twitter
    For Quick Alerts
    ALLOW NOTIFICATIONS  
    For Daily Alerts

    ಹೊಸ ಜವಾಬ್ದಾರಿ ಹೊತ್ತ ಮಾದಕ ನಟಿ ಸನ್ನಿ ಲಿಯೋನ್

    |

    ಬಾಲಿವುಡ್ ನಟಿ ಸನ್ನಿ ಲಿಯೋನ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಿನಿಮಾ ಮಾಡ್ತಿಲ್ಲ. ಅಲ್ಲೊಂದು ಇಲ್ಲೊಂದು ಅತಿಥಿ ಪಾತ್ರ ಬಿಟ್ಟರೆ ಕೆಲವೊಂದು ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ.

    ಇದೀಗ, ನಟನೆಯ ಜೊತೆ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹೌದು, ಸನ್ನಿ ಲಿಯೋನ್ ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆ ಸ್ಥಾಪಿಸಿಕೊಂಡಿದ್ದಾರೆ. ಈ ಸಂಸ್ಥೆಯಡಿ ಸಿನಿಮಾ ನಿರ್ಮಾಣಕ್ಕೂ ಮುಂದಾಗಿದ್ದಾರೆ.

    'ಶ್ರೀಮತಿ ಸನ್ನಿ ಲಿಯೋನ್ ಯುವಕ ಮಂಡಳಿ': ಜಾತ್ರೆಯಲ್ಲಿ ಮಿಂಚಿದ ಮಾದಕ ನಟಿಯ ಬಳಗ'ಶ್ರೀಮತಿ ಸನ್ನಿ ಲಿಯೋನ್ ಯುವಕ ಮಂಡಳಿ': ಜಾತ್ರೆಯಲ್ಲಿ ಮಿಂಚಿದ ಮಾದಕ ನಟಿಯ ಬಳಗ

    ಸದ್ಯದ ಮಾಹಿತಿ ಪ್ರಕಾರ, ಸೈಕಲಾಜಿಕಲ್ ಥ್ರಿಲ್ಲರ್ ಕಥೆ ಸಿದ್ಧ ಮಾಡಿಕೊಂಡಿರುವ ನಟಿ, ಶೂಟಿಂಗ್ ಆರಂಭಿಸುವ ರೂಪುರೇಷೆ ರಚಿಸುತ್ತಿದ್ದಾರಂತೆ. ಪ್ರೊಡಕ್ಷನ್ ಗೆ ಸಂಬಂಧಿಸಿದಂತೆ ಕೆಲಸಗಳನ್ನು ಪತಿ ಡೇನಿಯಲ್ ನಿಭಾಯಿಸುತ್ತಾರೆ. ಸಿನಿಮಾ, ಕಥೆ, ಬಜೆಟ್, ಕಲಾವಿದರು ಎಲ್ಲವನ್ನು ತಾವೇ ನಿರ್ವಹಿಸುವ ಯೋಜನೆ ಹಾಕಿಕೊಂಡಿದ್ದಾರೆ.

    Sunny Leone Turns As A Producer

    ದ್ರಾಕ್ಷಿ ತುಂಬಿದ ಬಾತ್ ಟಬ್ ನಲ್ಲಿ ಬೆತ್ತಲಾದ ಸನ್ನಿಲಿಯೋನ್ ವಿಡಿಯೋ ವೈರಲ್ದ್ರಾಕ್ಷಿ ತುಂಬಿದ ಬಾತ್ ಟಬ್ ನಲ್ಲಿ ಬೆತ್ತಲಾದ ಸನ್ನಿಲಿಯೋನ್ ವಿಡಿಯೋ ವೈರಲ್

    ನಿರ್ಮಾಪಕಿಯಾಗಿ ತನಗೆ ಯಾವುದೇ ಹಿಂಜರಿಕೆ, ಅಂಜಿಕೆ ಇಲ್ಲ. ಅವಶ್ಯಕತೆ ಬಿದ್ದರೆ ನನ್ನ ತಂಡದ ಸದಸ್ಯರಿಗೆ ಟೀ ತಂದು ಕೊಡಲು ನನಗೆ ಅಭ್ಯಂತರವಿಲ್ಲ ಎಂದು ಸನ್ನಿ ಲಿಯೋನ್ ಹೇಳಿಕೊಂಡಿದ್ದಾರೆ.

    ಸದ್ಯಕ್ಕೆ ಸನ್ನಿ ಬ್ಯಾನರ್ ನಲ್ಲಿ ಬರಲಿರುವ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಯಾರು ನಟಿಸುತ್ತಾರೆ, ಯಾವಾಗ ಆರಂಭವಾಗುತ್ತೆ, ಟೈಟಲ್ ಏನು ಎಂಬುದು ಕುತೂಹಲ ಮೂಡಿಸಿದೆ. ಇದೆಲ್ಲದಕ್ಕೂ ಸ್ವತಃ ಸನ್ನಿ ಶೀಘ್ರದಲ್ಲಿ ಉತ್ತರ ನೀಡಲಿದ್ದಾರೆ.

    English summary
    Bollywood actress Sunny Leone turns as a producer. she ready to serve Tea in set of her production film.
    Tuesday, January 28, 2020, 20:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X