For Quick Alerts
  ALLOW NOTIFICATIONS  
  For Daily Alerts

  2000 ರೂಪಾಯಿ ಸಾಲ ಪಡೆದು ತೀರಿಸಿಲ್ಲ ಸನ್ನಿ ಲಿಯೋನಿ!

  |

  ಆಶ್ಚರ್ಯವಾದರೂ ಸತ್ಯ ಸನ್ನಿ ಲಿಯೋನಿ ಆನ್‌ಲೈನ್‌ನಲ್ಲಿ ಎರಡು ಸಾವಿರ ರುಪಾಯಿ ಸಾಲ ಪಡೆದಿದ್ದಾರೆ. ಆದರೆ ಆ ಸಾಲವನ್ನು ಅವರು ತೀರಿಸಿಲ್ಲ. ಇದರಿಂದಾಗಿ ಅವರ ಸಿಬಿಲ್ ಸ್ಕೋರ್ ಪಾತಾಳ ಮುಟ್ಟಿದೆ!

  ಸನ್ನಿ ಲಿಯೋನಿ ಹೆಸರಲ್ಲಿ ಆನ್‌ಲೈನ್‌ನಲ್ಲಿ ಸಾಲ ನೀಡಲಾಗಿರುವುದು ನಿಜ ಆದರೆ ಸನ್ನಿ ಬಯಸಿ ಸಾಲ ಪಡೆದಿಲ್ಲ. ಬದಲಿಗೆ ಯಾರೊ ಸನ್ನಿ ಹೆಸರಲ್ಲಿ ಮೋಸ ಮಾಡಿ ಸಾಲ ಪಡೆದಿದ್ದಾರೆ. ಇದರಿಂದ ಸನ್ನಿ ಲಿಯೋನಿಯ ಸಿಬಿಲ್ ಸ್ಕೋರ್ ತೀವ್ರವಾಗಿ ಕುಸಿದಿದೆ.

  ಈ ಬಗ್ಗೆ ಟ್ವೀಟ್ ಮಾಡಿರುವ ಸನ್ನಿ ಲಿಯೋನಿ, ''ಯಾರೋ ನನ್ನ ಪ್ಯಾನ್‌ ನಂಬರ್ ಬಳಸಿ 2000 ರೂ. ಆನ್‌ಲೈನ್‌ನಲ್ಲಿ ಸಾಲ ಪಡೆದಿದ್ದಾರೆ. ಆ ಸಾಲವನ್ನು ತೀರಿಸಿಲ್ಲ. ಇದರಿಂದ ನನ್ನ ಸಿಬಿಲ್ ಸ್ಕೋರ್ ದೊಡ್ಡ ಮಟ್ಟದಲ್ಲಿ ಹೊಡೆತ ತಿಂದಿದೆ. ಯಾರದ್ದೋ ಪ್ಯಾನ್‌ ಸಂಖ್ಯೆಗೆ ಇಂಡಿಯಾ ಬುಲ್ಸ್ ಹೇಗೆ ಸಾಲ ನೀಡಬಲ್ಲದು, ಇದನ್ನು ಸರಿ ಮಾಡಿ'' ಎಂದು ಖಾರವಾಗಿಯೇ ಹೇಳಿದ್ದರು.

  ಬಳಿಕ ಮತ್ತೊಂದು ಟ್ವೀಟ್‌ನಲ್ಲಿ ಇಂಡಿಯಾ ಬುಲ್ಸ್‌ನವರು ನನ್ನ ಸಿಬಿಲ್ ಸ್ಕೋರ್ ಅನ್ನು ಸರಿ ಮಾಡಿದ್ದಾರೆ, ಹೀಗೆ ಸಮಸ್ಯೆ ಆಗಿರುವ ಇತರರಿಗೂ ಸಹಾಯ ಮಾಡುತ್ತೀರೆಂಬ ವಿಶ್ವಾಸವಿದೆ ಎಂದು ಇಂಡಿಯಾ ಬುಲ್ಸ್ ಸೆಕ್ಯೂರಿಟಿಯ ಪಾಲುದಾರಿಕೆ ಸಂಸ್ಥೆಗೆ 'ಧನಿ'ಗೆ ಟ್ವೀಟ್ ಮಾಡಿದ್ದಾರೆ ಸನ್ನಿ ಲಿಯೋನ್.

