ಸಹಜ ಸ್ಥಿತಿಗೆ ಮರಳುತ್ತಿರುವ ಚೀನಾದಲ್ಲಿ ರಿಲೀಸ್ ಆಗುತ್ತಿದೆ ಹೃತಿಕ್ ರೋಷನ್ ಸಿನಿಮಾ
ಇಡೀ ವಿಶ್ವವನ್ನೆ ಕಟ್ಟಿಹಾಕಿರುವ ಕಿಲ್ಲರ್ ಕೊರೊನಾ ವೈರಸ್ ಹಾವಳಿಯ ನಂತರ ಚೀನಾ ನಿದಾನವಾಗಿ ಚೇತರಿಕೊಳ್ಳುತ್ತಿದ್ದೆ. ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್ ಸಾವಿರಾರು ಜನರನ್ನು ಬಲಿ ಪಡೆದು ಈಗ ಇಡೀ ವಿಶ್ವವನ್ನೆ ಆವರಿಸಿದೆ.
Recommended Video
ಕೊರೊನಾ ವೈರಸ್ ನಿಂದ ತತ್ತರಿಹೋಗಿದ್ದ ಚೀನಾ ಈಗ ಸಹಜ ಸ್ಥಿತಿಗೆ ಮರಳುತ್ತಿದೆ. ಕೊರೊನಾ ವೈರಸ್ ಹಾವಳಿಯಿಂದ ಜಗತ್ತಿನಾದ್ಯಂತ ಹಲವಾರು ಉದ್ಯಮಗಳು ನೆಲಕಚ್ಚಿವೆ. ಇದರಲ್ಲಿ ಸಿನಿಮಾ ಉದ್ಯಮ ಕೂಡ ಒಂದು. ಜಗತ್ತಿನಾದ್ಯಂತ ಸಿನಿಮಾ ಉದ್ಯಮ ಸಂಪೂರ್ಣ ಬಂದ್ ಆಗಿದೆ. ಚಿತ್ರೀಕರಣ, ಪ್ರದರ್ಶನ ಸೇರಿದಂತೆ ಸಿನಿಮಾಗೆ ಸಂಬಂಧಿಸಿದ ಯಾವುದೆ ಚಟುವಟಿಗಳು ನಡೆಯುತ್ತಿಲ್ಲ.
ಆದ್ರೀಗ ಚೇತರಿಕೊಳ್ಳುತ್ತಿರುವ ಚೀನಾದಲ್ಲಿ ಚಿತ್ರ ಮಂದಿರಗಳು ನಿದಾನವಾಗಿ ಓಪನ್ ಆಗುತ್ತಿವೆ. ಕೊರೊನಾದಿಂದ ಸಹಜ ಸ್ಥಿತಿಗೆ ಬಂದಮೇಲೆ ಕೆಲವು ಹಾಲಿವುಡ್ ಸಿನಿಮಾಗಳನ್ನು ಪ್ರದರ್ಶನ ಮಾಡಲು ಚೀನಾ ಸಜ್ಜಾಗಿದೆ. ವಿಶೇಷ ಅಂದರೆ ಚೀನಾದಲ್ಲಿ ಹಿಂದಿ ಸಿನಿಮಾ ಕೂಡ ರಿಲೀಸ್ ಆಗಲಿದೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.

ಹೌದು, ಕೊರೊನಾದಿಂದ ಚೇತರಿಕೆಯ ನಂತರ ಮೊದಲ ಬಾಲಿವುಡ್ ಸಿನಿಮಾ ಚೀನಾದಲ್ಲಿ ರಿಲೀಸ್ ಆಗುತ್ತಿದೆ. ಹೃತಿಕ್ ರೋಷನ್ ಅಭಿನಯದ ಸೂಪರ್ ಹಿಟ್ 'ಸೂಪರ್ 30' ಸಿನಿಮಾ ಚೀನಾದಲ್ಲಿ ರಿಲೀಸ್ ಆಗಲು ಸಜ್ಜಾಗಿದೆ. ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬಂದ ನಂತರ ಸೂಪರ್ 30 ಸಿನಿಮಾ ಚೀನಾದಲ್ಲಿ ರಿಲೀಸ್ ಆಗಲು ತಯಾರಿ ಮಾಡಿಕೊಂಡಿದೆ.
ಸೂಪರ್ 30 ಭಾವನಾತ್ಮಕ ಮತ್ತು ಸ್ಪೂರ್ತಿದಾಯಕ ಅಂಶಗಳನ್ನು ಹೊಂದಿರುವ ಸಿನಿಮಾ. ಹಾಗಾಗಿ ಚೀನಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ನಿರೀಕ್ಷೆ ಇಡಲಾಗಿದೆ. ಈಗಾಗಲೆ ರಿಲಯನ್ಸ್ ಎಂಟಟೈನ್ ಮೆಂಟ್ ಗ್ರೂಪ್ ನ ಸಿಇಒ ಶಿಬಾಶಿಶ್ ಸರ್ಕಾರ್ ಈಗಾಗಲೆ ಸಿನಿಮಾದ ಸೆನ್ಸಾರ್ ಶಿಪ್ ಅಪ್ಲೈ ಮಾಡಿರುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಆದರೆ ಯಾವಾಗ ರಿಲೀಸ್ ಆಗಲಿದೆ ಎನ್ನುವ ಬಗ್ಗೆ ಮಾಹಿತಿ ಬಹಿರಂಗ ಪಡಿಸಿಲ್ಲ.


Click it and Unblock the Notifications











