ಅಮೆರಿಕದಲ್ಲಿರುವ ಸನ್ನಿ ಲಿಯೋನ್‌ಳ ಅರಮನೆಯಂತಹ ಮನೆಯ ನೋಡಿ

ನೀಲಿ ಚಿತ್ರಗಳಿಂದ ಬಹುಖ್ಯಾತಿ ಗಳಿಸಿರುವ ಮಾದಕ ನಟಿ ಸನ್ನಿ ಲಿಯೋನಿ ಪ್ರಸ್ತುತ ಭಾರತ ಬಿಟ್ಟು ಅಮೆರಿಕಕ್ಕೆ ಹೋಗಿದ್ದಾರೆ. ಕೊರೊನಾ ಸಂದರ್ಭದಲ್ಲಿ ಅಮೆರಿಕದ ತನ್ನ ಮನೆಯೇ ಅವರಿಗೆ ಹೆಚ್ಚು ಸುರಕ್ಷಿತವೆನಿಸಿತಂತೆ.

Recommended Video

ಅಂದು ವೇಶ್ಯೆ ಯಾಗಿದ್ದವಳು ಇಂದು ಬಾಲಿವುಡ್ ನಲ್ಲಿ ಸೂಪರ್ ಸ್ಟಾರ್..? | Shagufta Rafique

ಮುಂಬೈನಲ್ಲಿ ನೆಲೆಸಿದ್ದ ಸನ್ನಿ ಲಿಯೋನ್, ಕೆಲವೇ ದಿನಗಳ ಹಿಂದೆ ಕುಟುಂಬ ಸಮೇತವಾಗಿ ಅಮೆರಿಕದ ಕ್ಯಾಲಿಪೋರ್ನಿಯಾಕ್ಕೆ ತೆರಳಿದ್ದಾರೆ. ಅಲ್ಲಿ ಸುಂದರವಾದ ಮನೆಯನ್ನು ಸನ್ನಿ ಹೊಂದಿದ್ದಾರೆ.

ಸನ್ನಿ ಲಿಯೋನ್ ಬಾಲಿವುಡ್ ಗೆ ಪ್ರವೇಶ ಮಾಡುವ ಮುನ್ನಾ ಕೆನಡಾದಲ್ಲಿದ್ದರು. ಅಲ್ಲಿಯೇ ಅವರು ನೀಲಿ ಚಿತ್ರಗಳಲ್ಲಿ ಸಾಕಷ್ಟು ಹೆಸರು ಮತ್ತು ಹಣ ಗಳಿಸಿದ್ದರು. ಬಾಲಿವುಡ್‌ಗೆ ಪ್ರವೇಶವಾದ ಬಳಿಕ ಅವರು ಬಹುತೇಕ ಸಮಯ ಭಾರತದಲ್ಲಿಯೇ ಇದ್ದರು. ಇದೀಗ ಮತ್ತೆ ಅಮೆರಿಕಕ್ಕೆ ತೆರಳಿದ್ದಾರೆ.

ಮನೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ

ಮನೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ

ಅಮೆರಿಕಕ್ಕೆ ತೆರಳಿರುವ ಸನ್ನಿ ಲಿಯೋನ್ ಅಲ್ಲಿನ ತಮ್ಮ ಮನೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಒಂದು ಎಕರೆ ವಿಶಾಲವಾದ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ಮನೆ ಸುಂದರವಾಗಿದೆ.

