ತಮ್ಮದೇಯಾದ ಬ್ಯೂಟಿ ಬ್ರ್ಯಾಂಡ್ ಹೊಂದಿರುವ ಬಾಲಿವುಡ್ ಸೆಲೆಬ್ರಿಟಿಗಳು ಇವರು!

ನಟ-ನಟಿಯರು ಹಾಗೂ ಸೆಲೆಬ್ರಿಗಳು ಬಳಸುವ ಸೌಂದರ್ಯವರ್ಧಕಗಳ ಅವರ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಹಾಗೂ ಆಸಕ್ತಿ ಇರುತ್ತದೆ. ಸಾಮಾನ್ಯವಾಗಿ ನಟ-ನಟಿಯರು ಬಳುಸುವ ಸೌಂದರ್ಯ ಉತ್ಪನ್ನಗಳನ್ನೇ ಜನರು ಫಾಲೋ ಮಾಡುತ್ತಾರೆ. ಹೀಗಾಗಿ, ಹಲವಾರು ಕಂಪನಿಗಳು ಟಾಪ್ ನಟ-ನಟಿಯರನ್ನು ತಮ್ಮ ಬ್ರ್ಯಾಂಡ್ ಅಂಬಾಸಿಡರ್ ಆಗಿ ಮಾಡಿಕೊಳ್ಳುತ್ತವೆ.

ಹೀಗೆ ಜಾಹೀರಾತುಗಳಲ್ಲಿ ನಟಿಸುವ ನಟಿಮಣಿಯರು ತಮ್ಮದೇಯಾದ ಬ್ಯೂಟಿ ಬ್ರ್ಯಾಂಡ್ ಗಳನ್ನು ಹೊಂದಿದ್ದಾರೆ. ನಟನೆಯ ಜೊತೆ ಜೊತೆಗೆ ಉದ್ಯಮಿಗಳಾಗಿಯೂ ಗುರುತಿಸಿಕೊಂಡಿದ್ದಾರೆ. ಆ ಮೂಲಕ ಸಂಪಾದನೆ ಮಾಡುತ್ತಿದ್ದಾರೆ. ಕೆಲವರು ಬ್ಯೂಟಿ ಬ್ರ್ಯಾಂಡ್ ತೆರೆದಿದ್ದರೆ, ಇನ್ನೂ ಕೆಲವರು ಕ್ಲಾಥಿಂಗ್ ಬ್ರ್ಯಾಂಡ್ ಗಳನ್ನು ನಡೆಸುತ್ತಿದ್ದಾರೆ. ಹೀಗೆ ತಮ್ಮದೇಯಾದ ಬ್ಯೂಟಿ ಬ್ರ್ಯಾಂಡ್ ಹೊಂದಿರುವ ಬಾಲಿವುಡ್ ನಟಿಮಣಿಯರು ಯಾರು ಎಂಬ ಮಾಹಿತಿ ಈ ಕೆಳಕಂಡಂತಿದೆ.

sunny leone to priyanka chopra: actress who started their own beauty brand

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ನಟಿ, ನಿರ್ಮಾಪಕಿ, ರೆಸ್ಟೋರೆಂಟ್ ಮಾಲೀಕೆ ಕೂಡ ಹೌದು. ಪ್ರಿಯಾಂಕಾ ಕೋವಿಡ್ ಸಾಂಕ್ರಮಿಕದ ಸಂದರ್ಭದಲ್ಲಿ ತಮ್ಮ ಕೂದಲ ರಕ್ಷಣೆಗಾಗಿ ಅನೋಮಲಿ ಹೇರ್ ಕೇರ್ ಅನ್ನು ಆರಂಭಿಸಿದರು. 2021ರಲ್ಲಿ ಆರಂಭವಾದ ಈ ಹೇರ್ ಕೇರ್ ಬ್ರ್ಯಾಂಡ್ ನೈಕಾ ಸಹಭಾಗಿತ್ವದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಪರಿಸರಸ್ನೇಹಿ ಉತ್ಪನ್ನಗಳನ್ನು ಉತ್ಪಾದಿಸುವ ಪ್ರಯತ್ನದಲ್ಲಿ ಅನೋಮಲಿ ಬ್ರ್ಯಾಂಡ್ ಪರಿಚಯಿಸಲಾಗಿದೆ. ಇದನ್ನು ಲಿಂಗ ತಾರತಮ್ಯವಿಲ್ಲದೆ ಬಳಸಬಹುದು ಎಂದು ಪ್ರಿಯಾಂಕಾ ಹೇಳಿದ್ದಾರೆ.