  ಸನ್ನಿ ಲಿಯೋನ್ ಮಾತ್ರವೇ ಅಲ್ಲ ಹಲವರು ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಧನಿಯಲ್ಲಿ ಪ್ಯಾನ್‌ ನಂಬರ್‌ಗೆ ಲೋನ್ ನೀಡಲಾಗುತ್ತಿದ್ದು, ಹಲವರ ಪ್ಯಾನ್ ಸಂಖ್ಯೆಗಳು ದುರುಪಯೋಗವಾಗಿ ಸಾಲ ಪಡೆಯಲಾಗಿದೆ. ಧನಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಲವು ದೂರುಗಳು ಬಂದಿವೆ.

  ಸನ್ನಿ ಲಿಯೋನ್ ಬಾಲಿವುಡ್‌ನ ಸಿರಿವಂತ ನಟಿಯರಲ್ಲಿ ಒಬ್ಬರು. ಅವರಿಗೆ ಸಾಲ ಪಡೆವ ಅವಶ್ಯಕತೆಯೇನೂ ಇಲ್ಲ. ಅಮೆರಿಕದ ಶ್ರೀಮಂತ ಉದ್ಯಮಗಳಲ್ಲಿ ಒಂದಾದ ಪೋರ್ನ್ ಉದ್ಯಮದಲ್ಲಿದ್ದ ಸನ್ನಿ ಲಿಯೋನ್ ಟಾಪ್ ಪೋರ್ನ್ ನಟಿಯಾಗಿ ಸಾಕಷ್ಟು ಸಂಪಾದಿಸಿದ್ದರು. ಅವರದ್ದೇ ಆದ ವೆಬ್‌ಸೈಟ್‌ಗಳನ್ನು ಸನ್ನಿ ಈಗಲೂ ಹೊಂದಿದ್ದಾರೆ. ಇದರಿಂದಲೇ ಲಕ್ಷಾಂತರ ಹಣವನ್ನು ದಿನವೊಂದಕ್ಕೆ ಸನ್ನಿ ಸಂಪಾದಿಸುತ್ತಾರೆ.

  ಅಮೆರಿಕದ ಲಾಸ್‌ ಎಂಜಲ್ಸ್‌ನಲ್ಲಿ ಹಾಲಿವುಡ್‌ನ ಗಣ್ಯರು ವಾಸಿಸುವ ಬೆವರ್ಲಿ ಹಿಲ್ಸ್‌ನಿಂದ ತುಸುವೇ ದೂರದಲ್ಲಿ ಸನ್ನಿ ಲಿಯೋನ್ ನಿವಾಸವಿದೆ. ಈ ಐಶಾರಾಮಿ ನಿವಾಸ ಮಾತ್ರವೇ ಅಲ್ಲದೆ, ಮುಂಬೈನಲ್ಲಿ ಸಹ ಇತ್ತೀಚೆಗೆ ಐಶಾರಾಮಿ ಅಪಾರ್ಟ್‌ಮೆಂಟ್ ಒಂದನ್ನು ಸನ್ನಿ ಲಿಯೋನಿ ಖರೀದಿಸಿದ್ದಾರೆ.

  ಪೋರ್ನ್ ಉದ್ಯಮದಿಂದ ಹೊರಗೆ ಬಂದಿರುವ ಸನ್ನಿ ಲಿಯೋನ್ ಬಾಲಿವುಡ್‌ನಲ್ಲಿ ಕೆಲವು ವರ್ಷಗಳಿಂದ ಸಕ್ರಿಯರಾಗಿದ್ದು, ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಕೆಲವು ಸಿನಿಮಾಗಳ ಐಟಂ ಹಾಡುಗಳಲ್ಲಿ ನರ್ತಿಸಿದ್ದಾರೆ. ಇದೀಗ 'ಅನಾಮಿಕ', 'ಒಎಂಜಿ (ಓ ಮೈ ಗೋಸ್ಟ್)' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಇತರೆ ಭಾಷೆಯ ಸಿನಿಮಾಗಳಾದ 'ಪಟ್ಟಾ', 'ಸಿಂಡ್ರೆಲಾ', 'ವೀರಮಹಾದೇವಿ' ಸಿನಿಮಾಗಳಲ್ಲಿ ಸನ್ನಿ ಲಿಯೋನ್ ನಟಿಸಲಿದ್ದಾರೆ.

  English summary
  Actress Sunny Leone's PAN number miss used to get 2000 rs loan. She upset that her CIBIL score crashed and complaint to institution which gave loan on her PAN number.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X