ಕಾಡಿನ ಮಧ್ಯೆ ಮನೆ ಇರುವಂತಿದೆ

ಕಾಡಿನ ಮಧ್ಯೆ ಮನೆ ಇರುವಂತಿದೆ

ಕಾಡೊಂದರ ಮಧ್ಯೆ ಇರುವಂತೆ ಭಾಸವಾಗುವ ಮನೆಯ ಹೊರಾಂಗಣದಲ್ಲಿ ಸಾಕಷ್ಟು ಜಾಗವಿದ್ದು, ಎಲ್ಲೆಲ್ಲೂ ಹಚ್ಚ ಹಸಿರೇ ಕಣ್ಣಿಗೆ ಬೀಳುತ್ತದೆ. ಬಾಲ್ಕನಿ ರೀತಿಯ ರಚನೆಯೊಂದು ಮನೆಗೆ ಇದ್ದು ಅಲ್ಲಿಂದ ಕಣ್ಣು ಹಾಯಿಸಿದರೆ ಬರೀಯ ಹಸಿರೇ ಕಾಣುತ್ತದೆ.

ಎತ್ತರದ ಪ್ರದೇಶದಲ್ಲಿ ಮನೆಕಟ್ಟಿಕೊಂಡಿದ್ದಾರೆ

ಎತ್ತರದ ಪ್ರದೇಶದಲ್ಲಿ ಮನೆಕಟ್ಟಿಕೊಂಡಿದ್ದಾರೆ

ಸನ್ನಿ ಮನೆ ಎತ್ತರದ ಪ್ರದೇಶದಲ್ಲಿದ್ದು, ಮನೆಯ ಮುಂದೆ ನಿಂತರೆ ವಿಶಾಲವಾದ ಹಚ್ಚ ಹಸಿರ ನೋಟ ಕಣ್ಣಿಗೆ ಬೀಳುತ್ತದೆ. ವಿವಿಧ ರೀತಿಯ ಗಿಡ-ಬಳ್ಳಿಗಳನ್ನು ಸನ್ನಿ ಲಿಯೋನ್ ಬೆಳೆಸಿದ್ದಾರೆ. ಮನೆಗೂ ಬಳ್ಳಿಗಳನ್ನು ಹಬ್ಬಿಸಿ ಬ್ರಿಟಿಶ್ ಲುಕ್ ನೀಡಲಾಗಿದೆ.

ಮನೆಯ ಹೊರಗೆ ಸೋಫಾ, ಬೆಡ್ಡು

ಮನೆಯ ಹೊರಗೆ ಸೋಫಾ, ಬೆಡ್ಡು

ಮನೆಯ ಹೊರಗೆ ಬೆಡ್‌, ಸೋಫಾ, ಬಾರ್ಬಿಕ್ಯೂ ಸೆಟ್‌ ಅಪ್‌ಗಳನ್ನು ಹಾಕಿದ್ದಾರೆ. ಈಜುಕೊಳ, ಜಿಮ್ ಎಲ್ಲವೂ ಇದ್ದೇ ಇದೆ. ಒಂದು ರೀತಿಯ ಬ್ರಿಟಿಶ್ ಬಂಗ್ಲೆಯಂತೆ ಸನ್ನಿ ಲಿಯೋನ್ ಮನೆ ಕಾಣುತ್ತದೆ.

ಒಳಾಂಗಣ ಸುಂದರವಾಗಿದೆ

ಮನೆಯ ಒಳಾಂಗಣದ ಕೆಲವು ವಿಡಿಯೋಗಳನ್ನು ಸನ್ನಿ ಲಿಯೋನ್ ಹಂಚಿಕೊಂಡಿದ್ದು, ಗಣೇಶ, ಬುದ್ಧನ ವಿಗ್ರಹಗಳು ಕಣ್ಣಿಗೆ ಬೀಳುತ್ತವೆ. ವಿಶಾಲವಾದ ಒಳಾಂಗಣ ಇದ್ದು, ಇಂಟೀರಿಯರ್ ಡೆಕೋರೇಶನ್ ಕಣ್ಣು ಕೊರೆಯುತ್ತದೆ. ಬಿಳಿ ಮತ್ತು ಕಪ್ಪು ಬಣ್ಣದ ವಸ್ತುಗಳೇ ಹೆಚ್ಚಾಗಿವೆ.

More from Filmibeat

English summary
Bollywood actress Sunny Leone posted some photos and videos of her house in California.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X