ಕತ್ರಿನಾ ಕೈಫ್

ಕತ್ರಿನಾ ಕೈಫ್

ಬಾಲಿವುಡ್ ಪ್ರಮುಖ ನಟಿಯರಲ್ಲಿ ಒಬ್ಬರಾದ ಕತ್ರಿನಾ ಕೈಫ್ 2019ರಲ್ಲಿ 'ಕೇ' (kay) ಬ್ಯೂಟಿ ಎಂಬ ಬ್ಯೂಟಿ ಬ್ರ್ಯಾಂಡ್ ಆರಂಭಿಸಿದ್ದಾರೆ. ಕತ್ರಿನಾ ಮೇಕಪ್ ನನ್ನ ಜೀವನದ ಪ್ರಮುಖ ಭಾಗವಾಗಿದೆ ಎಂದು ಹೇಳಿಕೊಂಡಿದ್ದರು. ಹೀಗಾಗಿ ಅವರು ನ್ಯಾಚುರಲ್ ಉತ್ಪನ್ನಗಳನ್ನೊಳಗೊಂಡ 'ಕೆ' ಬ್ರ್ಯಾಂಡ್ ಆರಂಭಿಸಿದ್ದಾರೆ. ಇಟ್ಸ್ 'ಕೇ ಟು ಬಿ ಯು' ಎಂಬ ಅಡಿ ಬರಹದೊಂದಿಗೆ ಈ ಬ್ರ್ಯಾಂಡ್ ಪರಿಚಯಿಸಲಾಗಿದ್ದು, ಅತ್ಯಂತ ಕಡಿಮೆ ಸಮಯದಲ್ಲಿ ಇದು ಜನರ ನೆಚ್ಚಿನ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ.

ಸನ್ನಿ ಲಿಯೋನ್

ಸನ್ನಿ ಲಿಯೋನ್

ನಟಿ ಸನ್ನಿ ಲಿಯೋನ್ ಇತರರಿಗೆ ಸಹಾಯ ಮಾಡುವ ತಮ್ಮ ಒಳ್ಳೆಯ ಗುಣದಿಂದ ಲಕ್ಷಾಂತರ ಜನರ ಹೃದಯ ಗೆದ್ದಿದ್ದಾರೆ. ಸನ್ನಿ ಲಿಯೋನ್ 2017ರಲ್ಲಿ ಫಾರ್ಫ್ಯುಮ್ ಹಾಗೂ 2018ರಲ್ಲಿ 'ಸ್ಟಾರ್ ಸ್ಟ್ರಕ್' ಎಂಬ ಸೌಂದರ್ಯ ಬ್ರ್ಯಾಂಡ್ ಅನ್ನು ಆರಂಭಿಸಿದರು. ಇದು ಸಂಪೂರ್ಣ ನ್ಯಾಚುರಲ್ ಆಗಿದ್ದು, ಭಾರತೀಯ ಚರ್ಮ ಹಾಗೂ ಮೈಬಣ್ಣಕ್ಕೆ ಹೋಲುವಂತೆ ತಯಾರಿಸಲಾಗಿದೆ.

