ಚಿತ್ರ ವಿಚಿತ್ರ ಮಾಸ್ಕ್, ಗ್ಲೌಸ್ ಧರಿಸಿದ ಸನ್ನಿ ಲಿಯೋನ್: ವಾಹ್ ಎಂದ ನೆಟ್ಟಿಗರು

ಮುಂಚಿನಿಂದಲೂ ಸನ್ನಿ ಲಿಯೋನಿ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯ. ಲಾಕ್‌ಡೌನ್ ಶುರುವಾದ ಮೇಲಂತೂ ಇನ್ನಷ್ಟು ಆಕ್ಟಿವ್ ಆಗಿಬಿಟ್ಟಿದ್ದಾರೆ.

ಮೊನ್ನೆಯಷ್ಟೆ ಲಾಕ್‌ಡೌನ್ ಮುಗಿದ ಮೇಲೆ ತಾನು ಮಾಡಬೇಕೆಂದಿರುವ ಕೆಲಸಗಳ ಪಟ್ಟಿ ಹಾಕಿದ್ದ ಸನ್ನಿ ಲಿಯೋನ್ ಈಗ ಚಿತ್ರ ವಿಚಿತ್ರ ಮಾಸ್ಕ್ ಮತ್ತು ಗ್ಲೌಸ್‌ಗಳನ್ನು ಹಾಕಿಕೊಂಡು ಚಿತ್ರಗಳನ್ನು ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

ಸನ್ನಿ ಲಿಯೋನ್ ತಮಾಷೆಗೆಂದು ಹಾಕಿದ ಚಿತ್ರಗಳು ನೆಟ್ಟಿಗರಿಗೆ ಇಷ್ಟವಾಗಿದೆ. ಸನ್ನಿ ಲಿಯೋನ್ ಕ್ರಿಯಾಶೀಲತೆಗೆ ವಾಹ್ ಎಂದಿದ್ದಾರೆ. ವಿವಿಧ ವಸ್ತುಗಳನ್ನೇ ಅವರು ಮಾಸ್ಕ್ ಹಾಗೂ ಗ್ಲೌಸ್ ಆಗಿ ಧರಿಸಿ ಕೆಲವು ಚಿತ್ರಗಳನ್ನು ಟ್ವಿಟ್ಟರ್, ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದಾರೆ.

ಡೈಪರ್ ಅನ್ನೇಕೆ ತಲೆಗೆ ಸುತ್ತಿಕೊಂಡರು ಸನ್ನಿ

ಡೈಪರ್ ಅನ್ನೇಕೆ ತಲೆಗೆ ಸುತ್ತಿಕೊಂಡರು ಸನ್ನಿ

ತಮ್ಮ ಮಗು ಧರಿಸುವ ಡೈಪರ್ ಅನ್ನು ಸನ್ನಿ ಲಿಯೋನ್ ಮಾಸ್ಕ್‌ ನಂತೆ ಧರಿಸಿ, ಬಾಕ್ಸಿಂಗ್‌ ಗ್ಲೌಸ್ ಅನ್ನು ಧರಿಸಿ ಕೊರೊನಾದಿಂದ ಹೀಗೂ ಬಚಾವಾಗಬಹುದಾ? ಎಂದು ಪ್ರಶ್ನೆ ಮಾಡಿದ್ದಾರೆ ಸನ್ನಿ ಲಿಯೋನಿ.

ಸಿಂಹದ ಮುಖವಾಡವನ್ನು ಮಾಸ್ಕ್ ಎನ್ನಬಹುದೇ?

ಸಿಂಹದ ಮುಖವಾಡವನ್ನು ಮಾಸ್ಕ್ ಎನ್ನಬಹುದೇ?

ಮತ್ತೊಂದು ಚಿತ್ರದಲ್ಲಿ ಮಗುವಿನ ಸಣ್ಣ ಆಟಿಕೆಗಳನ್ನೇ ಬೆರಳಿಗೆ ಹಾಕಿಕೊಂಡು ಗ್ಲೌಸ್ ಮಾಡಿಕೊಂಡಿರುವ ಸನ್ನಿ, ಸಿಂಹದ ಮುಖವಾಡವನ್ನು ಮಾಸ್ಕ್‌ ನಂತೆ ಧರಿಸಿದ್ದಾರೆ.

ಸ್ಪೈಡರ್ ಮನ್ ಮುಖವಾಡವೇ ಸನ್ನಿಗೆ ಮಾಸ್ಕ್

ಸ್ಪೈಡರ್ ಮನ್ ಮುಖವಾಡವೇ ಸನ್ನಿಗೆ ಮಾಸ್ಕ್

ಮತ್ತೊಂದು ಚಿತ್ರದಲ್ಲಿ ಸ್ಪೈಡರ್ ಮನ್ ಮುಖವಾಡವನ್ನು ಮುಖಕ್ಕೆ ಮಾಸ್ಕ್‌ ನಂತೆ ಧರಿಸಿದ್ದಾರೆ. ಹಿಂದೆ ಸೂಪರ್‌ ಮನ್ ಧರಿಸುವಂತೆ ಉದ್ದನೆಯ ಬಟ್ಟೆಯನ್ನೂ ಕಟ್ಟಿಕೊಂಡಿದ್ದಾರೆ. ಮತ್ತೊಂದು ಚಿತ್ರದಲ್ಲಿ ಮಕ್ಕಳ ಟೆಂಟ್‌ನಲ್ಲಿ ಗುಬ್ಬಿಯಂತೆ ಸೇರಿಕೊಂಡುಬಿಟ್ಟಿದ್ದಾರೆ.

ಸನ್ನಿ ಲಿಯೋನ್ ಗೆ ಮೂರು ಮಂದಿ ಮಕ್ಕಳು

ಸನ್ನಿ ಲಿಯೋನ್ ಗೆ ಮೂರು ಮಂದಿ ಮಕ್ಕಳು

ಸನ್ನಿ ಲಿಯೋನ್ ಮತ್ತು ಡ್ಯಾನಿಯಲ್ ವೆಬರ್ ದಂಪತಿಗೆ ಮೂರು ಮಂದಿ ಮಕ್ಕಳು, ಅವರನ್ನೂ ಸೇರಿದಂತೆ ಎಲ್ಲರೂ ಲಾಕ್‌ಡೌನ್ ನಲ್ಲಿದ್ದಾರೆ. ಲಾಕ್‌ಡೌನ್ ಮುಗಿದ ಕೂಡಲೇ ಮಕ್ಕಳನ್ನು ಮೊದಲು ಶಾಲೆಗೆ ಕಳುಹಿಸಬೇಕು ಎಂದು ಸನ್ನಿ ಲಿಯೋನ್ ಮೊನ್ನೆಯಷ್ಟೆ ಹೇಳಿದ್ದರು.

More from Filmibeat

English summary
Actress Sunny Leone wearing different types of Masks and glows. Sunny Leone posted pictures on her Instagram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X