯೋನ್ ಒಂದು ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಎಂಎಂಎಸ್ ಸ್ಕ್ಯಾಂಡಲ್ ಕುರಿತ ಚಿತ್ರ ಇದಾಗಿದೆ

ಎಂಎಂಎಸ್ ಸ್ಕ್ಯಾಂಡಲ್ ಕುರಿತ ಕತೆ ಇದಾಗಿದ್ದು ಈ ಹಿಂದೆ ಬಂದಂತಹ ರಾಗಿಣಿ ಎಂಎಂಎಸ್ ಚಿತ್ರದ ಮುಂದುವರಿದ ಭಾಗವಾಗಿ ರಾಗಿಣಿ ಎಂಎಂಎಸ್ 2 ಬರುತ್ತಿದೆ.

ಚಾರ್ ಬಾಟಲ್ ವೋಡ್ಕಾ ಸ್ಪೆಷಲ್ ಸಾಂಗ್

ಚಿತ್ರದ "ಚಾರ್ ಬಾಟಲ್ ವೋಡ್ಕಾ" ಎಂಬ ಹಾಡನ್ನು ಮುಂಬೈನಲ್ಲಿ ಚಿತ್ರೀಕರಿಸಲಾಗಿದೆ. ಈ ಹಾಡು ಈಗ ಚಿತ್ರರಸಿಕರಲ್ಲಿ ಭಾರಿ ಕುತೂಹಲ ಕೆರಳಿಸಿದೆ.

ಸನ್ನಿ ಅಂಡರ್ ವೇರ್ ಬೆಲೆ ರು.50 ಸಾವಿರ

ಇತ್ತೀಚೆಗೆ ರಾಗಿಣಿ ಎಂಎಂಎಸ್ 2 ಚಿತ್ರೀಕರಣ ವೇಳೆ ಸನ್ನಿ ಲಿಯೋನ್ ಅಂಡವೇರ್ ಕಳುವಾಗಿತ್ತು. 'ರಾಗಿಣಿ ಎಂಎಂಎಸ್ 2' ಚಿತ್ರೀಕರಣಕ್ಕಾಗಿ ಈ ವಿಶೇಷ ಒಳಉಡುಪನ್ನು ಸ್ಪೆಷಲ್ ಆಗಿ ಆರ್ಡರ್ ಕೊಟ್ಟು ತರಿಸಲಾಗಿತ್ತಂತೆ. ಅದರ ಬೆಲೆ ಸುಮಾರು ರು.50 ಸಾವಿರ.

ಸನ್ನಿ ಲಿಯೋನ್ ಅಂಡರ್ ವೇರ್ ನಾಪತ್ತೆ

ಇನ್ನೇನು ಈ ಟೂ ಪೀಸ್ ಚಿತ್ರೀಕರಣಕ್ಕೆ ಸನ್ನಿ ತಯಾರಾಗಬೇಕು ಆದರೆ ಒಳಉಡುಪುಗಳು ನಾಪತ್ತೆ. ಬಳಿಕ ಆನ್ ಲೈನ್ ನಲ್ಲಿ ಇನ್ನೊಂದು ಹೊಸ ಪೀಸ್ ತರಿಸಿ ಚಿತ್ರೀಕರಿಸಲಾಯಿತಂತೆ. ಕದ್ದವ ಮಾತ್ರ ಇನ್ನೂ ಸಿಕ್ಕಿಬಿದ್ದಿಲ್ಲ.

ನೀಲಿ ತಾಣಗಳಿಗೆ ಬಿಡುಗಡೆಯಾಗಲಿರುವ ಟ್ರೇಲರ್

ಇದೇ ಟ್ರೇಲರ್ ವಯಸ್ಕರ ಜಾಲತಾಣಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಚಿತ್ರತಂಡ ತಿಳಿಸಿದೆ.

English summary
The theatrical trailer of Indo-Canadian adult film star-turned-actress Sunny Leones ‘Ragini MMS 2’ that released Monday can also be accessed worldwide across adult websites.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada