»   » ರಿಯಾಲಿಟಿ ಶೋಗೆ ಮತ್ತೆ ಸನ್ನಿ ಲಿಯೋನ್ ಪ್ರತ್ಯಕ್ಷ

ರಿಯಾಲಿಟಿ ಶೋಗೆ ಮತ್ತೆ ಸನ್ನಿ ಲಿಯೋನ್ ಪ್ರತ್ಯಕ್ಷ

Posted By:
Subscribe to Filmibeat Kannada

ಇಂಡೋ-ಕೆನಡಿಯನ್ ಮೂಲದ ಅಮೇರಿಕನ್ ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್, ಟಿವಿ ರಿಯಾಲಿಟಿ ಶೋ 'ಬಿಗ್ ಬಾಸ್' ಮೂಲಕ ಬಾಲಿವುಡ್ ಪ್ರವೇಶಿಸಿದವರು. ನಂತರ 'ಜಿಸ್ಮ್-2' ಚಿತ್ರದ ಮೂಲಕ ಬಾಲಿವುಡ್ ನಟಿ ಎನಿಸಿಕೊಂಡಿದ್ದು ಈಗ ಇತಿಹಾಸ. ಇನ್ನೇನು ಸದ್ಯದಲ್ಲೇ ಸನ್ನಿ ಲಿಯೋನ್ ನಟನೆಯ ಜಿಸ್ಮ್-2 ಚಿತ್ರ ಬಿಡುಗಡೆಯಾಗಲಿದೆ. ಈಗಾಗಲೇ ಅವರು ಇನ್ನೊಂದು ಬಾಲಿವುಡ್ ಚಿತ್ರಕ್ಕೂ ಸಹಿ ಹಾಕಿದ್ದಾರೆ.

ಅಷ್ಟರಲ್ಲೇ ಇನ್ನೊಂದು ಸುದ್ದಿ ಸ್ಪೋಟವಾಗಿದೆ. ಮತ್ತೆ ಇದೀಗ ಟಿವಿಯ ಕಡೆಗೂ ಸನ್ನಿ ಕಣ್ಣು ಬಿದ್ದಿದೆ. ಇತ್ತೀಚಿನ ವರ್ತಮಾನದ ಪ್ರಕಾರ ಸನ್ನಿ ಲಿಯೋನ್, ಮತ್ತೆ ಟಿವಿ ರಿಯಾಲಿಟಿ ಶೋದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈ ಬಾರಿ ಅವರು ಸ್ಪರ್ಧಿಯಾಗಿ ಕಾಣಿಸಿಕೊಳ್ಳುತ್ತಿಲ್ಲ, ಬದಲಿಗೆ ತೀರ್ಪುಗಾರ್ತಿಯಾಗಿ ಇರಲಿದ್ದಾರೆ.

ಬಂದ ಸುದ್ದಿಯ ಪ್ರಕಾರ, ಮನಿಶ್ ಪೌಲ್ ಹಾಗೂ ಸಿರಸ್ ಸಾಹುಕರ್ ನಡೆಸಿಕೊಡುತ್ತಿರುವ 'ಇಂಡಿಯಾಸ್ ಗಾಟ್ ಟ್ಯಾಲೆಂಟ್ ಆನ್ ಟಿವಿ (India's Got Talent on TV)' ಗೆ ನಟಿ ಸನ್ನಿ ಲಿಯೋನ್ ಜಡ್ಜ್ ಆಗಿ ಬರಲಿದ್ದಾರೆ. ಇವರೊಬ್ಬರೇ ಅಲ್ಲ, ರಿತೇಶ್ ದೇಶ್ ಮುಖ್ ಹಾಗೂ ಕಿರಣ್ ಖೇರ್ ಕೂಡ ಈ ಶೋದಲ್ಲಿ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಈ ಮೊದಲು ಇದಕ್ಕೆ ತೀರ್ಪುಗಾರರಾಗಿದ್ದ ನಟಿ ಸೊನಾಲಿ ಬೇಂದ್ರೆ.

ಸೊನಾಲಿ ಬೇಂದ್ರೆಗೆ ಗೇಟ್ ಪಾಸ್ ನೀಡಿ ಸನ್ನಿ ಲಿಯೋನ್ ಅವರಿಗೆ ಮಣೆ ಹಾಕಿದ್ದು ವಿಶೇಷ ಎನಿಸಿದೆ.ಮಿಡ್ ಡೇ ಪತ್ರಿಕೆಗೆ ಬಂದ ಮಾಹಿತಿಯಂತೆ, ಸನ್ನಿ ಲಿಯೋನ್ ಈ ಶೋದಲ್ಲಿ ತೀರ್ಪುಗಾರರಾಗಿ ಭಾಗವಹಿಸಲಿರುವುದು ಬಹುತೇಕ ಖಾತ್ರಿಯಾಗಿದೆ. ಸನ್ನಿಗೂ ಮೊದಲು ಹಿರಿಯ ನಟ ಧರ್ಮೇಂದ್ರರನ್ನು ಇದಕ್ಕಾಗಿ ಸಂಪರ್ಕಿಸಲಾಗಿತ್ತು. ಆದರೆ ಅವರು ಈಗಾಗಲೇ ಇರುವ ಸಾಕಷ್ಟು ಕಮಿಟ್ ಮೆಂಟ್ ಕಾರಣಕ್ಕೆ ಒಪ್ಪಿಲ್ಲವಾದ್ದರಿಂದ ಈಗಿದು ಸನ್ನಿ ಪಾಲಾಗಿದೆ. (ಏಜೆನ್ಸೀಸ್)

English summary
Indo-Canadian adult film actress Sunny Leone, who had initially made her way to Bollywood through the TV reality show Bigg Boss, is once again planning to hit the small screens. But, this time, Ms Leone might be judging a reality show.
 
Please Wait while comments are loading...