For Quick Alerts
  ALLOW NOTIFICATIONS  
  For Daily Alerts

  ಸನ್ನಿ ಕಾಂಡೋಮ್ ಜಾಹೀರಾತಲ್ಲಿ ಕಾಣಿಸಿಕೊಂಡ್ರೆ ರೇಪ್ ಹೆಚ್ಚತ್ತಾ?

  By ಸೋನು ಗೌಡ
  |

  ಇತ್ತೀಚೆಗೆ ಭಾರತದಲ್ಲಿ ನಡೆಯುತ್ತಿರುವ ರೇಪ್ ಕೇಸ್ ಗಳು ಹೆಚ್ಚಾಗಲು ಜಾಹೀರಾತುಗಳು ಅರ್ಧ ಕಾರಣ ಅಂತ ಸಿಪಿಐ ಹಿರಿಯ ನಾಯಕ ಅತುಲ್ ಅಂಜನ್ ಗುಡುಗಿದ್ದಾರೆ. ಅದರಲ್ಲೂ ಇತ್ತೀಚೆಗೆ ಕಾಂಡೋಮ್ ಗಳಿಗೆ ಸಂಬಂಧಪಟ್ಟಂತೆ ಮಾಧ್ಯಮಗಳು ಬಿತ್ತರಿಸುತ್ತಿರುವ ಜಾಹೀರಾತಿನಿಂದ ಇಂತಹ ಘಟನೆಗಳು ದೇಶದಲ್ಲಿ ಹೆಚ್ಚಾಗುತ್ತಿದೆ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ರಾಜಕೀಯ ನಾಯಕರು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುವುದು ಸದ್ಯಕ್ಕೆ ಮಾಮೂಲಿ ವಿಷಯ. ಇದೀಗ ಅದೇ ಸಾಲಿಗೆ ಸೇರ್ಪಡೆಗೊಂಡಿರುವವರು ಎಡಪಕ್ಷದ ನಾಯಕ ಅತುಲ್ ಕುಮಾರ್.

  ಬಾಲಿವುಡ್ ನ ಮಾದಕ ನಟಿ ಸನ್ನಿ ಲಿಯೋನ್ ಳ ಕಾಂಡೋಮ್ ಜಾಹೀರಾತಿನಿಂದ ಭಾರತದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲಿದೆ ಎಂದು ಅತುಲ್ ಹೇಳಿಕೆ ನೀಡಿದ್ದು, ಇದೀಗ ಎಲ್ಲೆಡೆ ಸುದ್ದಿಯಾಗುತ್ತಿದೆ.[ಅಂತೂ ಶಾರುಖ್, ಸಲ್ಮಾನ್, ಸನ್ನಿ ಲಿಯೋನ್ ''ಕನ್ನಡ''ಕ್ಕೆ ಬಂದ್ರು.!]

  ಮಾದಕ ತಾರೆ ಸನ್ನಿ ಲಿಯೋನ್ ಕಾಣಿಸಿಕೊಂಡಿರುವ ಕಾಂಡೋಮ್ ಜಾಹೀರಾತು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದರೆ ಜನರು ತಪ್ಪು ದಾರಿಗಿಳಿಯುತ್ತಾರೆ, ಜೊತೆಗೆ ಈ ಜಾಹೀರಾತು ಅತ್ಯಾಚಾರ ಪ್ರಕರಣಗಳಿಗೆ ಎಡೆ ಮಾಡಿಕೊಡುತ್ತದೆ ಎಂದು ಅತುಲ್ ಕುಮಾರ್ ಹೇಳಿದ್ದಾರೆ. ಅವರ ಹೇಳಿಕೆ ನೋಡಲು ಈ ವಿಡಿಯೋ ನೋಡಿ..

  ಇನ್ನು ಸನ್ನಿ ಲಿಯೋನ್ ವಿರುದ್ಧ ಗುಡುಗಿರುವುದು ಇವರು ಮಾತ್ರ ಅಲ್ಲ ಬದಲಾಗಿ ಈ ಮೊದಲು ಶ್ರೀ ರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಅವರು ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಅವರನ್ನು ಭಾರತದಿಂದ ಗಡಿಪಾರು ಮಾಡಬೇಕು ಎಂದು ಹೇಳಿಕೆ ನೀಡಿದ್ದರು.

  ಸನ್ನಿ ಲಿಯೋನ್ ಮಾತ್ರವಲ್ಲದೇ ಇನ್ನು ಕಾಂಡೋಮ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡ ಕೆಲವು ಬಾಲಿವುಡ್ ತಾರೆಯರನ್ನು ನೋಡಲು ಈ ಕೆಳಗಿನ ಸ್ಲೈಡ್ ಕ್ಲಿಕ್ ಮಾಡಿ..

  ಮಾದಕ ತಾರೆ ಸನ್ನಿ ಲಿಯೋನ್

  ಮಾದಕ ತಾರೆ ಸನ್ನಿ ಲಿಯೋನ್

  ಪೋರ್ನ್ ಸ್ಟಾರ್ ಹಾಗು ಬಾಲಿವುಡ್ ನ ಮಾದಕ ಬೆಡಗಿ ಸನ್ನಿ ಲಿಯೋನ್ ಹೊಸದಾಗಿ ಕಾಣಿಸಿಕೊಂಡಿರುವ ಕಾಂಡೋಮ್ ಜಾಹೀರಾತಿನಲ್ಲಿ ಸನ್ನಿ ಅವರ ಮಾದಕ ನೋಟದಿಂದ ಕೂಡಿರುವ ಪೋಸ್ ನೀಡಿದ್ದಾರೆ. ಈ ಜಾಹೀರಾತು ಥೈಲ್ಯಾಂಡ್ ನಲ್ಲಿ ಶೂಟಿಂಗ್ ನಡೆದಿದೆ.

  ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್

  ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್

  ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅವರು ಡ್ಯುರೆಕ್ಸ್ ಕಾಂಡೋಮ್ ಬ್ರಾಂಡ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.

  ಬಾಲಿವುಡ್ ತಾರೆ ಪೂಜಾ ಬೇಡಿ

  ಬಾಲಿವುಡ್ ತಾರೆ ಪೂಜಾ ಬೇಡಿ

  ಬಾಲಿವುಡ್ ತಾರೆ ಪೂಜಾ ಬೇಡಿ ಅವರು 1990 ರಲ್ಲಿ ಕಾಮಸೂತ್ರ ಎಂಬ ವಿವಾದಾತ್ಮಕ ಕಾಂಡೋಮ್ ಜಾಹೀರಾತಿನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಸಖತ್ ಹಾಟ್ ಲುಕ್ ನಲ್ಲಿ ಮಾರ್ಕ್ ರಾಬಿನ್ ಸನ್ ಜೊತೆ ಮಿಂಚಿದ್ದರು.

  ವಿವಾದಾತ್ಮಕ ನಟಿ ಪೂನಂ ಪಾಂಡೆ

  ವಿವಾದಾತ್ಮಕ ನಟಿ ಪೂನಂ ಪಾಂಡೆ

  ಮಾಡೆಲ್ ಕಮ್ ನಟಿ ಪೂನಂ ಪಾಂಡೆ ಬಿಕಿನಿ, ವಿಭಿನ್ನ ಯೋಗ ಜೊತೆಗೆ ಡಿಫರೆಂಡ್ ಫೊಟೋ ಶೂಟ್ ಗಳ ಮೂಲಕ ಯಾವಾಗಲೂ ಭಾರಿ ಸುದ್ದಿ ಮಾಡುವ ನಟಿ. ಅಂದಹಾಗೆ ಈ ನಟಿ ಕೂಡ ಕಾಂಡೋಮ್ ಒಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.

  ನಟಿ ಸಮೀರಾ ರೆಡ್ಡಿ

  ನಟಿ ಸಮೀರಾ ರೆಡ್ಡಿ

  ಬಾಲಿವುಡ್ ಕ್ಷೇತ್ರದಲ್ಲಿ ಅಂತಹ ಹೇಳಿಕೊಳ್ಳುವಂತೆ ಏನೂ ಯಶಸ್ಸು ಗಳಿಸದ ನಟಿ ಸಮೀರಾ ರೆಡ್ಡಿ ಅವರು ನಟ ಶೈನಿ ಅಹುಜ ಜೊತೆ ಕಾಂಡೋಮ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.

  ಬಾಲಿವುಡ್ ನಟ ಅರ್ಜುನ್ ರಾಂಪಾಲ್

  ಬಾಲಿವುಡ್ ನಟ ಅರ್ಜುನ್ ರಾಂಪಾಲ್

  ಬಾಲಿವುಡ್ ಸ್ಟಾರ್ ಅರ್ಜುನ್ ರಾಂಪಾಲ್ ಅವರು ಕಾಂಡೋಮ್ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಬರೋಬ್ಬರಿ 6 ಕೋಟಿ ರೂಪಾಯಿ ಡಿಮಾಂಡ್ ಮಾಡಿದ್ದರಂತೆ.

   ಮಾಡೆಲ್ ಶೆರ್ಲಿನ್ ಚೋಪ್ರಾ

  ಮಾಡೆಲ್ ಶೆರ್ಲಿನ್ ಚೋಪ್ರಾ

  ಮಾಡೆಲ್ ಶೆರ್ಲಿನ್ ಚೋಪ್ರಾ ಅವರು ಕಾಂಡೋಮ್ ಜಾಹೀರಾತಿಗಾಗಿಯೇ ಫೇಮಸ್ ಯಾಕೆಂದರೆ ಈ ನಟಿ ಚಿತ್ರರಂಗದಲ್ಲಿ ನಟನೆಯ ಬದಲಾಗಿ ಹಾಟ್ ಬಿಕಿನಿ ಫೊಟೋಗಳ ಮೂಲಕವೇ ಹೆಚ್ಚು ಸುದ್ದಿಯಾಗಿದ್ದರು.

  ನಟ ಇಮ್ರಾನ್ ಹಶ್ಮಿ

  ನಟ ಇಮ್ರಾನ್ ಹಶ್ಮಿ

  ಬಾಲಿವುಡ್ ಕ್ಷೇತ್ರದಲ್ಲಿ ಕಿಸ್ಸರ್ ಬಾಯ್ ಅಂತಾನೇ ಪೇಮಸ್ ಆಗಿರೋ ಇಮ್ರಾನ್ ಹಶ್ಮಿ ಅವರು ಕೂಡ ಒಂದು ಬಾರಿ ಕಾಂಡೋಮ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.

  ಬಾಲಿವುಡ್ ನಟ ಹೃತಿಕ್ ರೋಷನ್

  ಬಾಲಿವುಡ್ ನಟ ಹೃತಿಕ್ ರೋಷನ್

  ಸಖತ್ ಹ್ಯಾಂಡ್ಸಮ್ ಆಗಿರೋ ನಟ ಹೃತಿಕ್ ರೋಷನ್ ಅವರು ಕೂಡ ಕಾಂಡೋಮ್ ಗೆ ಸಂಬಂಧಪಟ್ಟ ಜಾಹೀರಾತು ಒಂದರಲ್ಲಿ ಕಾಣಿಸಿಕೊಂಡಿದ್ದರು. ಮಾತ್ರವಲ್ಲದೇ ಇವರ ಆಕರ್ಷಿಸುವ ದೇಹಸಿರಿ ಇವರ ಪ್ಲಸ್ ಪಾಯಿಂಟ್

  English summary
  Sunny Leone's past just doesn't seem to leave her. While the actress has forgotten about her adult film star career and is flourishing in her Bollywood career, people around just don't seem to be letting her do that. when such great things are happening in her professional life, a CPI leader, Atul Anjan makes a statement that it is her condom ads that have caused an increase in the number of rapes in the country.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X