ಸನ್ನಿ ಜೊತೆ ಸಲ್ಮಾನ್ ಸೋದರ ಅರ್ಬಾಜ್ ಖಾನ್ ರೋಮ್ಯಾನ್ಸ್
ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ ಸಲ್ಮಾನ್ ಖಾನ್ ಅವರ ಸಹೋದರ ನಟ ಅರ್ಬಾಜ್ ಖಾನ್ ಅವರು ಇದೀಗ ಮಾದಕ ಬೆಡಗಿ ಸನ್ನಿ ಲಿಯೋನ್ ಅವರ ಜೊತೆ ರೋಮ್ಯಾನ್ಸ್ ಮಾಡಲು ಎಲ್ಲಾ ಸಿದ್ಧತೆ ನಡೆಸುತ್ತಿದ್ದಾರೆ.
ನವ ನಿರ್ದೇಶಕ ರಾಜೀವ್ ವಾಲಿಯಾ ಅವರು ಈ ಚಿತ್ರದ ಮೂಲಕ ನಿರ್ದೇಶಕರ ಕ್ಯಾಪ್ ತೊಡುತ್ತಿದ್ದು, ಚಿತ್ರಕ್ಕೆ 'ತೇರಾ ಇಂತ್ ಜಾರ್' ಎಂದು ಹೆಸರಿಡಲಾಗಿದೆ. ನಟಿ ಸನ್ನಿ ಲಿಯೋನ್ ಅವರು ಶಾರುಖ್ ಖಾನ್ ಅವರ 'ರಾಯಿಸ್' [ಶಾರುಖ್ ಜೊತೆ ಮಾದಕ ತಾರೆ ಸನ್ನಿ ಲಿಯೋನ್ ಡ್ಯುಯೆಟ್] ಚಿತ್ರದಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಿದ ನಂತರ ಇದೀಗ ನಟ ಅರ್ಬಾಜ್ ಅವರ ಜೊತೆ ನಟಿಸಲು ಉತ್ಸುಕರಾಗಿದ್ದಾರೆ.

'ತೇರಾ ಇಂತ್ ಜಾರ್' ಎಂಬ ಮ್ಯೂಸಿಕಲ್ ರೋಮ್ಯಾಂಟಿಕ್ ಚಿತ್ರದಲ್ಲಿ ನಟಿಸಲು ಮಾದಕ ಬೆಡಗಿ ಸನ್ನಿ ಲಿಯೋನ್ ಅವರು ಈಗಾಗಲೇ ಡೇಟ್ಸ್ ಕೂಡ ನೀಡಿದ್ದಾರೆ. ಅಂದಹಾಗೆ ಇಂತಹ ವಿಭಿನ್ನ ಕಥಾ ಹಂದರ ಇರುವ ಚಿತ್ರದಲ್ಲಿ ನಟಿ ಸನ್ನಿ ಲಿಯೋನ್ ಅವರು ಇಷ್ಟರವರೆಗೆ ಕಾಣಿಸಿಕೊಂಡಿಲ್ಲವಾದ್ದರಿಂದ ಕೂಡಲೇ ಚಿತ್ರಕ್ಕೆ ಸಹಿ ಹಾಕಿದ್ದಾಗಿ ಸನ್ನಿ ಹೇಳಿಕೊಂಡಿದ್ದಾರೆ.[ಉದ್ಯಾನನಗರಿ ಬೆಂಗಳೂರನ್ನು ಮನಸಾರೆ ಹೊಗಳಿದ ಸನ್ನಿ ಲಿಯೋನ್]

ಇದೀಗ ಅಸಲಿ ವಿಷಯ ಏನಪ್ಪಾ ಅಂದ್ರೆ ನಟ ಅರ್ಬಾಜ್ ಖಾನ್ ಅವರ ಪತ್ನಿ ಖ್ಯಾತ ಡ್ಯಾನ್ಸರ್ ಮಲೈಕಾ ಅರೋರಾ ಅವರು ತಮ್ಮ ಪತಿ ಸನ್ನಿ ಲಿಯೋನ್ ಅವರ ಜೊತೆ ಡ್ಯುಯೆಟ್ ಹಾಡುತ್ತಿದ್ದಾರೆ ಎಂದು ತಿಳಿದ ತಕ್ಷಣ ಏನು ಪ್ರತಿಕ್ರಿಯೆ ನೀಡಬಹುದು ಅನ್ನೋದು ಸದ್ಯಕ್ಕೆ ಬಿಟೌನ್ ಮಂದಿಯಲ್ಲಿರುವ ಕುತೂಹಲ.[ಮಲೈಕಾರ 'ಸೆಕ್ಸಿ ಬ್ಯೂಟಿ' ಸೀಕ್ರೆಟ್ ಟಾಯ್ಲೆಟ್ ಪೇಪರಾ?]
ಮಲೈಕಾ ಅರೋರಾ ಅವರು ಈಗಾಗಲೇ ಪತಿ ಅರ್ಬಾಜ್ ಖಾನ್ ಅವರಿಂದ ದೂರವಾಗಿದ್ದು ಮಾತ್ರವಲ್ಲದೆ ವಿಚ್ಛೇದನಕ್ಕೆ ಅರ್ಜಿ ಕೂಡ ಸಲ್ಲಿಸಿದ್ದಾರೆ.


Click it and Unblock the Notifications











