For Quick Alerts
  ALLOW NOTIFICATIONS  
  For Daily Alerts

  ಸನ್ನಿ ಲಿಯೋನ್ ನೆಚ್ಚಿನ ಕ್ರಿಕೆಟರ್ ವಿರಾಟ್, ಸಚಿನ್ ಅಲ್ಲ: ಮತ್ಯಾರು?

  By Suneel
  |

  ಸದ್ಯದಲ್ಲಿ ದೇಶವನ್ನು ಆವರಿಸಿರುವುದು ಐಪಿಎಲ್ ಕ್ರಿಕೆಟ್ ಪಂದ್ಯ. ಐಪಿಲ್ ಪಂದ್ಯ ಸಂದರ್ಭದಲ್ಲಿ ಸಾಮಾನ್ಯವಾಗಿ ಯಾವ ಸೆಲೆಬ್ರಿಟಿಗಳು ಯಾವ ತಂಡಕ್ಕೆ ಸಪೋರ್ಟ್ ಮಾಡುತ್ತಾರೆ, ಯಾವ ಕ್ರಿಕೆಟರ್ ರನ್ನು ಇಷ್ಟಪಡುತ್ತಾರೆ ಎಂಬ ಹಲವರ ಕುತೂಹಲಕ್ಕೆ ಬ್ರೇಕ್ ಸಹ ಬೀಳುವ ಸಾಧ್ಯತೆಗಳು ಇರುತ್ತವೆ.

  ಅಂದಹಾಗೆ ಈಗ ಬ್ರೇಕ್ ಬಿದ್ದಿರುವುದು ಮಾಜಿ ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಗೆ ಯಾವ ಕ್ರಿಕೆಟರ್ ಕಂಡರೆ ಹೆಚ್ಚು ಇಷ್ಟ ಎಂಬ ಕ್ಯೂರಿಯಾಸಿಟಿಗೆ. ಹೌದು, ಇತ್ತೀಚೆಗೆ ತಾನೆ ಸನ್ನಿ ಲಿಯೋನ್ ಟ್ವಿಟರ್ ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ನೀಡುವ ಸಂದರ್ಭದಲ್ಲಿ ತಮ್ಮ ನೆಚ್ಚಿನ ಕ್ರಿಕೆಟರ್ ಯಾರು ಎಂದು ಬಾಯಿಬಿಟ್ಟಿದ್ದಾರೆ. ಆದರೆ ಅವರು ವಿರಾಟ್ ಕೊಹ್ಲಿ ಆಗಲಿ ಅಥವಾ ಸಚಿನ್ ತೆಂಡೂಲ್ಕರ್ ಹೆಸರನ್ನಾಗಲಿ ಹೇಳಿಲ್ಲ.

  ಹಾಗಿದ್ರೆ ಮಾದಕ ನಟಿ ಸನ್ನಿ ಲಿಯೋನ್ ಹೆಚ್ಚು ಇಷ್ಟಪಡುವ ಆ ಕ್ರಿಕೆಟ್ ದಿಗ್ಗಜ ಯಾರಿರಬಹುದು? ಇಲ್ಲಿದೆ ಮಾಹಿತಿ.

  ಸನ್ನಿ ಲಿಯೋನ್ ನೆಚ್ಚಿನ ಕ್ರಿಕೆಟರ್ ಯಾರು?

  ಸನ್ನಿ ಲಿಯೋನ್ ನೆಚ್ಚಿನ ಕ್ರಿಕೆಟರ್ ಯಾರು?

  ಬಾಲಿವುಡ್ ನಟಿ ಸನ್ನಿ ಲಿಯೋನ್ ಇಷ್ಟಪಡುವ ಕ್ರಿಕೆಟ್ ದಿಗ್ಗಜ ಬೇರು ಯಾರು ಅಲ್ಲದೇ ಭಾರತ ಕ್ರಿಕೆಟ್ ತಂಡದ ಕೂಲ್ ಕ್ಯಾಪ್ಟನ್ ಆಗಿದ್ದ ಮಹೇಂದ್ರ ಸಿಂಗ್ ಧೋನಿ ರವರು.

