For Quick Alerts
  ALLOW NOTIFICATIONS  
  For Daily Alerts

  ಆನ್‌ಲೈನ್‌ನಲ್ಲಿ ಸನ್ನಿ ಲಿಯೋನ್ ಒಳ ಉಡುಪು ಹರಾಜು

  By Rajendra
  |

  ವಯಸ್ಕರ ಚಿತ್ರಗಳ ಮಾದಕ ತಾರೆ ಸನ್ನಿ ಲಿಯೋನ್ ಒಳ ಉಡುಪುಗಳು ಹರಾಜಿಗೆ ವೇದಿಕೆ ಸಿದ್ಧವಾಗಿದೆ. ಆಕೆಯ ಒಳ ಉಡುಪುಗಳಿಗೆ ಭರ್ಜರಿ ಬೆಲೆಯಂತೂ ಖಂಡಿತ ಸಿಗುತ್ತದೆ. ಆದರೆ ತಾರೆಯೊಬ್ಬಳ ಒಳ ಉಡುಪುಗಳನ್ನು ಹರಾಜಿಗೆ ಹಾಕುತ್ತಿರುವುದು ನಮ್ಮ ದೇಶದಲ್ಲಿ ಇದೇ ಮೊದಲು.

  ಕೆಲ ವರ್ಷಗಳ ಹಿಂದೆ ಹಾಲಿವುಡ್ ತಾರೆ ಚಾರ್ಲೈಜ್ ಥೆರಾನ್ ಎಂಬ ಬೆಡಗಿಯ ಒಳ ಉಡುಪುಗಳು ದಾಖಲೆ ಬೆಲೆಗೆ ಹರಾಜಾಗಿದ್ದವು. ಕೈರಾ ನೈಟ್ಲಿ, ಸುಸಾನ್ ಸರಂಡನ್ ಹಾಗೂ ರೀಸೆ ವಿತರ್‌ಸ್ಪೂನ್ ಎಂಬ ತಾರೆಯರ ಒಳ ಉಡುಪುಗಳು ಹರಾಜಿಗೆ ಹಾಕಲಾಗಿತ್ತು. ಇದರಿಂದ ಬಂದಂತಹ ಹಣವನ್ನು ಧರ್ಮಾರ್ಥ ಸಂಸ್ಥೆಗಳಿಗೆ ದಾನ ಮಾಡಲಾಗಿತ್ತು.

  ಸನ್ನಿ ಲಿಯೋನ್ ಒಳ ಉಡುಪುಗಳನ್ನು ಈಗ ಆನ್‌ಲೈನ್ ಮೂಲಕ ಹರಾಜಿಗೆ ಹಾಕಲಾಗುತ್ತಿದೆ. ಇದರಿಂದ ಬಂದಂತಹ ಹಣವನ್ನು ಧರ್ಮಾರ್ಥ ಸಂಸ್ಥೆಗೆ ನೀಡಲಾಗುತ್ತದಂತೆ. ಈ ಬಗ್ಗೆ ವ್ಇವರ ನೀಡಿರುವ ಜಿಸ್ಮ್ 2 ಚಿತ್ರದ ನಿರ್ಮಾಪಕಿ ಪೂಜಾ ಭಟ್., "ಈಗಾಗಲೆ ಸನ್ನಿ, ರಣದೀಪ್ ಹಾಗೂ ಅರುಣೋದಯ್ ಅವರ ಒಳ ಉಡುಪುಗಳನ್ನು ಹರಾಜಿಗೆ ಹಾಕಲಾಗಿದೆ" ಎಂದಿದ್ದಾರೆ.

  ಇದೆಲ್ಲಾ ಒಳ್ಳೆಯ ಕೆಲಸಕ್ಕಾಗಿ. ನೊಂದವರ ಕಣ್ಣೀರೊರೆಸುವ ಸಲುವಾಗಿ. ಒಳ ಉಡುಪುಗಳನ್ನೇ ಯಾಕೆ ಹರಾಜಿಗೆ ಇಡಬೇಕು ಎಂಬ ಪ್ರಶ್ನೆಗೆ ಪೂಜಾ ಭಟ್ ಉತ್ತರ ಹೀಗಿದೆ, "ಹಾಲಿವುಡ್ ತಾರೆಗಳ ಮಾದರಿಯಲ್ಲಿ ಇದೊಂದು ಹೊಸ ಪ್ರಯತ್ನ. ನನಗೂ ಚಾನ್ಸ್ ಸಿಕ್ಕಿದರೆ ಹಾಲಿವುಡ್ ನಟ ಜಾವೆರ್ ಬರ್ಡಮ್ಸ್‌ನ ಒಳ ಉಡುಪುಗಳನ್ನು ಹರಾಜಿನಲ್ಲಿ ಕೊಂಡುಕೊಳ್ಳುತ್ತೇನೆ" ಎಂದಿದ್ದಾರೆ.

  ತಮ್ಮ ಮಹತ್ವಾಕಾಂಕ್ಷಿ ಜಿಸ್ಮ್ 2 ಚಿತ್ರ ಬಿಡುಗಡೆಯಾವುದಕ್ಕೂ ಮುನ್ನ ಆ ಚಿತ್ರದಲ್ಲಿ ಬಳಸಿಕೊಂಡಿರುವ ಸಮಸ್ತ ಉಡುಗೆ ತೊಡುಗೆಗಳನ್ನು ಹರಾಜಾಕುವುದಾಗಿ ಪೂಜಾ ತಿಳಿಸಿದ್ದಾರೆ. ಪ್ರತಿ ಐಟಂ ಮೇಲೂ ತಾರೆಗಳ ಹಸ್ತಾಕ್ಷರ ಇರುತ್ತದೆ. ಹಾಗೆಯೇ ಇದು ಒರಿಜಿನಲ್ ಎಂಬುದಕ್ಕೆ ಸರ್ಟಿಫಿಕೇಟ್ ಕೂಡ ನೀಡಲಾಗುತ್ತದೆ ಎಂದಿದ್ದಾರೆ ಪೂಜಾ!

  ಕನ್ನಡಕ್ಕೆ ಸನ್ನಿ ಲಿಯೋನ್: ಸನ್ನಿ ಲಿಯೋನ್ ಪ್ರೇಮ್ 'ಅಡ್ಡ' ಚಿತ್ರದಲ್ಲಿ ಐಟಂ ಹಾಡಿನಲ್ಲಿ ಮೈ ಕುಣಿಸಲು ಒಪ್ಪಿದ್ದಾರೆ. ಪ್ರೇಮ್ ಹಾಗೂ ಮಹೇಶ್ ಬಾಬು ಸಂಗಮದ 'ಪ್ರೇಮ್ ಅಡ್ಡ' ಚಿತ್ರ ತಮಿಳಿನ 'ಸುಬ್ರಮಣ್ಯಪುರಂ'ನ ರೀಮೇಕ್. ಇಲ್ಲಿಯ ನೆಟಿವಿಟಿಗೆ ತಕ್ಕಂತೆ ಕೆಲವೊಂದು ದೃಶ್ಯಗಳನ್ನು ಬದಲಾಯಿಸಿ 'ಅಡ್ಡ' ಹೆಸರಿನಿಂದ ಬರುತ್ತಿದೆ. (ಏಜೆನ್ಸೀಸ್)

  English summary
  Bollywood film Jism 2 actress Sunny Leone's lingerie will be auctioned online for charity purpose said the director Pooja Bhatt. The director deciding to auction all the costumes of the cast of Jism 2 for a cause.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X