For Quick Alerts
  ALLOW NOTIFICATIONS  
  For Daily Alerts

  ಕಣ್ಣೀರಿಟ್ಟು ಭಾವುಕರಾದ ಸನ್ನಿ ಲಿಯೋನ್.! ಕಾರಣವೇನು.?

  By Bharath Kumar
  |
  ಕಣ್ಣೀರಿಟ್ಟು ಭಾವುಕಳಾದ ಫೇಮಸ್ ನಟಿ | Filmibeat Kannada

  ಮಾಜಿ ನೀಲಿತಾರೆ ಸನ್ನಿ ಲಿಯೋನ್ ಭಾರತಕ್ಕೆ ಬಂದ ನಂತರ ಬಾಲಿವುಡ್, ತೆಲುಗು, ತಮಿಳು ಚಿತ್ರರಂಗ ಸೇರಿದಂತೆ ಬಹುಭಾಷೆಯಲ್ಲಿ ತಮ್ಮ ಸಿನಿಮಾಗಳನ್ನ ಮಾಡ್ತಿದ್ದಾರೆ. ತಮ್ಮ ಹಾಟ್ ಅಭಿನಯದ ಮೂಲಕ ಚಿತ್ರಪ್ರೇಮಿಗಳನ್ನ ರಂಜಿಸುತ್ತಿದ್ದಾರೆ.

  ಇಂತಹ ಸನ್ನಿ ಈಗ ಕಣ್ಣೀರಿಟ್ಟು ತಮ್ಮ ನೋವನ್ನ ಜನರ ಮುಂದಿಟ್ಟಿದ್ದಾರೆ. ಹೌದು, ತಮ್ಮ ಇನ್ಸ್ಟಾಗ್ರಾಮ್ ಮತ್ತು ಟ್ವಿಟ್ಟರ್ ಅಕೌಂಟ್ ನಲ್ಲಿ ಭಾವುಕರಾಗಿರುವ ಕುರಿತು ಒಂದು ಫೋಟೋ ಹಾಕಿರುವ ಸನ್ನಿ, ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.

  ಈಕೆಯೇ ನೋಡಿ 'ಜೂನಿಯರ್ ಸನ್ನಿ ಲಿಯೋನ್'ಈಕೆಯೇ ನೋಡಿ 'ಜೂನಿಯರ್ ಸನ್ನಿ ಲಿಯೋನ್'

  ಸನ್ನಿ ಲಿಯೋನ್ ಕಣ್ಣೀರಿಟ್ಟಿರುವುದಕ್ಕೆ ಸ್ಪಷ್ಟ ಕಾರಣ ನೀಡಿಲ್ಲವಾದರೂ, ಇದನ್ನ ಗಮನಿಸಿ ಅಭಿಮಾನಿಗಳು ಬಗೆ ಬಗೆಯ ಕಾರಣಗಳನ್ನ ನೀಡಿದ್ದಾರೆ. ಅದ್ರೆ, ತಮ್ಮ ಹಿಂದಿನ ಜೀವನವನ್ನ ನೆನೆದು ಕಂಬಿನಿ ಮಿಡಿದಿದ್ದಾರೆ ಎಂಬುವುದು ಅವರು ಹಾಕಿರುವ ವಿವರಣೆಯಲ್ಲಿ ತಿಳಿದಿದೆ.

  ''ನನ್ನ ಹೃದಯ ಈ ರಾತ್ರಿ ಸಾವಿರ ಬಾರಿ ಛಿದ್ರವಾಗಿದೆ. ಬಹುಶಃ ಒಂದು ಸಾವಿರ ಸಲ ಕಣ್ಣೀರು ಹಾಕಿರಬಹುದು. ನನ್ನ ಹಳೆಯ ದಿನಗಳನ್ನ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇದ್ಯಾವುದು ನನ್ನ ಜೀವನದಲ್ಲಿ ಹಿಂತಿರುಗಿ ಬರುವುದಿಲ್ಲ. ಆದ್ರೆ, ನನ್ನ ಮನಸ್ಸಿನಲ್ಲಿ ಸದಾ ಕಾಡುತ್ತೆ'' ಎಂದು ಬರೆದುಕೊಂಡಿದ್ದಾರೆ.

  21ನೇ ವಯಸ್ಸಿನಲ್ಲಿ ಸನ್ನಿ ಲಿಯೋನ್ ಎದುರಿಸಿದ್ದಳು ಗಂಭೀರ ಸಮಸ್ಯೆ.!21ನೇ ವಯಸ್ಸಿನಲ್ಲಿ ಸನ್ನಿ ಲಿಯೋನ್ ಎದುರಿಸಿದ್ದಳು ಗಂಭೀರ ಸಮಸ್ಯೆ.!

  ಸದ್ಯ, ಸನ್ನಿ ಲಿಯೋನ್ 'ಕರೆನ್ಜಿತ್ ಕೌರ್' ಎಂಬ ಹೆಸರಿನಲ್ಲಿ ತಮ್ಮ ಬಯೋಪಿಕ್ ಮಾಡ್ತಿದ್ದಾರೆ. ಈ ಚಿತ್ರದಲ್ಲಿ ತನ್ನ ಬಾಲ್ಯ, ತಾನು ನೀಲಿ ಪ್ರಪಂಚಕ್ಕೆ ಹೋಗಿದ್ದು ಯಾಕೆ.? ಅಲ್ಲಿ ಅನುಭವಿಸಿದ ಕಷ್ಟ, ನಂತರ ಬಾಲಿವುಡ್ ಗೆ ಹೇಗೆ ಬಂದರು....ಎಂಬುದನ್ನ ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ.

  ಅದರ ಜೊತೆ ದಕ್ಷಿಣ ಭಾರತದ 'ವೀರಾಮಹಾದೇವಿ' ಎಂಬ ಐತಿಹಾಸಿಕ ಚಿತ್ರದಲ್ಲಿ ನಟಿಸುತ್ತಿದ್ದು, ತಮಿಳು, ತೆಲುಗು, ಹಿಂದಿ, ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಲಿದೆ.

  English summary
  Sunny Leone Writes Emotional Note To Her Former Self, Karenjit Kaur Vohra. Born to Indian immigrants in Canada, Sunny Leone's original name - Karenjit Kaur Vohra - was inept for a career in erotic entertainment.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X