ಮನೀಶ್ ಮಲ್ಹೋತ್ರಾ

ಮನೀಶ್ ಮಲ್ಹೋತ್ರಾ

ಫ್ಯಾಷನ್ ಜಗತ್ತಿನಲ್ಲಿ ಮೂವತ್ತು ವರ್ಷಗಳ ಅನುಭವ ಹೊಂದಿರುವ ಮನೀಶ್ ಮಲ್ಹೋತ್ರಾ ಬಾಲಿವುಡ್ ನಟೀಮಣಿಯರ ಫೆವರೇಟ್. ಇವರು ಭಾರತದ ಪ್ರಮುಖ ಫ್ಯಾಷನ್ ವಿನ್ಯಾಸಕರು ಹೌದು. ಇವರು ಬಾಲಿವುಡ್ ನಟಿಮಣಿಯರಿಗೆ ಮಾತ್ರವಲ್ಲದೆ ಭಾರತದ ಹಲವು ಕ್ಷೇತ್ರಗಳಲ್ಲಿನ ಖ್ಯಾತನಾಮರಿಗೆ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಹೀಗಿದ್ದರೂ ಕೂಡ ಇವರು ತಮ್ಮದೇಯಾದ ಬ್ಯೂಟಿ ಬ್ರ್ಯಾಂಡ್ ಹೊಂದಿದ್ದಾರೆ. ಮನೀಶ್ ಮಲ್ಹೋತ್ರಾ 2019ರಲ್ಲಿ 'ಮೈಗ್ಲಾಮ್' ಸಹಯೋಗದೊಂದಿಗೆ ಬ್ಯೂಟಿ ಬ್ರ್ಯಾಂಡ್ ಆರಂಭಿಸಿದ್ದಾರೆ. ಇದು ವಿವಿಧ ಉತ್ಪನ್ನಗಳ ಮೂಲಕ ನಟಿಯರನ್ನು ಆಕರ್ಷಿಸುತ್ತಿದೆ.

ಸೋನಾಕ್ಷಿ ಸಿನ್ಹಾ

ಸೋನಾಕ್ಷಿ ಸಿನ್ಹಾ

ನಟಿ ಸೋನಾಕ್ಷಿ ಸಿನ್ಹಾ ಸದ್ಯ ಸಿನಿಮಾಗಳಲ್ಲಿ ಅಷ್ಟಾಗಿ ನಟಿಸುತ್ತಿಲ್ಲ. ಸೋನಾಕ್ಷಿ ಸಿನ್ಹಾ ಸಹ 'SoEzi'ಎಂಬ ಬ್ಯೂಟಿ ಬ್ರ್ಯಾಂಡ್ ಒಂದನ್ನು ಆರಂಭಿಸಿದ್ದಾರೆ. ಇದು ಪ್ರೆಸ್ ಆನ್ ನೈಲ್ ಎಂಬ ವ್ಯಾಪಕ ಸರಣಿಯನ್ನು ಹೊಂದಿದೆ. ಇದರಿಂದ ಉಗುರುಗಳಿಗೆ ಮೇಕ್ ಓವರ್ ನೀಡುವುದು ಸುಲಭವಾಗಿದೆ.

ಅನುಷಾ ದಂಡೇಕರ್

ಅನುಷಾ ದಂಡೇಕರ್

ಬಹುತೇಕ ಭಾರತೀಯರ ಸ್ಕಿನ್ ಕಲರ್ ಗೋಧಿಬಣ್ಣ ಹಾಗೂ ಎಣ್ಣೆಕಪ್ಪು. ಹೀಗಾಗಿ ಕಂಡು ಬಣ್ಣದ ಚರ್ಮದ ಬಗ್ಗೆ ಕೀಳರಿಮೆ ಹೊಂದಬಾರದು ಎಂಬುದನ್ನು ಒತ್ತಿ ಹೇಳಲು ನಟಿ ಅನುಷಾ ದಂಡೇಕರ್, ತಮ್ಮ ಬ್ರ್ಯಾಂಡ್ ಬ್ರೌನ್ ಸ್ಕಿನ್ ಮೂಲಕ ಕಪ್ಪು ತ್ವಚೆಯು ಸುಂದರವಾಗಿರುತ್ತದೆ ಎಂದು ಪರಿಚಯಿಸಿದರು.

More from Filmibeat

English summary
sunny leone to priyanka chopra: actress who started their own beauty brand, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X