ಗಂಡನ ಜತೆ ಹೊಲಕ್ಕೆ ತೆರಳಿದ ಸನ್ನಿ ಲಿಯೋನ್: ಭೂತಾಯಿಯಿಂದ ತರಕಾರಿ ಪಡೆದ ಖುಷಿ ಹಂಚಿಕೊಂಡ ನಟಿ
ನಟಿ ಸನ್ನಿ ಲಿಯೋನ್, ಪತಿ ಡೇನಿಯಲ್ ವೆಬರ್ ಜತೆಗೆ ಇತ್ತೀಚೆಗೆ ಹೊಲವೊಂದಕ್ಕೆ ಭೇಟಿ ನೀಡಿದ್ದು, ಅದರ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಲಾಕ್ ಡೌನ್ ನಡುವೆಯೇ ಮೇ ಮಧ್ಯದಲ್ಲಿ ಸನ್ನಿ ತಮ್ಮ ಕುಟುಂಬದೊಂದಿಗೆ ಅಮೆರಿಕಕ್ಕೆ ತೆರಳಿದ್ದರು.
Recommended Video
ಹೊಲಕ್ಕೆ ಹೋಗಿದ್ದ ಫೋಟೊ ಪೋಸ್ಟ್ ಮಾಡಿರುವ ಸನ್ನಿ ಲಿಯೋನ್, 'ಡೇನಿಯಲ್ ಜತೆ ಇಂದು ಹೊಲಕ್ಕೆ ತೆರಳಿದ್ದೆನು. ತಾಯಿ ಭೂಮಿಯಿಂದ ನೇರವಾಗಿ ನಮ್ಮ ಸ್ವಂತ ತರಕಾರಿಗಳನ್ನು ಕಿತ್ತೆವು. ಅದ್ಭುತವಾದ ದಿನ' ಎಂದು ಸನ್ನಿ ಹೇಳಿದ್ದಾರೆ.
ಒಂದು ಫೋಟೊದಲ್ಲಿ ಸನ್ನಿ ಲಿಯೋನ್, ತಮ್ಮ ಸುತ್ತಲೂ ಸಾಲಾಗಿ ಬೆಳೆದಿರುವ ಬೆಳೆಯ ನಡುವೆ ನಿಂತು ಪೋಸ್ ಕೊಟ್ಟಿದ್ದಾರೆ. ಇನ್ನೊಂದು ಫೋಟೊದಲ್ಲಿ ಪತಿ ಡೇನಿಯಲ್ ಜತೆಗೆ ಪೋಸ್ ನೀಡಿದ್ದಾರೆ. ಈ ಫೋಟೊ ಹಿನ್ನೆಲೆಯಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಕೃಷಿ ಭೂಮಿ ಕಾಣಿಸುತ್ತದೆ. ಇಬ್ಬರೂ ಮಾಸ್ಕ್ ಏಕೆ ಧರಿಸಿರಲಿಲ್ಲ ಎಂದು ಅನೇಕರು ಕಾಮೆಂಟ್ ಬಾಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ. ಮುಂದೆ ಓದಿ...

ಉದ್ಯಾನಕ್ಕೆ ಭೇಟಿ ನೀಡಿದ್ದ ಸನ್ನಿ
ಕಳೆದ ಗುರುವಾರ ಲಾಸ್ ಏಂಜಲಿಸ್‌ನ ಡೆಸ್ಕಾನ್ಸೊ ಗಾರ್ಡನ್ಸ್ ಎಂಬ ಉದ್ಯಾನವೊಂದಕ್ಕೆ ಭೇಟಿ ನೀಡಿದ್ದ ಫೋಟೊವೊಂದನ್ನು ಶೇರ್ ಮಾಡಿದ್ದರು. ಆ ಸಮಯದಲ್ಲಿ ಅವರು ಕಪ್ಪು ಬಣ್ಣದ ಮಾಸ್ಕ್ ಧರಿಸಿದ್ದರು.

ಅಮೆರಿಕಕ್ಕೆ ಹಾರಿದ್ದ ಸನ್ನಿ
ಲಾಕ್ ಡೌನ್ ಅವಧಿಯನ್ನು ಮುಂಬೈನಲ್ಲಿಯೇ ಕಳೆದಿದ್ದ ಸನ್ನಿ ಲಿಯೋನ್, ಮೇ ತಿಂಗಳ ಮಧ್ಯದಲ್ಲಿ ಪತಿ ಡೇನಿಯಲ್ ಹಾಗೂ ಮಕ್ಕಳಾದ ನಿಶಾ ಕೌರ್ ವೆಬರ್, ಆಶೆರ್ ಸಿಂಗ್ ವೆಬರ್ ಮತ್ತು ನೋಹ್ ಸಿಂಗ್ ವೆಬರ್ ಜತೆಗೆ ಲಾಸ್ ಏಂಜಲಿಸ್‌ಗೆ ತೆರಳಿದ್ದರು.

ಸಹಾಯಕ್ಕೆ ಯಾರೂ ಇಲ್ಲ
ಮುಂಬೈನಲ್ಲಿ ಮೂರು ಮಕ್ಕಳನ್ನು ನೋಡಿಕೊಂಡು ಇರುವುದು ಕಷ್ಟವಾಗುತ್ತಿತ್ತು. ನಾನು ಮನೆಗೆಲಸದವರ ಸಹಾಯ ಪಡೆದಿಲ್ಲ. ನನ್ನ ಜತೆ ಒಬ್ಬರು ಅಜ್ಜಿ ಮಾತ್ರ ಇದ್ದು, ಮನೆಯ ಎಲ್ಲ ಕೆಲಸಗಳನ್ನೂ ನಾನು, ಅವರು ಮತ್ತು ಡೇನಿಯಲ್ ಹಂಚಿಕೊಂಡಿದ್ದೇವೆ. ಮಕ್ಕಳಿಗೆ ಅವರದೇ ಚಟುವಟಿಕೆಗಳಿರುತ್ತವೆ ಎಂದು ತಿಳಿಸಿದ್ದಾರೆ.

ಭವ್ಯ ಬಂಗಲೆ
ಲಾಸ್ ಏಂಜಲಿಸ್‌ನ ಶರ್ಮಾನ್ ಓಕ್ಸ್‌ನಲ್ಲಿ ಸನ್ನಿ ಮತ್ತು ಡೇನಿಯಲ್ ಭವ್ಯವಾದ ಬಂಗಲೆ ಹೊಂದಿದ್ದಾರೆ. 2017ರಲ್ಲಿ ಅವರು ಈ ಬಂಗಲೆ ಖರೀದಿಸಿದ್ದರು. ಮುಂಬೈನಲ್ಲಿ ಅವರು ಅಪಾರ್ಟ್‌ಮೆಂಟ್ ಕೂಡ ಖರೀದಿ ಮಾಡಿದ್ದಾರೆ.


Click it and Unblock the Notifications










