ಸನ್ನಿ ಲಿಯೋನ್ ಜೀವನಕ್ಕೆ ಎಂಟ್ರಿ ಕೊಟ್ಟ ಹೊಸ ವ್ಯಕ್ತಿ ಯಾರು.?
ಬಾಲಿವುಡ್ ನಟಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಅವರ ಜೀವನ ತೆರೆಮೇಲೆ ಬರ್ತಿದೆ. ಈಗಾಗಲೇ ಚಿತ್ರದ ಪೋಸ್ಟರ್ ನಿಂದ ಸಿನಿಮಾ ಗಮನ ಸೆಳೆಯುತ್ತಿದೆ. ಇದೀಗ, ಚಿತ್ರದ ಬಗ್ಗೆ ಹೊಸ ವಿಷ್ಯವೊಂದನ್ನ ಸನ್ನಿ ಹಂಚಿಕೊಂಡಿದ್ದಾರೆ.
'ಕರ್ಣಿಜಿತ್ ಕೌರ್' ಚಿತ್ರದಲ್ಲಿ ಸನ್ನಿ ಲಿಯೋನ್ ಅವರ ಪತಿ ಪಾತ್ರದಲ್ಲಿ ಅಭಿನಯಿಸಲಿರುವ ನಟನನ್ನ ಪರಿಚಯ ಮಾಡಿದ್ದಾರೆ. ಸನ್ನಿ ನಿಜ ಜೀವನದ ಪತಿ ಡೆನಿಯಲ್ ಪಾತ್ರದಲ್ಲಿ ಆಫ್ರಿಕನ್ ನಟ ಮಾರ್ಕ್ ಬಕ್ನರ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನ ಸನ್ನಿ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.
ಅಂದ್ಹಾಗೆ, 'ಕರ್ಣಿಜಿತ್ ಕೌರ್' ವೆಬ್ ಸೀರಿಸ್ ಆಗಿರುವುದರಿಂದ ಆನ್ ಲೈನ್ ನಲ್ಲಿ ಮಾತ್ರ ಲಭ್ಯವಾಗಲಿದೆ. ಈ ಚಿತ್ರದಲ್ಲಿ ಸನ್ನಿಯ ಬಗ್ಗೆ ಗೊತ್ತಿಲ್ಲದ ಸಂಗತಿಗಳು ನೋಡುವ ಅವಕಾಶ ಸಿಗಲಿದೆ.

ನೀಲಿ ಚಿತ್ರಗಳ ಮೂಲಕವೇ ಸ್ಟಾರ್ ಆದ ಸನ್ನಿ ಲಿಯೋನ್ ಆ ಇಂಡಸ್ಟ್ರಿಗೆ ಕಾಲಿಟ್ಟಿದ್ದು ಹೇಗೆ? ಅಪ್ರಾಪ್ತ ವಯಸ್ಸಿನಲ್ಲೇ ಪೋರ್ನ್ ಸ್ಟಾರ್ ಪಟ್ಟಕ್ಕೇರಿದ್ದು ಹೇಗೆ? ಅದಕ್ಕೂ ಮೊದಲು ಅವರೇನು ಮಾಡುತ್ತಿದ್ದರು? ನಂತರ ಬಾಲಿವುಡ್ ಗೆ ಹೇಗೆ ಬಂದರು, ಹೀಗೆ ಅನೇಕ ಪ್ರಶ್ನೆಗಳಿಗೆ ಈ ಸಿನಿಮಾ ಉತ್ತರ ನೀಡಲಿದೆ.
ಸನ್ನಿ ಜೀವನ ಕಥೆಯನ್ನ ಜುಲೈ 16 ರಂದು ನೋಡಬಹುದು ಎಂದು ಸ್ವತಃ ಸನ್ನಿ ಲಿಯೋನ್ ಟ್ವೀಟ್ ಮಾಡಿದ್ದಾರೆ. ಇನ್ನು ಈ ಚಿತ್ರವನ್ನ ಆದಿತ್ಯ ದತ್ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