  ಸನ್ನಿ ಲಿಯೋನ್ ನೆಚ್ಚಿನ ಕ್ರಿಕೆಟ್ ತಂಡ

  ಸನ್ನಿ ಲಿಯೋನ್ ನೆಚ್ಚಿನ ಕ್ರಿಕೆಟ್ ತಂಡ

  ಟ್ವಿಟರ್ ನಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡುವ ಸಂದರ್ಭದಲ್ಲಿ ನಿಮ್ಮ ನೆಚ್ಚಿನ ಕ್ರಿಕೆಟ್ ಟೀಮ್ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿರುವ ಸನ್ನಿ ಭಾರತ ಕ್ರಿಕೆಟ್ ತಂಡ ಎಂದು ಹೇಳಿದ್ದಾರೆ.

  ಸನ್ನಿ ಅಭಿಮಾನಿಗಳಿಗೆ ಇದ್ದ ನಿರೀಕ್ಷೆ

  ಸನ್ನಿ ಅಭಿಮಾನಿಗಳಿಗೆ ಇದ್ದ ನಿರೀಕ್ಷೆ

  ಟ್ವಿಟರ್ ನಲ್ಲಿ ಸನ್ನಿ ಲಿಯೋನ್ ರವರನ್ನು ಫಾಲೋ ಮಾಡುತ್ತಿರುವ ಅಭಿಮಾನಿಗಳು ಅವರ ನೆಚ್ಚಿನ ಕ್ರಿಕೆಟರ್ ಆಗಿ ವಿರಾಟ್ ಕೊಹ್ಲಿ ಅವರನ್ನೋ ಅಥವಾ ಸಚಿನ್ ತೆಂಡೂಲ್ಕರ್ ರವರ ಹೆಸರನ್ನು ಹೇಳುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು.

  ಕ್ಯಾಪ್ಟನ್ ಶಿಪ್

  ಕ್ಯಾಪ್ಟನ್ ಶಿಪ್

  ಮಹೇಂದ್ರ ಸಿಂಗ್ ಧೋನಿ ಎಂದರೇ ಇಷ್ಟ ಪಡುವ ಸನ್ನಿ'ಗೆ ಸದ್ಯದಲ್ಲಿ ನಿರಾಸೆ ಉಂಟಾಗಿದೆ. ಕಾರಣ ಭಾರತ ಕ್ರಿಕೆಟ್ ತಂಡದ ಮಾಜಿ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಐಪಿಎಲ್ 10 ನೇ ಆವೃತ್ತಿಯಲ್ಲಿ ಕ್ಯಾಪ್ಟನ್ ಶಿಪ್ ವಹಿಸಕೊಂಡಿಲ್ಲದಿರುವುದು.

  ಪ್ರಶ್ನೆಗಳು ಮತ್ತು ಉತ್ತರಗಳು

  ಪ್ರಶ್ನೆಗಳು ಮತ್ತು ಉತ್ತರಗಳು

  ಬಹುಕಾಂತೀಯ ಹಾಟ್ ನಟಿ ಸನ್ನಿ ಲಿಯೋನ್ ಟ್ವಿಟರ್ ನಲ್ಲಿ ಅಭಿಮಾನಿಗಳು ಕೇಳಿದ ಇನ್ನೂ ಹಲವು ಪ್ರಶ್ನೆಗಳಿಗೆ ಲೈವ್ ಸೆಷನ್ ನಲ್ಲಿ ಉತ್ತರಿಸಿದ್ದಾರೆ.

  English summary
  Sunny Leone just revealed the name of her favourite cricketer and it's not Virat Kohli or Sachin Tendulkar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X