»   » ಸಿರಿವಂತ ನೀಲಿ ತಾರೆಗಳಲ್ಲಿ ಸನ್ನಿ ಲಿಯೋನ್

ಸಿರಿವಂತ ನೀಲಿ ತಾರೆಗಳಲ್ಲಿ ಸನ್ನಿ ಲಿಯೋನ್

By: ರವಿಕಿಶೋರ್
Subscribe to Filmibeat Kannada

ಬಾಲಿವುಡ್ ಸಿನಿಮಾಗಳಿಗೆ ಸೆಕ್ಸಿ ಸ್ಪರ್ಶ ನೀಡಿರುವ ತಾರೆ ಸನ್ನಿ ಲಿಯೋನ್. ಸೌಂದರ್ಯದಲ್ಲಿ ಸಿರಿವಂತೆಯಾಗಿರುವ ಸನ್ನಿ ಈಗ ಶ್ರೀಮಂತ ತಾರೆಗಳ ಪೈಕಿ ಒಬ್ಬರು. ನೀಲಿ ಚಿತ್ರಗಳಲ್ಲಿ ಅಭಿನಯಿಸಿ ಅನುಭವ ಸಂಪಾದಿಸಿಕೊಂಡ ತಾರೆ ಸನ್ನಿ ಲಿಯೋನ್ ಈಗ ಬಾಲಿವುಡ್ ಚಿತ್ರರಂಗದಲ್ಲಿ ಠಿಕಾಣಿ ಹೂಡಿರುವುದು ಗೊತ್ತೇ ಇದೆ.

ಕೆನಡಾ ಮೂಲದ ಈ ತಾರೆ ವಿಶ್ವದ ಶ್ರೀಮಂತ ನೀಲಿ ಚಿತ್ರಗಳ ತಾರೆಯರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಒಟ್ಟು ಇಪ್ಪತ್ತು ಮಂದಿ ತಾರೆಗಳಲ್ಲಿ ಸನ್ನಿಗೆ ಸಿಕ್ಕಿರುವುದು 19ನೇ ಸ್ಥಾನ. ಮೊದಲ ಸ್ಥಾನದಲ್ಲಿ ಜೆನ್ನಾ ಜೇಮ್ಸನ್ ಇದ್ದಾರೆ. ಈಕೆಯ ಆಸ್ತಿ ರು.165 ಕೋಟಿ.


ನೀಲಿ ಚಿತ್ರಗಳಲ್ಲಿ ಬೇಜಾನ್ ಅನುಭವ ಇದ್ದರೂ ಬಾಲಿವುಡ್ ಚಿತ್ರಗಳ ಗ್ರಾಮರನ್ನು ಈಗಿಗಷ್ಟೇ ಕಲಿಯುತ್ತಿದ್ದಾರೆ. ಹಾಗಾಗಿ ಆಕೆಯ ಸಂಭಾವನೆ ಇತರೆ ಬಾಲಿವುಡ್ ತಾರೆಗಳಿಗೆ ಹೋಲಿಸಿದರೆ ಕಡಿಮೆ ಎಂದೇ ಹೇಳಬೇಕು. ಮುಂಬರುವ ದಿನಗಳಲ್ಲಿ ನಂಬರ್ ಒನ್ ಪಟ್ಟಕ್ಕೆ ಬಂದರು ಅಚ್ಚರಿಯಿಲ್ಲ.

ವಿಶ್ವದ ಶ್ರೀಮಂತ ನೀಲಿ ಚಿತ್ರ ತಾರೆಗಳ ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿರುವ ಸನ್ನಿಯ ಆಸ್ತಿ ರು.8 ಕೋಟಿ ಅಷ್ಟೆ. ಅಂದಹಾಗೆ ಈ ಪಟ್ಟಿಯಲ್ಲಿ ಐದು ಮಂದಿ ಪುರುಷರು ಇದ್ದಾರೆ. ಅವರ ವಿಚಾರ ಇಲ್ಲಿ ಅಗತ್ಯವಿಲ್ಲ ಬಿಡಿ. ಅಂದಹಾಗೆ ಈ ಸಮೀಕ್ಷೆಯನ್ನು ನಡೆಸಿದ್ದು ಸೆಲೆಬ್ರಿಟಿ ನೆಟ್ ವರ್ತ್ ಡಾಟ್ ಕಾಂ.

ಇತ್ತೀಚೆಗಷ್ಟೇ ಸನ್ನಿ ಎನರ್ಜಿ ಡ್ರಿಂಕ್ ಜಾಹೀರಾತಿಗಾಗಿ ರು.1.5 ಕೋಟಿ ಸಂಭಾವನೆ ಪಡೆದಿದ್ದಾರೆ. ಈ ಎನರ್ಜಿ ಡ್ರಿಂಕ್ ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೋ ಅಥವಾ ಲೈಂಗಿಕ ಸಾಮರ್ಥ್ಯವನ್ನು ವೃದ್ಧಿಸುತ್ತದೋ ಗೊತ್ತಿಲ್ಲ. ಅದರ ಕಂಪನಿಯ ಮಾಲೀಕ ಸಚಿನ್ ಜೋಷಿ ಕೂಡ ಒಬ್ಬ ನಟ ಎಂಬುದು ವಿಶೇಷ.

English summary
Bollywood actress Sunny to become one of the most famous x-rated stars in the world with a net worth of $1.5 million. Sunny is extremely popular in India, despite their conservatives traditions.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada