For Quick Alerts
  ALLOW NOTIFICATIONS  
  For Daily Alerts

  ವಿಡಿಯೋ ವೈರಲ್: ಸನ್ನಿ ಲಿಯೋನ್‌ಗೆ ಬಟ್ಟೆ ತೊಡಿಸಲು ಕಷ್ಟಪಡುತ್ತಿರುವ ತಂಡ

  |

  ಬಹುಭಾಷಾ ನಟಿ ಸನ್ನಿ ಲಿಯೋನ್ ಒಂದಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಅಪರೂಪಕ್ಕೊಂದು ಸಿನಿಮಾಗಳಲ್ಲಿ ನಟಿಸುವ ಸನ್ನಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಆಗಾಗ ಫೋಟೋ ಅಥವಾ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ.

  ಇತ್ತೀಚಿಗೆ ಸನ್ನಿ ಶೇರ್ ಮಾಡಿರುವ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ. ಬಟ್ಟೆ ತೊಡಿಸಲು ಕಷ್ಟಪಡುತ್ತಿರುವ ತನ್ನ ಡಿಸೈನರ್ಸ್ ತಂಡದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸನ್ನಿಲಿಯೋನ್ ತಂಡ ಬಟ್ಟೆಯ ಹಿಂಬದಿಯ ಜಿಪ್ ಹಾಕಲು ಹೆಣಗಾಡುತ್ತಿದ್ದಾರೆ. ಮೂರ್ನಾಲ್ಕು ಜನ ಕಷ್ಟಪಡುತ್ತಿದ್ದಾರೆ. ಈ ವಿಡಿಯೋವನ್ನು ಮಾದಕ ನಟಿ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಮುಂದೆ ಓದಿ..

  ಮಾದಕ ನಟಿ ಸನ್ನಿ ಲಿಯೋನ್ ಮತ್ತು ಇಮ್ರಾನ್ ಹಶ್ಮಿಗೆ ಇದ್ದಾನಾ 20 ವರ್ಷದ ಮಗ?ಮಾದಕ ನಟಿ ಸನ್ನಿ ಲಿಯೋನ್ ಮತ್ತು ಇಮ್ರಾನ್ ಹಶ್ಮಿಗೆ ಇದ್ದಾನಾ 20 ವರ್ಷದ ಮಗ?

  ಸನ್ನಿ ಲಿಯೋನ್ ತೆರೆಮರೆಯ ವಿಡಿಯೋ ವೈರಲ್

  ಸನ್ನಿ ಲಿಯೋನ್ ತೆರೆಮರೆಯ ವಿಡಿಯೋ ವೈರಲ್

  ನಟಿಮಣಿಯರು ತುಂಬಾ ಸುಂದರವಾಗಿ ಕಾಣಿಸುವುದರ ಹಿಂದೆ ಸಾಕಷ್ಟು ಮಂದಿಯ ಶ್ರಮವಿರುತ್ತೆ. ಮೇಕಪ್, ಕಾಸ್ಟ್ಯೂಮ್, ಹೇರ್ ಸ್ಟೈಲ್ ಹೀಗೆ ಪ್ರತಿಯೊಂದು ವಿಚಾರದಲ್ಲೂ ಅನೇಕರು ಕಷ್ಟಪಟ್ಟಿರುತ್ತಾರೆ. ರ್ಯಾಂಪ್ ವಾಕ್, ಟಿವಿ ಕಾರ್ಯಕ್ರಮ, ಸಿನಿಮಾ ಪ್ರಮೋಷನ್ ಹೀಗೆ ಪ್ರತಿಯೊಂದು ಕಾರ್ಯಕ್ರಮದಲ್ಲೂ ಹೇಗೆ ಕಾಣಿಸಬೇಕು, ಯಾವ ರೀತಿ ತಯಾರಿ ನಡೆಸಬೇಕೆಂದು ಅವರ ತಂಡ ನಿರ್ಧರಿಸಿ ಕೆಲಸ ಮಾಡುತ್ತೆ.

  ಬಟ್ಟೆ ತೊಡಿಸಲು ಕಷ್ಟಪಡುತ್ತಿರುವ ಸನ್ನಿ ಸೈನ್ಯ

  ಬಟ್ಟೆ ತೊಡಿಸಲು ಕಷ್ಟಪಡುತ್ತಿರುವ ಸನ್ನಿ ಸೈನ್ಯ

  ತೆರೆ ಹಿಂದೆ ಸಾಕಷ್ಟು ಮಂದಿ ಕೆಲಸ ಮಾಡುತ್ತಿರುತ್ತಾರೆ. ಸನ್ನಿ ಶೇರ್ ಮಾಡಿರುವ ತೆರೆ ಹಿಂದಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗದೆ. ಸನ್ನಿ ಎಂಟಿಬಿ Splitsvilla ಶೋ ನಡೆಸಿಕೊಡುತ್ತಿದ್ದರು. ಈ ಕಾರ್ಯಕ್ರಮಕ್ಕೆ ತಯಾರಿ ನಡೆಸುತ್ತಿರುವ ವಿಡಿಯೋ ಇದಾಗಿದೆ. ಸನ್ನಿ ಲಿಯೋನ್ ಗೆ ಹಳದಿ ಬಣ್ಣದ ಗೌನ್ ತೊಡಿಸಲು ಅವರ ತಂಡ ಎಷ್ಟು ಕಷ್ಟಪಟ್ಟಿದೆ ಎಂದು ವಿಡಿಯೋ ಮೂಲಕ ವಿವರಿಸಿದ್ದಾರೆ. ತನ್ನ ತಂಡವನ್ನು ಸನ್ನಿ ಆರ್ಮಿ ಎಂದು ಕರೆದಿದ್ದಾರೆ.

  ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿದ್ದ ಅಭಿಮಾನಿಗಳು

  ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿದ್ದ ಅಭಿಮಾನಿಗಳು

  ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿರುವ ಸನ್ನಿ ಲಿಯೋನ್‌ಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು. ವಿಶ್ವದಾದ್ಯಂತ ಅಭಿಮಾನಿ ಬಳಗ ಹೊಂದಿರುವ ಸನ್ನಿಗೆ ಕರ್ನಾಟಕದ ಹಳ್ಳಿಯೊಂದರಲ್ಲಿ ಬ್ಯಾನರ್ ಹಾಕಿ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಲಾಗಿತ್ತು. ಅಭಿಮಾನಿಗಳ ಪ್ರೀತಿಗೆ ಫಿದಾ ಆಗಿದ್ದ ಸನ್ನಿ ಫೋಟೋವನ್ನು ಶೇರ್ ಮಾಡಿ ಧನ್ಯವಾದ ತಿಳಿಸಿದ್ದರು.

  ರಿಯಲ್ ಸ್ಟಾರ್ ಉಪೇಂದ್ರ ಮಾಡ್ತಿರೋ ಸೇವೆ ಒಂದಾ ಎರಡಾ?? | Filmibeat Kannada

  ಸನ್ನಿ ಸಿನಿಮಾಗಳು

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಹಿಂದಿ ಸೇರಿದಂತೆ ದಕ್ಷಿಣ ಭಾರತದ ಅನೇಕ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಕನ್ನಡದ ಕೋಟಿಗೊಬ್ಬ-3 ಚಿತ್ರದಲ್ಲಿ ಸನ್ನಿ ಲಿಯೋನ್ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಸಿನಿಮಾ ಜೊತೆಗೆ ವೆಬ್ ಸೀರಿಸ್ ನಲ್ಲೂ ಕಾಣಿಸಿಕೊಂಡಿದ್ದಾರೆ. ಜೊತೆಗೆ ಟಿವಿ ರಿಯಾಲಿಟಿ ಶೋಗಳನ್ನು ನಡೆಸಿಕೊಡುತ್ತಿದ್ದಾರೆ.

  English summary
  Actress Sunny Leone's team struggle to zip her dress up. She shares behind the scences video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X