ನನ್ನ ಸ್ವಂತ ಅನುಭವದಿಂದ ನಾನು ಹೇಳ ಬಲ್ಲೆ ; ಕಾಸ್ಟಿಂಗ್ ಕೌಚ್‌ ಗೆ ಬಲಿಯಾಗಿದ್ರಾ ಸನ್ನಿ ಲಿಯೋನ್...?

ಸನ್ನಿ ಲಿಯೋನ್ ಎಂಬ ಹೆಸರಿಗೆ ಸಮ್ಮೋಹಕವಾದೊಂದು ಸೆಳೆತವಿದೆ. ಅದಕ್ಕೆ ಕಾರಣವಾದ 'ನೀಲಿ' ನೆರಳು ಏನೇ ಇರಬಹುದು. ಆದರೆ ಇವತ್ತು ಸನ್ನಿ ಲಿಯೋನ್ ಬಾಲಿವುಡ್‌ನಲ್ಲಿ ಅಷ್ಟೇ ಅಲ್ಲದೇ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಕೂಡ ತಮ್ಮ ಅಸ್ತಿತ್ವವನ್ನ ಕಂಡುಕೊಂಡಿದ್ದಾರೆ. ನಟಿಯಾಗಿ ನೆಲೆಯೂರಿದ್ದಾರೆ. ಇವತ್ತು ಸನ್ನಿ ಲಿಯೋನ್‌ ಬಳಿ ಕೈ ತುಂಬಾ ಅವಕಾಶಗಳಿವೆ. ದಕ್ಷಿಣದಿಂದ ಉತ್ತರದವರೆಗೆ ಅಭಿಮಾನಿ ಬಳಗ ಇದೆ.

ಇಂಥಾ ಸನ್ನಿ ಲಿಯೋನ್ ಸದ್ಯಕ್ಕೆ ಪಾತ್ರಕ್ಕಾಗಿ ಪಲ್ಲಂಗ ಸಂಸ್ಕ್ರತಿಯ ಬಗ್ಗೆ ಮಾತನಾಡಿದ್ದಾರೆ. ಮಲಯಾಳಂ ಚಿತ್ರರಂಗಕ್ಕೆ ಅಪ್ಪಳಿಸಿರುವ ಕಾಮದ ಅಲೆಯ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹೌದು, ತಮ್ಮ 'ಪೆಟ್ಟ ರಾಪ್' ಚಿತ್ರದ ಪ್ರಚಾರವನ್ನೂ ಮಾಡಲು ಕೇರಳದ ಕೊಚ್ಚಿಗೆ ಬಂದಿದ್ದ ಸನ್ನಿ ಲಿಯೋನ್, ಕಾಸ್ಟಿಂಗ್ ಕೌಚ್ ಕುರಿತು ಮಾತನಾಡಿದ್ದಾರೆ. ನಿಜಾ ಹೇಳಬೇಕೆಂದರೆ ನಾನು ನನ್ನ ಸ್ವಂತ ಅನುಭವದಿಂದ ಮಾತ್ರ ಈ ಕುರಿತು ಮಾತನಾಡಲು ಸಾಧ್ಯ ಎಂದಿರುವ ಸನ್ನಿ ಲಿಯೋನ್, ಬೇರೆ ನಟಿಯರು ಹೇಳಿಕೊಳ್ಳುತ್ತಿರುವಂತೆ ನಾನು ಈ ಕಾಸ್ಟಿಂಗ್ ಕೌಚ್ ಸಮಸ್ಯೆಯನ್ನು ಎದುರಿಸಿಲ್ಲ ಎಂದಿದ್ದಾರೆ. ಚಿತ್ರದ ಪಾತ್ರಕ್ಕೆ ಬಣ್ಣ ಹಚ್ಚಲು ನಾನು ಹೆಚ್ಚಿನ ಸಂಭಾವನೆ ಅಥವಾ ಬೇರೆ ಸೌಲಭ್ಯಗಳು ಬೇಕಿದ್ದಾಗ ನಾನು ಧ್ವನಿ ಎತ್ತಿದ್ದೇನೆ ಎಂದು ಸನ್ನಿ ಲಿಯೋನ್ ಹೇಳಿದ್ದಾರೆ.

Sunny Leone responds to casting couch allegations stating I can only speak from my own experience

