ರಸಿಕರ ಮನವ ಸೂರೆಗೊಂಡ ನಾಯಕಿ ಸನ್ನಿ ಲಿಯೋನ್

By Rajendra

ಬಾಲಿವುಡ್ ಚಿತ್ರರಂಗಕ್ಕೆ ಅಡಿಯಿಟ್ಟ ಕೇವಲ ಮೂರು ವರ್ಷಗಳಲ್ಲಿ ಸನ್ನಿ ಲಿಯೋನ್ ಮಾಡಿದ ಮೋಡಿ ಅಷ್ಟಿಷ್ಟಲ್ಲ. ನೇರವಾಗಿ ಚಿತ್ರರಸಿಕರ ಹೃದಯಕ್ಕೆ ಲಗ್ಗೆ ಹಾಕಿದ ಬೆಡಗಿ. ಇದೀಗ ಅವರು ಇನ್ನೊಂದು ಪಟ್ಟವನ್ನು ಅಲಂಕರಿಸಿದ್ದಾರೆ. ಭಾರತದ ಟಾಪ್ ನಟಿಯನ್ನು ಹಿಂದಿಕ್ಕಿ ಮೊದಲ ಸ್ಥಾನ ಅಲಂಕರಿಸಿದ್ದಾರೆ.

ಟೈಮ್ಸ್ 50 ಮೋಸ್ಟ್ ಡಿಸೈರಬಲ್ 2014ನೇ ಸಾಲಿನ ಮಹಿಳೆಯಲ್ಲಿ ಸನ್ನಿ ಲಿಯೋನ್ ಗೆ ಮೊದಲ ಸ್ಥಾನ ದಕ್ಕಿದೆ. ಟೈಮ್ಸ್ ಆಫ್ ಇಂಡಿಯಾ ನಡೆಸಿದ ಆನ್ ಲೈನ್ ಮತದಾನದಲ್ಲಿ ಒಟ್ಟು 20.3 ಲಕ್ಷ ಮತಗಳು ಬಿದ್ದುದ್ದು, ಸ್ಪರ್ಧೆಯಲ್ಲಿದ್ದ ಎಲ್ಲಾ ತಾರೆಗಳನ್ನು ಹಿಂದಿಕ್ಕಿ ಸನ್ನಿ ಮೋಸ್ಟ್ ಡಿಸೈರಬಲ್ ಮಹಿಳೆಯಾಗಿ ಆಯ್ಕೆಯಾಗಿದ್ದಾರೆ. [ಯಶ್ ಕೈ ತಪ್ಪಿದ ಕನ್ನಡದ ಮೋಸ್ಟ್ ಡಿಸೈರಬಲ್ ಪಟ್ಟ]

ಪಟ್ಟಿಯಲ್ಲಿ ಎಂತೆಂತಹ ಸುಂದರಿಯರಿದ್ದರೆಂದರೆ ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಫರ್ನಾಂಡೀಸ್, ಕತ್ರಿನಾ ಕೈಫ್, ಶ್ರೀಯಾ ಸರನ್, ಪ್ರಿಯಾಂಕಾ ಚೋಪ್ರಾ, ಶ್ರದ್ಧಾ ಕಪೂರ್ ಸೇರಿದಂತೆ ಹತ್ತು ಹಲವರಿದ್ದರು. ಆದರೆ ಅವರೆಲ್ಲರನ್ನೂ ಮೀರಿ ನಂಬರ್ ಒನ್ ಪಟ್ಟ ಅಲಂಕರಿಸಿರುವುದು ವಿಶೇಷ. ಮೋಸ್ಟ್ ಡಿಸೈರಬಲ್ ಟಾಪ್ ಟೆನ್ ಬೆಡಗಿಯರನ್ನು ನೋಡೋಣ ಬನ್ನಿ.

ಹತ್ತನೇ ಸ್ಥಾನದಲ್ಲಿ ಲಿಸಾ ಹೈಡೆನ್

ಹತ್ತನೇ ಸ್ಥಾನದಲ್ಲಿ ಲಿಸಾ ಹೈಡೆನ್

ಇನ್ನೂ ಸಿಂಗಲ್ ಆಗಿರುವ ಈ ಬೆಡಗಿ ಕಳೆದ ವರ್ಷ ಅತಿಥಿ ಪಾತ್ರದಲ್ಲಿ ಎಲ್ಲರ ಗಮನಸೆಳೆದವರು. ಕಣ್ಣಿಗೆ ರಾಚುವ ಈಕೆಯ ಚೆಲುವೆಗೆ ಮಾರುಹೋದವರು ಇಲ್ಲ ಎಂದರೆ ಅತಿಶಯೋಕ್ತಿ ಇಲ್ಲ. ಹತ್ತನೇ ಸ್ಥಾನ ಅಲಂಕರಿಸಿದ ಬೆಡಗಿ

