For Quick Alerts
  ALLOW NOTIFICATIONS  
  For Daily Alerts

  'ಆದಿಪುರುಷ್‌'ನಲ್ಲಿ ರಾಮನಾಗಿ ಪ್ರಭಾಸ್, ಲಕ್ಷ್ಮಣನಾಗಿ ಯಾರು? ಇಲ್ಲಿದೆ ಮಾಹಿತಿ

  |

  ನಟ ಪ್ರಭಾಸ್ ಈಗಾಗಲೇ 'ಆದಿಪುರುಷ್' ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. 'ಆದಿಪುರುಷ್' ಸಿನಿಮಾ ಭಾರತದ ಅತಿ ಹೆಚ್ಚು ಬಜೆಟ್ ನ ಸಿನಿಮಾ ಎಂಬ ಖ್ಯಾತಿಯನ್ನು ಗಳಿಸಲಿದೆ.

  'ಆದಿಪುರುಷ್' ಸಿನಿಮಾ ಮೂಲಕ ರಾಮಾಯಣದ ಕತೆಯನ್ನು ಮತ್ತೊಮ್ಮೆ ಭಾರಿ ಅದ್ಧೂರಿ ಹಿನ್ನೆಲೆ ಮೂಲಕ ಹೇಳಲು ಹೊರಟಿದ್ದಾರೆ ನಿರ್ದೇಶಕ ಓಂ ರಾವತ್. ಈ ಸಿನಿಮಾದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಸಿನಿಮಾ ಪರದೆ ದಾಟಿ ಬಂತು 'ಸ್ಟಾರ್ ನಟರ ರೌಡಿಸಂ'ಸಿನಿಮಾ ಪರದೆ ದಾಟಿ ಬಂತು 'ಸ್ಟಾರ್ ನಟರ ರೌಡಿಸಂ'

  ಪ್ರಭಾಸ್ ರಾಮನಾಗಿ, ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಸಿನಿಮಾ ತಂಡ ಈಗಾಗಲೇ ಮಾಹಿತಿ ನೀಡಿದೆ. ಆದರೆ ಲಕ್ಷ್ಮಣನ ಪಾತ್ರದಲ್ಲಿ ಹಾಗೂ ಸೀತೆಯ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ ಈಗ ಆ ಮಾಹಿತಿ ಹೊರಬಿದ್ದಿದೆ.

  ಲಕ್ಷ್ಮಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಸನ್ನಿ ಸಿಂಗ್

  ಲಕ್ಷ್ಮಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಸನ್ನಿ ಸಿಂಗ್

  ಲಕ್ಷ್ಮಣನ ಪಾತ್ರದಲ್ಲಿ ಬಾಲಿವುಡ್ ನಟ ಸನ್ನಿ ಸಿಂಗ್ ನಟಿಸುವುದು ಖಾತ್ರಿಯಾಗಿದೆ. ಸನ್ನಿ ಸಿಂಗ್ ಇಂದಿನಿಂದ ಆದಿಪುರುಷ್ ತಂಡವನ್ನು ಸೇರಿಕೊಂಡಿದ್ದು, ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಪ್ರಭಾಸ್ ಜೊತೆ ಮೊದಲ ಬಾರಿಗೆ ಸನ್ನಿ ಸಿಂಗ್ ತೆರೆ ಹಂಚಿಕೊಳ್ಳಲಿದ್ದಾರೆ.

  ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಸನ್ನಿ ಸಿಂಗ್

  ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಸನ್ನಿ ಸಿಂಗ್

  'ಆದಿಪುರುಷ್' ಓಂ ರಾವತ್ ಅವರು ಸಾಮಾಜಿಕ ಜಾಲತಾಣದಲ್ಲಿ ಸನ್ನಿ ಸಿಂಗ್ ಅನ್ನು ಆದಿಪುರುಷ್ ತಂಡಕ್ಕೆ ಸ್ವಾಗತಿಸಿ ಪೋಸ್ಟ್ ಹಾಕಿದ್ದಾರೆ. ಸನ್ನಿ ಸಿಂಗ್ ಈ ಹಿಂದೆ 'ಸೋನು ಕಿ ಟಿಟ್ಟು ಕಿ ಸ್ವೀಟಿ', 'ಪ್ಯಾರ್ ಕೆ ಪಂಚ್ ನಾಮಾ' ಸಿನಿಮಾಗಳಲ್ಲಿ ನಟಿಸಿದ್ದರು.

  ಬಾಹುಬಲಿ, ಕುರುಕ್ಷೇತ್ರ ನಂತರ 'ಕರ್ಣ'ನ ಸಿನಿಮಾ: ಐದು ಭಾಷೆಯಲ್ಲಿ ರಿಲೀಸ್ಬಾಹುಬಲಿ, ಕುರುಕ್ಷೇತ್ರ ನಂತರ 'ಕರ್ಣ'ನ ಸಿನಿಮಾ: ಐದು ಭಾಷೆಯಲ್ಲಿ ರಿಲೀಸ್

  ಸೀತೆ ಪಾತ್ರದಲ್ಲಿ ಯಾರು?

  ಸೀತೆ ಪಾತ್ರದಲ್ಲಿ ಯಾರು?

  'ಸೀತೆ' ಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಎಂಬುದು ಇನ್ನೂ ಖಾತ್ರಿಯಾಗಿಲ್ಲವಾದರೂ ಈಗಾಗಲೇ ಕೆಲವು ಹೆಸರುಗಳು ಹರಿದಾಡುತ್ತಿವೆ. ಕ್ರಿತಿ ಸೆನನ್ ಹಾಗೂ ಕಿಯಾರಾ ಅಡ್ವಾಣಿ ಹೆಸರು ಮುಂಚೂಣಿಯಲ್ಲಿದೆ. ಜೊತೆಗೆ ಶ್ರದ್ಧಾ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಹೆಸರೂ ಸಹ ಕೇಳಿಬರುತ್ತಿದೆ.

  ದೇವರಾಣೆ ನಾನು ಇದನ್ನೆಲ್ಲ ಮಾಡಿಲ್ಲ ಎಂದ ವಿವಾದಿತ ನಿರ್ಮಾಪಕ | Filmibeat Kannada
  ಭೂಷಣ್ ಕುಮಾರ್ ನಿರ್ಮಿಸುತ್ತಿರುವ ಸಿನಿಮಾ

  ಭೂಷಣ್ ಕುಮಾರ್ ನಿರ್ಮಿಸುತ್ತಿರುವ ಸಿನಿಮಾ

  'ಆದಿಪುರುಷ್' ಸಿನಿಮಾವು ಭಾರತದ ಅತಿ ಹೆಚ್ಚು ಬಜೆಟ್ ನ ಸಿನಿಮಾ ಎಂಬ ದಾಖಲೆ ನಿರ್ಮಿಸಲಿದ್ದು, ಸುಮಾರು 600 ಕೋಟಿಗೂ ಹೆಚ್ಚು ಹಣ ಸಿನಿಮಾಕ್ಕಾಗಿ ವ್ಯಯವಾಗಲಿದೆ. ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ಭೂಷಣ್ ಕುಮಾರ್. ಸಿನಿಮಾದಲ್ಲಿ ನಟ ಸೈಫ್ ಅಲಿ ಖಾನ್ ರಾವಣನ ಪಾತ್ರ ನಿರ್ವಹಿಸಲಿದ್ದಾರೆ.

  English summary
  Actor Sunny Singh playing Lakshman's character in Adipurush movie along with Prabhas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X