ಮೊದಲ ದಿನಕ್ಕಿಂತ ಹೆಚ್ಚಾಯ್ತು, 2ನೇ ದಿನದ 'ಸೂಪರ್ 30' ಕಲೆಕ್ಷನ್

'ಸೂಪರ್ 30' ಎಂಬ ಸುಂದರ ಸಿನಿಮಾಗೆ ದೊಡ್ಡ ಬೆಂಬಲ ಸಿಕ್ಕಿದೆ. ಮೊದಲ ದಿನಕ್ಕಿಂತ ಎರಡನೇ ದಿನ ಸಿನಿಮಾದ ಗಳಿಕೆ ಹೆಚ್ಚಾಗಿದೆ.

ಸಿನಿಮಾ ಬಿಡುಗಡೆಯಾದ ಮೊದಲ ದಿನ (ಶುಕ್ರವಾರ) 11.83 ಕೋಟಿ ಕಲೆಕ್ಷನ್ ಮಾಡಿತ್ತು. ಬಿಗ್ ಸ್ಟಾರ್ ಸಿನಿಮಾಗೆ ಈ ಸಂಖ್ಯೆ ಕೊಂಚ ಕಡಿಮೆಯೇ. ಆದರೆ, ಎರಡನೇ ದಿನ ಸಿನಿಮಾದ ಕಲೆಕ್ಷನ್ ಹೆಚ್ಚಾಗಿದೆ.

ಎರಡನೇ ದಿನ ವಾರಾಂತ್ಯದ ಪ್ರಯುಕ್ತ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗಿದೆ. ಹಾಗೆಯೇ, ಎರಡನೇ ದಿನ ಸಿನಿಮಾ ಕಲೆಕ್ಷನ್ ಕೂಡ ಜಾಸ್ತಿಯಾಗಿದೆ. ಶನಿವಾರ ಚಿತ್ರ 17 ರಿಂದ 18 ಕೋಟಿ ಗಳಿಕೆ ಮಾಡಿದೆ.

Super 30 hindi movie day 2 collection

ಸಿನಿಮಾಗೆ ಸಿಕ್ಕ ಪಾಸಿಟಿವ್ ರೆಸ್ಪಾನ್ಸ್ ಕಲೆಕ್ಷನ್ ಮೇಲೆ ಪರಿಣಾಮ ಬೀರಿದೆ. ಇದೇ ರೀತಿಯ ಕಲೆಕ್ಷನ್ ಮುಂದುವರೆದರೆ, ಚಿತ್ರತಂಡದ ಮುಖದಲ್ಲಿ ನಗು ಮೂಡಲಿದೆ. 'ಸೂಪರ್ 30' ಸಿನಿಮಾಗೆ 'ಕಬೀರ್ ಸಿಂಗ್' ಒಳ್ಳೆಯ ಸ್ಪರ್ಧೆ ನೀಡುತ್ತಿದೆ.

ಅಂದಹಾಗೆ, 'ಸೂಪರ್ 30' ಸಿನಿಮಾ ಬಿಹಾರದ ಅನಂತ್ ಕುಮಾರ್ ಅವರ ಕಥೆ. ಖ್ಯಾತ ಗಣಿತಜ್ಞ ಆಗಿರುವ ಅನಂತ್ ಕುಮಾರ್ ಅವರ ಜೀವನದ ಏಳು - ಬೀಳು, ಸಾಧನೆಯ ಕಥೆ ಚಿತ್ರದಲ್ಲಿದೆ. ಅನಂತ್ ಕುಮಾರ್ ತಮ್ಮ 'ಸೂಪರ್ 30' ಕಾರ್ಯಕ್ರಮದ ಮೂಲಕ ದೇಶಾದ್ಯಂತ ಜನಪ್ರಿಯತೆ ಪಡೆದಿದ್ದಾರೆ. IIT ಪ್ರವೇಶ ಪರೀಕ್ಷೆ ಬರೆಯಲು ಬಯಸುವ ಬಡ ವಿದ್ಯಾರ್ಥಿಗಳಿಗೆ ಆನಂದ್ ಉಚಿತವಾಗಿ ಪಾಠ ಮಾಡುತ್ತಾರೆ.

ಇನ್ನು, ಹೃತ್ತಿಕ್ ರೋಷನ್ ನಟನೆ ಸಿನಿಮಾ ಹೈಲೈಟ್ ಆಗಿದೆ. ಮೃಣಾಲ್ ಠಾಕೂರ್ ಸಿನಿಮಾದ ನಾಯಕಿಯಾಗಿದ್ದಾರೆ. ವಿಕಾಸ್ ಬಹ್ಲ ಸಿನಿಮಾದ ನಿರ್ದೇಶನ ಮಾಡಿದ್ದಾರೆ.

More from Filmibeat

English summary
Bollywood suprstar hrithik roshan starrer 'Super 30' movie has a decent Day 2 in box office. Saturday Super 30 collect ₹ 17 - 18 crore in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X