ಒಂಬತ್ತನೇ ಸ್ಥಾನದಲ್ಲಿ ಆಶಾ ಭಟ್

ಒಂಬತ್ತನೇ ಸ್ಥಾನದಲ್ಲಿ ಆಶಾ ಭಟ್

ಈಕೆಯೇನು ಸುಬ್ಬಾ ಭಟ್ಟರ ಮಗಳಲ್ಲ. ಆದರೆ ಬೆಂಗಳೂರಿನ ಬಾಲೆ. ಹೊಸ ಮುಖ. ಕೇವಲ ಚೆಲುವಷ್ಟೇ ಅಲ್ಲ ಜಾಣೆ ಕೂಡ ಹೌದು ಎಂದು ಟೈಮ್ಸ್ ಪತ್ರಿಕೆ ಕೊಂಡಾಡಿದೆ.

ಎಂಟನೇ ಸ್ಥಾನದಲ್ಲಿ ನರ್ಗೀಸ್ ಫಕ್ರಿ

ಎಂಟನೇ ಸ್ಥಾನದಲ್ಲಿ ನರ್ಗೀಸ್ ಫಕ್ರಿ

ಮೈ ತೇರಾ ಹೀರೋ ಚಿತ್ರದ ಮೂಲಕ ಎಲ್ಲರ ಚಿತ್ರರಸಿಕರ ಚಿತ್ತ ಕೆಡಿಸಿದ ಬೆಡಗಿ. ಬಳಿಕ ಡೆವಿಲ್ ಐಟಂ ಸಾಂಗ್ ನಲ್ಲಿ ತಮ್ಮ ಸೌಂದರ್ಯವನ್ನು ಧಾರೆ ಎರೆದ ನರ್ಗೀಸ್ ಫಕ್ರಿ ಎಂಟನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಏಳನೇ ಸ್ಥಾನದಲ್ಲಿ ಶ್ರದ್ಧಾ ಕಪೂರ್

ಏಳನೇ ಸ್ಥಾನದಲ್ಲಿ ಶ್ರದ್ಧಾ ಕಪೂರ್

ಕಪೂರ್ ಖಾಂದಾನಿನ ಕುಡಿ ಈಕೆ. ಏಕ್ ವಿಲನ್, ಹೈದರ್ ಚಿತ್ರಗಳ ಮೂಲಕ ಗಮನಸೆಳೆದ ಕ್ಯೂಟ್ ಬೆಡಗಿ. ಪಕ್ಕದ ಮನೆ ಹುಡುಗಿಯಂತಿರುವ ಶ್ರದ್ಧಾ ತನ್ನ ಮೋಹಕ ನೋಟದಿಂದ ಎಲ್ಲರನ್ನೂ ಸೆಳೆಯುತ್ತಿದ್ದಾರೆ.

ಆರನೇ ಸ್ಥಾನದಲ್ಲಿ ಪ್ರಿಯಾಂಕಾ ಚೋಪ್ರಾ

ಆರನೇ ಸ್ಥಾನದಲ್ಲಿ ಪ್ರಿಯಾಂಕಾ ಚೋಪ್ರಾ

ಇಷ್ಟು ದಿನ ಗ್ಲಾಮರ್ ಪಾತ್ರಗಳಲ್ಲಿ ಮಿಂಚುತ್ತಿದ್ದ ಈ ಬೆಡಗಿ 'ಮೇರಿ ಕಾಮ್' ಚಿತ್ರದ ಮೂಲಕ ಅಭಿನಯದಲ್ಲೂ ಮಿಂಚಿದರು. ಇನ್ನು ಮದುವೆ ಇಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಚೆಲುವೆಯಾದ ಕಾರಣ ಜನಪ್ರಿಯತೆಗೇನು ಕಮ್ಮಿ ಇಲ್ಲ.

