ಹೊಸ ಜವಾಬ್ದಾರಿ ಹೊತ್ತ ಮಾದಕ ನಟಿ ಸನ್ನಿ ಲಿಯೋನ್
ಬಾಲಿವುಡ್ ನಟಿ ಸನ್ನಿ ಲಿಯೋನ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಿನಿಮಾ ಮಾಡ್ತಿಲ್ಲ. ಅಲ್ಲೊಂದು ಇಲ್ಲೊಂದು ಅತಿಥಿ ಪಾತ್ರ ಬಿಟ್ಟರೆ ಕೆಲವೊಂದು ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ.
ಇದೀಗ, ನಟನೆಯ ಜೊತೆ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹೌದು, ಸನ್ನಿ ಲಿಯೋನ್ ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆ ಸ್ಥಾಪಿಸಿಕೊಂಡಿದ್ದಾರೆ. ಈ ಸಂಸ್ಥೆಯಡಿ ಸಿನಿಮಾ ನಿರ್ಮಾಣಕ್ಕೂ ಮುಂದಾಗಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ, ಸೈಕಲಾಜಿಕಲ್ ಥ್ರಿಲ್ಲರ್ ಕಥೆ ಸಿದ್ಧ ಮಾಡಿಕೊಂಡಿರುವ ನಟಿ, ಶೂಟಿಂಗ್ ಆರಂಭಿಸುವ ರೂಪುರೇಷೆ ರಚಿಸುತ್ತಿದ್ದಾರಂತೆ. ಪ್ರೊಡಕ್ಷನ್ ಗೆ ಸಂಬಂಧಿಸಿದಂತೆ ಕೆಲಸಗಳನ್ನು ಪತಿ ಡೇನಿಯಲ್ ನಿಭಾಯಿಸುತ್ತಾರೆ. ಸಿನಿಮಾ, ಕಥೆ, ಬಜೆಟ್, ಕಲಾವಿದರು ಎಲ್ಲವನ್ನು ತಾವೇ ನಿರ್ವಹಿಸುವ ಯೋಜನೆ ಹಾಕಿಕೊಂಡಿದ್ದಾರೆ.

ನಿರ್ಮಾಪಕಿಯಾಗಿ ತನಗೆ ಯಾವುದೇ ಹಿಂಜರಿಕೆ, ಅಂಜಿಕೆ ಇಲ್ಲ. ಅವಶ್ಯಕತೆ ಬಿದ್ದರೆ ನನ್ನ ತಂಡದ ಸದಸ್ಯರಿಗೆ ಟೀ ತಂದು ಕೊಡಲು ನನಗೆ ಅಭ್ಯಂತರವಿಲ್ಲ ಎಂದು ಸನ್ನಿ ಲಿಯೋನ್ ಹೇಳಿಕೊಂಡಿದ್ದಾರೆ.
ಸದ್ಯಕ್ಕೆ ಸನ್ನಿ ಬ್ಯಾನರ್ ನಲ್ಲಿ ಬರಲಿರುವ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಯಾರು ನಟಿಸುತ್ತಾರೆ, ಯಾವಾಗ ಆರಂಭವಾಗುತ್ತೆ, ಟೈಟಲ್ ಏನು ಎಂಬುದು ಕುತೂಹಲ ಮೂಡಿಸಿದೆ. ಇದೆಲ್ಲದಕ್ಕೂ ಸ್ವತಃ ಸನ್ನಿ ಶೀಘ್ರದಲ್ಲಿ ಉತ್ತರ ನೀಡಲಿದ್ದಾರೆ.


Click it and Unblock the Notifications