ನಮ್ಮ ನಿರ್ಧಾರವನ್ನು ನಾವು ತೆಗೆದುಕೊಳ್ಳಬೇಕು ಎಂದಿರುವ ಸನ್ನಿ ಲಿಯೋನ್, ಯಾವುದು ಸರಿ ಯಾವುದು ತಪ್ಪು ಎನ್ನುವುದು ನಮಗೆ ಗೊತ್ತಿರಬೇಕು ಅಂದಿದ್ಧಾರೆ. ಮುಂದುವರೆದು ತಪ್ಪು ಎಂದು ನಮಗೆ ಮನವರಿಕೆಯಾದಾಗ ನೇರವಾಗಿಯೇ ನೋ ಎಂದು ಹೇಳಿ ಮುನ್ನಡೆಯಬೇಕು ಎಂದಿರುವ ಸನ್ನಿ ಲಿಯೋನ್, ನನ್ನ ಮುಂದೆ ಅನೇಕ ಬಾಗಿಲುಗಳು ಮುಚ್ಚಿವೆ. ಆದರೆ ಇದರಿಂದ ನನಗೆ ಸಮಸ್ಯೆಯಾಗಿಲ್ಲ. ಯಾಕೆಂದರೆ ಒಂದು ಅವಕಾಶ ಕಳೆದು ಹೋದರೆ ಇನ್ನೂ ನೂರು ಅವಕಾಶಗಳ ಬಾಗಿಲು ನಮಗೋಸ್ಕರ ತೆರೆಯುತ್ತವೆ ಎಂದು ಹೇಳಿದ್ದಾರೆ.

ಅಂದ್ಹಾಗೇ ಹೇಮಾ ಆಯೋಗದ ವರದಿ ಜಗಜ್ಜಾಹೀರಾದ ನಂತರ ಮಲಯಾಳಂ ಚಿತ್ರರಂಗದಲ್ಲಿ 17 ಲೈಂಗಿಕ ದೌರ್ಜನ್ಯದ ಪ್ರಕರಣಗಳು ದಾಖಲಾಗಿವೆ. ಮಲಯಾಳಂನ ನಟರಾದ ಸಿದ್ಧಿಕ್, ಬಾಬು ರಾಜ್ , ಕೊಲ್ಲಂ ಶಾಸಕ ಮತ್ತು ನಟ ಮುಖೇಶ್, ಜಯಸೂರ್ಯ, ಮಣಿಯಂ ಪಿಳ್ಳೈ ರಾಜು, ನಿರ್ದೇಶಕ ರಂಜಿತ್, ಹೀಗೆ ಅನೇಕರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಪ್ರೇಮಂ ಹೀರೋ ಮತ್ತು ಖ್ಯಾತ ಸ್ಟಾರ್ ನಿವಿನ್ ಪೌಲಿ ವಿರುದ್ಧ ಕೂಡ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಗಿದೆ. ಆದ್ಯಾಗೂ ನಿವಿನ್ ಪೌಲಿ ವಿಚಾರದಲ್ಲಿ ಅನೇಕರು ಆರೋಪ ಮಾಡಿರುವ ಯುವತಿಯ ಮೇಲೆಯೇ ಅನುಮಾನ ವ್ಯಕ್ತಪಡಿಸುತ್ತಿದ್ದು, ಪ್ರಚಾರಕ್ಕೆ ಯುವತಿ ಸುಳ್ಳು ಸುಳ್ಳು ಆರೋಪ ಮಾಡುತ್ತಿದ್ದಾಳೆ ಎನ್ನುವ ಮಾತು ಕೇರಳದಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಯುವತಿ ದೂರಿನಲ್ಲಿ ಉಲ್ಲೇಖಿಸಿರುವ ದಿನದಂದು ನಿವಿನ್ ಪೌಲಿ ದುಬೈನಲ್ಲಿ ಇರಲಿಲ್ಲ ಬದಲಿಗೆ ಭಾರತದಲ್ಲಿಯೇ ಇದ್ದರು ಅನ್ನುವುದು ಪೊಲೀಸರ ತನಿಖೆಯ ವೇಳೆ ಗೊತ್ತಾಗಿದೆ.

Sunny Leone responds to casting couch allegations stating I can only speak from my own experience

ಉಳಿದಂತೆ ಈ ಸೆಪ್ಟೆಂಬರ್ 27ರಂದು ಸನ್ನಿ ಲಿಯೋನ್ ಅಭಿನಯದ ಪೆಟ್ಟಾ ರಾಪ್ ಚಿತ್ರ ತೆರೆಗೆ ಬರಲಿದೆ. ಚಿತ್ರದಲ್ಲಿ ಸನ್ನಿ ಲಿಯೋನ್ ಜೊತೆ ಡ್ಯಾನ್ಸ್ ಕಿಂಗ್ ಪ್ರಭುದೇವಾ ಕೂಡ ಇರುವುದು ವಿಶೇಷ. ಎಸ್.ಜೆ.ಸಿನು ನಿರ್ದೇಶನದಲ್ಲಿ ಮೂಡಿ ಬಂದಿರುವ ಪೆಟ್ಟಾ ರಾಪ್ ಚಿತ್ರದಲ್ಲಿ ವೇದಿಕಾ, ರಿಯಾಜ್ ಖಾನ್, ಮೈಮ್ ಗೋಪಿ ಮತ್ತು ವಿವೇಕ್ ಪ್ರಸನ್ನ ಕೂಡ ಇದ್ದಾರೆ. ಜೋಬಿ ಸ್ಯಾಮ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಚಿತ್ರ ಎಲ್ಲ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುತ್ತೆ ಎನ್ನುವ ಭರವಸೆಯನ್ನು ಸನ್ನಿ ಲಿಯೋನ್ ವ್ಯಕ್ತಪಡಿಸಿದ್ದಾರೆ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X