 ಪಂಚಮ ಸ್ಥಾನದಲ್ಲಿ ಶ್ರೀಯಾ ಸರನ್

ಪಂಚಮ ಸ್ಥಾನದಲ್ಲಿ ಶ್ರೀಯಾ ಸರನ್

ಉತ್ತರದಿಂದ ದಕ್ಷಿಣದವರೆಗೂ ತನ್ನ ಚೆಲುವಿನ ಮೂಲಕ ಗಮನಸೆಳೆದ ಬೆಡಗಿ. ಅಜಯ್ ದೇವಗನ್ ಜೊತೆಗೆ ಭರ್ಜರಿ ಚಾನ್ಸ್ ಗಿಟ್ಟಿಸುವ ಮೂಲಕ ಬಾಲಿವುಡ್ ನಲ್ಲೂ ಸಂಚಲನ ಸೃಷ್ಟಿಸಿದ ತಾರೆ.

ನಾಲ್ಕನೇ ಸ್ಥಾನದಲ್ಲಿ ಕತ್ರಿನಾ ಕೈಫ್

ನಾಲ್ಕನೇ ಸ್ಥಾನದಲ್ಲಿ ಕತ್ರಿನಾ ಕೈಫ್

ಬಾಲಿವುಡ್ ನಲ್ಲಿ ನಂಬರ್ ಒನ್ ಪಟ್ಟಕ್ಕಾಗಿ ಸದಾ ಬಿರುಸಿನ ಸ್ಪರ್ಧೆ ನೀಡುತ್ತಿರುವ ತಾರೆ ಕತ್ರಿನಾ ಕೈಫ್. ಸದ್ಯಕ್ಕೆ ರಣದೀರ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿರುವ ಕತ್ರಿ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟಿರುವುದು ಅವರ ಅಭಿಮಾನಿಗಳಿಗೂ ಕೊಂಚ ನಿರಾಸೆ ತಂದಿದೆ.

ಮೂರನೇ ಸ್ಥಾನದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್

ಮೂರನೇ ಸ್ಥಾನದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್

ಸಲ್ಮಾನ್ ಖಾನ್ ಜೊತೆಗಿನ ಕಿಕ್ ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಸೆಕ್ಸ್ ಬಾಂಬ್ ಸಿಡಿಸಿದ ಬೆಡಗಿ. ತನ್ನ ನೀಳ ಕಾಲ್ಗಳ ಮೂಲಕ ಪಡ್ಡೆಗಳ ಹೃದಯದಲ್ಲಿ ಚಿತ್ತಾರ ಬಿಡಿಸಿದ ಚೆಲುವೆ.

ಎರಡನೇ ಸ್ಥಾನದಲ್ಲಿ ದೀಪಿಕಾ ಪಡುಕೋಣೆ

ಎರಡನೇ ಸ್ಥಾನದಲ್ಲಿ ದೀಪಿಕಾ ಪಡುಕೋಣೆ

ಕೊಚ್ಚಡಿಯಾನ್, ಹ್ಯಾಪಿ ನ್ಯೂ ಈಯರ್, ಫೈಂಡಿಂಗ್ ಫ್ಯಾನಿ ಚಿತ್ರಗಳ ಮೂಲಕ ಗಮನಸೆಳೆದ ತಾರೆ. ತಮ್ಮ ಕೆನ್ನೆಯ ಕುಳಿ ಮೂಲಕವೇ ಚಿತ್ರರಸಿಕರಿಗೆ ಚಳಿ ತರಿಸಿದ ಬೆಡಗಿ. ಸದ್ಯಕ್ಕೆ ರಣವೀರ್ ಸಿಂಗ್ ಜೊತೆಗೆ ಡೇಟಿಂಗ್ ನಲ್ಲಿದ್ದಾರೆ.

 ನಂಬರ್ ಒನ್ ಕ್ವೀನ್ ಸನ್ನಿ ಲಿಯೋನ್

ನಂಬರ್ ಒನ್ ಕ್ವೀನ್ ಸನ್ನಿ ಲಿಯೋನ್

ಟಾಪ್ ಟು ಬಾಟಮ್ ಚಿತ್ರರಸಿಕರ ತಲೆಕೆಡಿಸಿರುವ ಬೆಡಗಿ ಸನ್ನಿ ಲಿಯೋನ್. ಅಭಿನಯಿಸಿದ್ದ ಬೆರಳೆಣಿಕೆ ಚಿತ್ರಗಳಾದರೂ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿಕೊಂಡ ರೂಪಸಿ. ಬಾಲಿವುಡ್ ನಲ್ಲಿ ಈಗ ಮಹಾರಾಣಿಯಂತೆ ಮೆರೆಯುತ್ತಿದ್ದಾರೆ.

More from Filmibeat

English summary
India has voted and chosen the Times 50 Most Desirable Women of 2014. The 20.3 lakh votes received online on www.itimes.com/polls along with our vote decided the winners. Bombay Times spoke to Sunny Leone on topping the list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X