ಹೊಟ್ಟೆಯಲ್ಲಿ ಮಗು ಹೊರಲು ಇಷ್ಟವಿರಲಿಲ್ಲ, ಬಾಡಿಗೆ ತಾಯಿಗೆ ಬಹಳ ಹಣ ಕೊಟ್ಟೆ; ಸನ್ನಿ ಲಿಯೋನ್

ಮಾಜಿ ನೀಲಿತಾರೆ ಸನ್ನಿ ಲಿಯೋನ್ ಬಾಲಿವುಡ್ ಅಂಗಳದಲ್ಲಿ ಮಿಂಚಿದ್ದು ಗೊತ್ತೇಯಿದೆ. ಸದ್ಯ ಆಕೆಯ ಕ್ರೇಜ್ ಕಮ್ಮಿ ಆಗಿದೆ. ಡೇನಿಯಲ್ ವೆಬರ್ ಕೈ ಹಿಡಿದ ಸನ್ನಿ ಒಂದು ಮಗುವನ್ನು ದತ್ತು ಪಡೆದಿದ್ದಾರೆ. ಸಾರೋಗಸಿ ಪದ್ಧತಿ ಮೂಲಕ ದಂಪತಿ ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ. ಮಗುವನ್ನು ದತ್ತು ಪಡೆದಿದ್ದು ಸಾರೋಗಸಿಗೆ ಮುಂದಾಗಿದ್ದು ಯಾಕೆ ಎಂದು ಸಂದರ್ಶನವೊಂದರಲ್ಲಿ ಆಕೆ ಹೇಳಿಕೊಂಡಿದ್ದಾರೆ.

ನಟಿ ಸೋಹಾ ಅಲಿಖಾನ್ ಪಾಡ್‌ಕಾಸ್ಟ್‌ನಲ್ಲಿ ನಟಿ ಸನ್ನಿ ಲಿಯೋನ್ ಭಾಗಿ ಆಗಿದ್ದಾರೆ. ಆ ಕಾರ್ಯಕ್ರಮದ ಪ್ರೋಮೊ ರಿಲೀಸ್ ಆಗಿ ವೈರಲ್ ಆಗುತ್ತಿದೆ. ಮಕ್ಕಳು ಅಂದರೆ ಬಹಳ ಇಷ್ಟ ಎಂದು ಸನ್ನಿ ಲಿಯೋನ್ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಅದೇ ಕಾರಣಕ್ಕೆ ಮಗು ದತ್ತು ಪಡೆದಿದ್ದು ಬಳಿಕ ಬಾಡಿಗೆ ತಾಯ್ತನದ ಮೂಲದ ಇಬ್ಬರು ಮಕ್ಕಳನ್ನು ಪಡೆದಿದ್ದಾರೆ. ಆದರೆ ಮಗು ದತ್ತು ಪಡೆಯಲು ಕಾರಣ ಏನು? ಎನ್ನುವ ಬಗ್ಗೆ ಇದೀಗ ಪ್ರತಿಕ್ರಿಯಿಸಿದ್ದಾರೆ.

Sunny Leone Talks About IVF Struggles Adoption and Choosing Surrogacy

ಡೇನಿಯಲ್- ಸನ್ನಿ ದಂಪತಿ 2017ರಲ್ಲಿ ಮಹಾರಾಷ್ಟ್ರದ ಲಾತೂರ್‌ನಲ್ಲಿರುವ ಅನಾಥಾಶ್ರಮದಿಂದ ನಿಶಾ ಎಂಬ ಬಾಲಕಿಯನ್ನು ದತ್ತು ಪಡೆದಿದ್ದರು. ಆಗ ಅವಳು ಕೇವಲ 21 ತಿಂಗಳ ಮಗುವಾಗಿದ್ದಳು. ಸನ್ನಿ ಮಾತನಾಡಿ "ನನ್ನ ಪ್ರೆಗ್ನೆನ್ಸಿ ಜರ್ನಿ ಅಷ್ಟು ಸುಲಭವಾಗಿರಲಿಲ್ಲ. ಹಲವು ಬಾರಿ IVFಗೆ ಪ್ರಯತ್ನಿಸಿದ್ದೆವೆ, ಆದರೆ ದುರದೃಷ್ಟವಶಾತ್ ಸಕ್ಸಸ್ ಆಗಲಿಲ್ಲ. ನಂತರ ಬೇರೆ ದಾರಿ ಆಯ್ಕೆ ಮಾಡಿಕೊಂಡೆವು. ಮಗು ದತ್ತು ಪಡೆಯಲು ಬಯಸಿದ್ದೆವು. IVFಗೆ ಯತ್ನಿಸಿದ ಅದೇ ದಿನ ನಿಶಾಳನ್ನು ದತ್ತು ಪಡೆಯುವಂತಾಯಿತು" ಎಂದಿದ್ದಾರೆ.

ಒಂದು ಮಗುವನ್ನು ದತ್ತು ಪಡೆದ ಬಳಿಕ ಮತ್ತೆ ಸಾರೋಗಸಿಗೆ ಮುಂದಾಗಿದ್ದು ಯಾಕೆ ಎನ್ನುವ ಪ್ರಶ್ನೆಗೆ "ಗರ್ಭ ಧರಿಸಿ ಮಗುವನ್ನು ನನ್ನ ಹೊಟ್ಟೆಯಲ್ಲಿ ಹೊರಲು ಇಷ್ಟಪಡಲಿಲ್ಲ. ಹಾಗಾಗಿ ಈ ಸಾರೋಗಸಿ" ಎಂದು ಸನ್ನಿ ಹೇಳಿದ್ದಾರೆ. ಇನ್ನು ಸಾರೋಗಸಿ ಪದ್ಧತಿ ಮೂಲಕ ಮಗು ಪಡೆಯಲು ಎಷ್ಟು ಖರ್ಚು ಆಯಿತು ಎನ್ನುವ ಬಗ್ಗೆ ಕೂಡ ಆಕೆ ಉತ್ತರಿಸಿದ್ದಾರೆ.

"ಸರೋಗಸಿಗಾಗಿ ಆಯ್ಕೆ ಮಾಡಿಕೊಂಡ ಬಾಡಿಗೆ ತಾಯಿಗೆ ವಾರಕ್ಕೆ ಒಮ್ಮೆ ಹಣ ಕೊಡುತ್ತಿದ್ದೆವು. ಆಕೆಯ ಪತಿಗೂ ಹಣ ಕೊಡುತ್ತಿದ್ದೆವು. ಅದಕ್ಕಾಗಿ ಬಹಳ ಖರ್ಚಾಯಿತು. ಅದೇ ಹಣದಲ್ಲಿ ಆಕೆ ಒಂದು ಮನೆ ಕಟ್ಟಿಸಿಕೊಂಡಳು" ಎಂದು ಸನ್ನಿ ಲಿಯೋನ್ ಹೇಳಿದ್ದಾರೆ.

2011ರಲ್ಲಿ ಹಿಂದಿ ಬಿಗ್‌ಬಾಸ್ ಸೀಸನ್ 5ರ ಸ್ಪರ್ಧಿಯಾಗಿ ಸನ್ನಿ ಲಿಯೋನ್ ಕಾಣಿಸಿಕೊಂಡಿದ್ದರು. ಅದಕ್ಕೂ ಮುನ್ನ ನೀಲಿ ಚಿತ್ರಗಳಲ್ಲಿ ನಟಿಸುತ್ತಿದ್ದರು. ಇನ್ನು 'ಜಿಸ್ಮ್-2' ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ಹಸಿಬಿಸಿ ದೃಶ್ಯಗಳಲ್ಲಿ ಸಿನಿಮಾಗಳಲ್ಲಿ ಐಟಂ ಸಾಂಗ್‌ಗಳಲ್ಲಿ ಸನ್ನಿ ಲಿಯೋನ್ ಮಿಂಚಿದ್ದೇ ಹೆಚ್ಚು. ಕನ್ನಡ ಸಿನಿಮಾ ಗೀತೆಗಳಿಗೆ ಕೂಡ ಆಕೆ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ದಕ್ಷಿಣದ ಸಿನಿಮಾಗಳತ್ತ ಮುಖ ಮಾಡಿದ್ದಾರೆ.

ಜೋಗಿ ಪ್ರೇಮ್ ನಿರ್ದೇಶನದ 'DK' ಕನ್ನಡ ಚಿತ್ರದಲ್ಲಿ ಮೊದಲು ಹೆಜ್ಜೆ ಹಾಕಿದ್ದರು. ಬಳಿಕ 'ಲವ್‌ ಯು ಆಲಿಯಾ' ಚಿತ್ರದ ಹಾಡಿಗೂ ಕುಣಿದರು. 'ಚಾಂಪಿಯನ್' ಎಂಬ ಮತ್ತೊಂದು ಕನ್ನಡ ಚಿತ್ರದಲ್ಲಿ ಕೂಡ ಆಕೆ ಡ್ಯಾನ್ಸ್ ಮಾಡಿ ರಂಗೇರಿಸಿದ್ದರು. ಸದ್ಯ 'ರಂಗೀಲಾ', 'ಶೇರೊ' ಎಂಬ ಮಲಯಾಳಂ ಸಿನಿಮಾಗಳಲ್ಲಿ ಸನ್ನಿ ನಟಿಸುತ್ತಿದ್ದಾರೆ. ತಮ್ಮದೇ ಬಯೋಪಿಕ್ ಸಿನಿಮಾದಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ.

More from Filmibeat

English summary
Actress Sunny Leone Opens Up on Becoming a Mother Through Adoption and Surrogacy;
Read more about: sunny leone actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X